ದಾವಣಗೆರೆ: ಹರಿಹರ ತಾಲ್ಲೂಕು ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿಗೆ ಬರುವ ಎಲ್ಲ ಸ್ಥಿರಾಸ್ತಿಗಳ 2026-27ನೇ ಸಾಲಿನ ಮಾರ್ಗದರ್ಶಿ ಸೂಚಿ ಮಾರುಕಟ್ಟೆ ಬೆಲೆಯನ್ನು (Guidance Value) ಪರಿಷ್ಕರಣೆ ಮಾಡಲಾಗಿದ್ದು, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದೆ.
ಪರಿಷ್ಕೃತ ಮಾರುಕಟ್ಟೆ ಬೆಲೆ ಕುರಿತು ಸಾರ್ವಜನಿಕರು ತಮ್ಮ ಲಿಖಿತ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು ನವೆಂಬರ್ 13ರಿಂದ ಮುಂದಿನ 15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ನಿಗದಿತ ಅವಧಿಯೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.
ಸ್ಥಿರಾಸ್ತಿಗಳ ಬೆಲೆ ಪರಿಷ್ಕರಣೆ ಕುರಿತ ವಿವರವಾದ ಮಾಹಿತಿಗಾಗಿ ಹಾಗೂ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಲು ಹರಿಹರ ತಾಲ್ಲೂಕು ಉಪನೋಂದಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವಂತೆ ಹರಿಹರ ಮಾರುಕಟ್ಟೆ ಮೌಲ್ಯಗಳ ಉಪ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಉಪ ನೊಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











