ಸುದ್ದಿಒನ್, ದಾವಣಗೆರೆ, ನವೆಂಬರ್. 17 : ನಗರದ ಎಂಸಿಸಿ ಬಿ ಬ್ಲಾಕ್ ನಿವಾಸಿ ಹಾಗೂ ಮುದಗಲ್ ಮಠ ವಿಶ್ವನಾಥಯ್ಯ ಟ್ರೇಡರ್ಸ್ ಮಾಲೀಕರಾದ ಟಿ.ಎಂ. ವಿಶ್ವನಾಥಯ್ಯ (74 ವರ್ಷ) ಅವರು ಇಂದು ಬೆಳಿಗ್ಗೆ 6:00 ಗಂಟೆಗೆ ನಿಧನರಾಗಿದ್ದಾರೆ.
ನಗರದ ಪ್ರಸಿದ್ಧ ಅಡಿಕೆ ವರ್ತಕರಾಗಿದ್ದ ಅವರು, ತಮ್ಮ ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗ, ಸ್ನೇಹಿತರು ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಮಧ್ಯಾಹ್ನ 3:00 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ತದನಂತರ ಇಂದು ಸಂಜೆ 4:30ಕ್ಕೆ ಗ್ಲಾಸ್ ಹೌಸ್ ಪಕ್ಕದಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗಣ್ಯರು ಹಾಗೂ ಆಪ್ತರು ಸಂತಾಪ ಸೂಚಿಸಿದ್ದಾರೆ.











