Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ ದಕ್ಷಿಣ ಉಪಚುನಾವಣೆ : ಶಾಂತಿಯುತ ಶೇ. 68.55 ರಷ್ಟು ಮತದಾನ

---Advertisement---

ದಾವಣಗೆರೆ, ಏಪ್ರಿಲ್‌ 10 : 107 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆಯು ನಿನ್ನೆ(ಏ.09) ಅತ್ಯಂತ ಶಾಂತಿಯುತವಾಗಿ ಜರುಗಿದ್ದು,  ಒಟ್ಟಾರೆ ಶೇ. 68.55 ರಷ್ಟು ಮತದಾನ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಉಪಚುನಾವಣೆಯಲ್ಲಿ ಪುರುಷ ಮತದಾರರ ಸಂಖ್ಯೆ 113339, ಮಹಿಳಾ ಮತದಾರರ ಸಂಖ್ಯೆ-117690, ತೃತೀಯ ಲಿಂಗ ಮತದಾರರ ಸಂಖ್ಯೆ 43 ಒಟ್ಟು 231072 ಇದ್ದು, ಇದರಲ್ಲಿ   ಪುರುಷ ಮತದಾರರ ಸಂಖ್ಯೆ 78290, ಮಹಿಳಾ ಮತದಾರರ ಸಂಖ್ಯೆ 79823 ತೃತೀಯ ಲಿಂಗ ಮತದಾರರ ಸಂಖ್ಯೆ 18 ಹೀಗೆ ಒಟ್ಟು ಮತ ಚಲಾಯಿಸಿದವರ ಸಂಖ್ಯೆ 158131 ಆಗಿರುತ್ತದೆ. ಒಟ್ಟಾರೆ ಶೇ. 68.55 ರಷ್ಟು ಮತದಾನವಾಗಿದೆ.

 

ಅತಿ ಹೆಚ್ಚು ಮತ್ತು ಅತಿ ಕಡಿಮೆ ಮತದಾನದ ಪ್ರಮಾಣ ದಾಖಲಾದ ವಿವರ:
ದಾವಣಗೆರೆ ಯರಗುಂಟೆ ಗೌರ್ನಮೆಂಟ್ ಅಪ್‌ಗ್ರೇಡೆಡ್ ಹೈಯರ್  ಪ್ರೈಮರಿ ಸ್ಕೂಲ್, ಕೊಠಡಿ ಸಂಖ್ಯೆ 1 ರಲ್ಲಿ ಪುರುಷ ಮತದಾರರು 397 ಮಹಿಳಾ ಮತದಾರರು 403 ತೃತೀಯ ಲಿಂಗ-0 ಒಟ್ಟು 800 ಮತದಾರರು ಇದ್ದು  343-ಪುರುಷ ಮತದಾರರು,  341-ಮಹಿಳಾ ಮತದಾರರು ಹಾಗೂ  0- ತೃತೀಯ ಮಹಿಳಾ ಮತದಾರರು ಹೀಗೆ ಒಟ್ಟು 684 ಮತದಾರರು ಮತಚಲಾಯಿಸಿ ಶೇ. 85.50% ರಷ್ಟು ಅತಿ ಹೆಚ್ಚು ಮತದಾನವಾಗಿದೆ.
ದಾವಣಗೆರೆ ದೇವರಾಜ್ ಅರಸು ಬಡಾವಣೆಯ ಅಪ್‌ಗ್ರೇಡೆಡ್ ಸ್ವಿಮ್ಮಿಂಗ್ ಪೂಲ್, ಕೊಠಡಿ ಸಂಖ್ಯೆ 1 ರಲ್ಲಿ ಪುರುಷ ಮತದಾರರು ಸಂಖ್ಯೆ 301, ಮಹಿಳಾ ಮತದಾರರ ಸಂಖ್ಯೆ 325, ತೃತೀಯ ಲಿಂಗ-0 ಒಟ್ಟು 626 ಮತದಾರರು ಇದ್ದು  129-ಪುರುಷ ಮತದಾರರು,  144-ಮಹಿಳಾ ಮತದಾರರು ಹಾಗೂ  0- ತೃತೀಯ ಮಹಿಳಾ ಮತದಾರರು ಹೀಗೆ ಒಟ್ಟು 273 ಮತದಾರರು ಮತಚಲಾಯಿಸಿ ಶೇ. 43.61%. ಅತಿ ಕಡಿಮೆ ಮತದಾನವಾಗಿದೆ.
ಕ್ಷೇತ್ರದಾದ್ಯಂತ ಸ್ಥಾಪಿಸಲಾಗಿದ್ದ ಎಲ್ಲಾ 284 ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ ಮತದಾನ ಪ್ರಕ್ರಿಯೆ ಸುಗಮವಾಗಿ
ಮುಕ್ತಾಯಗೊಂಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...