ದಾವಣಗೆರೆ: ಈಗಂತೂ ಲಂಚದ ಹಿಂದೆ ಸಾಕಷ್ಟು ಅಧಿಕಾರಿಗಳು ಬಿದ್ದಿದ್ದಾರೆ. ಯಾವೂ ಮಾಡುವ ಹುದ್ದೆಯಲ್ಲಿ ಎಲ್ಲೆಲ್ಲಿ ಲಂಚ ಸ್ವೀಕಾರ ಮಾಡುವುದಕ್ಕೆ ಅವಕಾಶವಿದೆಯೋ ಅಲ್ಲೆಲ್ಲಾ ಡಿಮ್ಯಾಂಡ್ ಇಟ್ಟು ಹಣ ವಸೂಲಿ ಮಾಡುತ್ತಾರೆ. ಅದು ಶಿಕ್ಷಣ ಸಂಸ್ಥೆಯಾದರೂ ಸರಿ, ಸರ್ಟಿಫಿಕೇಟ್ ಕೊಡುವ ವಿಚಾರದಲ್ಲಾದರೂ ಸರಿ. ಇದೆಲ್ಲಾ ಹೇಳಿದ್ಯಾಕೆ ಅಂದ್ರೆ ದಾವಣಗೆರೆ ವಿವಿಯ ಪ್ರೊಫೆಸರ್ ಗಾಯತ್ರಿ ದೇವರಾಜ್ ಅವರನ್ನ ಸಿಬಿಐ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅದುಲಂಚಕ್ಕೆ ಬೇಡಿಕೆ ಇಟ್ಟಿರೋ ಆರೋಪದ ಮೇಲೆ.

ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೋ ಬಯಾಲಜಿ ವಿಭಾಗದ ಪ್ರೊಫೆಸರ್ ಗಾಯತ್ರಿ ದೇವರಾಜ್ ಅವರನ್ನು ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದೆ. ಈ ಹಿಂದೆ ವಿಶ್ವವಿದ್ಯಾಲಯದ ಕುಲಸಚಿವೆಯೂ ಆಗಿ ಕಾರ್ಯನಿರ್ವಹಿಸಿದ್ದ ಅವರ ಮನೆಗೂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದಕ್ಕೂ ಮೊದಲು ಸಿಬಿಐ ಅಧಿಕಾರಿಗಳು ವಿಶ್ವವಿದ್ಯಾಲಯದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ನ್ಯಾಕ್ ಗ್ರೇಡ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಂತ ಆರೋಪ ಗಾಯತ್ರಿ ಮೇಲಿದೆ. ಈ ಹಿನ್ನೆಲೆಯಲ್ಲಿ ದಾಳಿ ಮಾಡಿದ ಸಿಬಿಐ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ತಪಾಸಣೆ ಕೂಡ ನಡೆಸುತ್ತಿದ್ದಾರೆ.

ತಪಾಸಣೆ ನಡೆಸಿದ ಸಿಬಿಐ ಅಧಿಕಾರಿಗಳು 37 ಲಕ್ಷ ನಗದು, 6 ಲ್ಯಾಪ್‌ಟಾಪ್, ಐಫೋನ್ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಭ್ರಷ್ಟಾಚಾರ, ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೆಎಲ್ಇಎಫ್ ವಿಶ್ವ ವಿದ್ಯಾಲಯದ ನ್ಯಾಕ್ ಕಮಿಟಿ ಪರಿಶೀಲನೆ ವೇಳೆ ಲಂಚ ಪಡೆಯುವಾಗ ಮಹಿಳಾ ಪ್ರೊಫೆಸರ್ ಅನ್ನು ಬಂಧಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ಶೋಧ ನಡೆಸಿರುವುದು ಗೊತ್ತಿಲ್ಲ, ಗಾಯತ್ರಿ ಅವರನ್ನು ಬಂಧಿಸಿರುವುದು ನಮಗೆ ಗೊತ್ತಿಲ್ಲ ಅಂತ ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅವರು ಹೇಳಿದ್ದಾರೆ.


