ದಾವಣಗೆರೆ ಸೌತ್ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್ ಕೌಂಟಿಂಗ್‌ನ ಮೊದಲ ರೌಂಡ್ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಟಿ. ಶ್ರೀನಿವಾಸ ದಾಸಕರಿಯಪ್ಪ 577 ಮತಗಳ ಲೀಡ್ ಪಡೆದಿದ್ದಾರೆ. ಅವರು 3711 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು 3,134 ಮತಗಳನ್ನು ಪಡೆದಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ 638 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಪೋಸ್ಟಲ್ ಬ್ಯಾಲೆಟ್‌ಗಳ ಎಣಿಕೆ ಪೂರ್ಣಗೊಂಡಿದ್ದು, ಅಂಗವಿಕಲರು ಹಾಗೂ 85 ವರ್ಷ ಮೇಲ್ಪಟ್ಟ 271 ಮತದಾರರು ತಮ್ಮ ಮತ ಹಕ್ಕು ಚಲಾಯಿಸಿರುವುದು ಗಮನಾರ್ಹವಾಗಿದೆ.ಇದಕ್ಕೆ ಮಧ್ಯೆ, ಮತಯಂತ್ರಗಳನ್ನು ಇರಿಸಿದ್ದ ಡಿಆರ್‌ಆರ್ ಕಾಲೇಜಿನ ಸ್ಟ್ರಾಂಗ್ ರೂಮ್ ಬಾಗಿಲು ತೆರೆಯುವ ವೇಳೆ ತಾಂತ್ರಿಕ ಸಮಸ್ಯೆ ಎದುರಾಯಿತು.

ಕೀಲಿಯಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ಚಿಲಕ ಮುರಿದು ಬಾಗಿಲು ತೆರೆಯಬೇಕಾದ ಪರಿಸ್ಥಿತಿ ಉಂಟಾಯಿತು.
ಮುಂದಿನ ರೌಂಡ್‌ಗಳ ಕೌಂಟಿಂಗ್ ನಡೆಯುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಠಿಣ ಪೈಪೋಟಿ ಮುಂದುವರಿದಿದೆ. ಅಂತಿಮ ರಿಸಲ್ಟ್‌ಗಾಗಿ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿದೆ.


















