ದಾವಣಗೆರೆ, ಮಾ.27 : 107 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕರ್ನಾಟಕ ವಿಧಾನಸಭೆ ಉಪಚುನಾವಣೆ-2026 ಗೆ ಸಂಬಂಧಿಸಿದಂತೆ, ಚುನಾವಣಾ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು (ನಮೂನೆ-7ಎ) ಚುನಾವಣಾಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಚುನಾವಣಾ ಕಣದಲ್ಲಿ ಒಟ್ಟು 25 ಅಭ್ಯರ್ಥಿಗಳು ಉಳಿದಿದ್ದು, ಅವರಿಗೆ ಹಂಚಿಕೆ ಮಾಡಲಾದ ಪಕ್ಷ ಮತ್ತು ಚಿಹ್ನೆಗಳ ವಿವರ ಇಂತಿದೆ:
ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು:
· ಕೆ.ಎಸ್. ಶಿವಕುಮಾರಪ್ಪ: ಆಮ್ ಆದ್ಮಿ ಪಾ̧ರ್ಟಿ- ಪೊರಕೆ
· ಶ್ರೀನಿವಾಸ. ಟಿ. ದಾಸಕರಿಯಪ್ಪ: ಭಾರತೀಯ ಜನತಾ ಪಾರ್ಟಿ – ಕಮಲ
· ಸಮರ್ಥ್ ಶಾಮನೂರು ಮಲ್ಲಿಕಾರ್ಜುನ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ – ಕೈ
ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು:
ಅನ್ಸರ್ ಕೊಡ್ಲಿಪೇಟೆ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಪ್ರೆಷರ್ ಕುಕ್ಕರ್, ಈರಣ್ಣ: ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಾರ್ಟಿ -ಸೀಟಿ̧̧ (ವಿಜಲ್), ಈಶ್ವರ ಶೇಂಗ: ಉತ್ತಮ ಪ್ರಜಾಕೀಯ ಪಕ್ಷ-ಅಂಚೆ ಪೆಟ್ಟಿಗೆ, ಖಾಜಾಮೊಹಿದ್ದೀನ್ ಗುಡಗೇರಿ: ಬ್ಲೂ ಇಂಡಿಯಾ ಪಾರ್ಟಿ -ಬ್ಯಾಟ್ಸ್‌ಮನ್, ಎಂ.ಪಿ. ದಾದಾಖಲಂದರ್: ಕಂಟ್ರಿ ಸಿಟಿಜನ್ ಪಾರ್ಟಿ -ತೆಂಗಿನ ತೋಟ, ಜಿ.ಎನ್. ಪ್ರಶಾಂತ್ ಕುಮಾರ್: ಜನತಾ ಚಳುವಳಿ
ಭಾರತ -ಬ್ರೀಫ್ ಕೇಸ್, ಸಿ.ಎಂ. ಶಾಬಾಜ್ ಖಾನ್: ಯಂಗ್ ಸ್ಟಾರ್ ಎಂಪವರ್‌ಮೆಂಟ್ ಪಾರ್ಟಿ-ಗ್ಯಾಸ್ ಸಿಲಿಂಡರ್, ಎಂ.ಜಿ. ಶ್ರೀಕಾಂತ್: ನವಭಾರತ ಸೇನಾ -ಗಣಕಯಂತ್ರ, ದಲಿತ ಶ್ರೀನಿವಾಸ್: ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ -ಲ್ಯಾಪ್‌ಟಾಪ್, ಸಯ್ಯದ್ ಇಮ್ಮಿಯಾಜ್: ಜನಹಿತ ಪಕ್ಷ -ದೂರದರ್ಶನ.
ಪಕ್ಷೇತರ ಅಭ್ಯರ್ಥಿಗಳು:
ಚುನಾವಣಾ ಕಣದಲ್ಲಿ ಒಟ್ಟು 12 ಪಕ್ಷೇತರ ಅಭ್ಯರ್ಥಿಗಳಿದ್ದು, ಖಾದರ ಆದಿಲ್ ಬಾಷ -ವಜ್ರ, ಗೌತಮ್ -ಬ್ಯಾಟು, ಟಿ. ಜಬೀನ ಆಪಾ -ಕಲ್ಲಂಗಡಿ, ಮನ್ಸೂರ್ ಅಲಿ ಯು.ಎಂ. – ಬೆಂಕಿ ಪೊಟ್ಟಣ, ಕೆ.ಹೆಚ್ ಮಹಬೂಬ್ -ಅಲಮಾರು, ಅಖಂಡ ಸಿ.ಎಂ. ಮಂಜುನಾಥಯ್ಯ ಸ್ವಾಮಿ, ಬ್ಯಾಟರಿ ಟಾರ್ಚ್, ಬಿ. ರಾಜಶೇಖರ್ -ತುತ್ತೂರಿ,
ಸಾಜಿದ್-ಕ್ಯಾಮೆರಾ, ಸಾಧಿಕ್ ಪೈಲ್ವಾನ್ -ಮೈಕ್, ಹೆಚ್. ಸುಬಾನ್ ಸಾಬ್ -ಮಿಕ್ಸಿ, ಸೈಯದ್ ಚಾಂದ್ ಪೀರ್ – ಕರಣೆ, ಮತ್ತು ಡಿ. ಸೈಯದ್ ರಿಯಾಜ್ -ದೂರವಾಣಿ ಇವರುಗಳಿಗೆ ಸ್ವತಂತ್ರ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಉಪಚುನಾವಣಾಧಿಕಾರಿಗಳು, ದಾವಣಗೆರೆ ಉಪ ವಿಭಾಗ ಇವರು ತಿಳಿಸಿದ್ದಾರೆ.







