Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ : ಹರಿಹರದ ಎರಡು ಸಹಕಾರ ಸಂಘಗಳ ನೋಂದಣಿ ರದ್ದತಿ

Davanagere: Steps taken to cancel the registration of 3 defunct cooperative societies.
---Advertisement---

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎರಡು ಸಹಕಾರ ಸಂಘಗಳು ಸಹಕಾರ ಸಂಘಗಳ ಕಾಯ್ದೆ, ಬೈಲಾ ಹಾಗೂ ಸ್ಥಾಪನೆ ಉದ್ದೇಶಗಳ ರೀತ್ಯಾ ಚಟುವಟಿಕೆಗಳನ್ನು ನಡೆಸದೆ ಸ್ಥಗಿತಗೊಂಡಿರುವ ಕಾರಣ, ಸಂಘಗಳನ್ನು ಸಮಾಪನೆಗೊಳಿಸುವಂತೆ ಆದೇಶ ಹೊರಡಿಸಲಾಗಿದೆ.

ಸಂಘಗಳನ್ನು ಮುನ್ನಡೆಸಿಕೊಂಡು ಹೋಗಲು ಆಡಳಿತ ಮಂಡಳಿ ನಿರಾಸಕ್ತಿ ಹೊಂದಿರುವ ಕಾರಣ ಹರಿಹರದ ಕನಕ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಹಾಗೂ ಬಾಪೂಜಿ (ಗೋಂದಾಳೆ) ತಾಮ್ರ ಮತ್ತು ಅಲ್ಯೂಮಿನಿಯಂ ಉತ್ಪಾದನಾ ಮತ್ತು ಸಹಕಾರ ಸಂಘ ನಿ. ಸಹಕಾರ ಸಂಘಗಳ ನೋಂದಣಿಯನ್ನು ರದ್ದುಪಡಿಸಲಾಗಿದೆ,

ಈ ಸಹಕಾರ ಸಂಘಗಳ ನೋಂದಣಿಯನ್ನು ರದ್ದುಪಡಿಸುವುದರ ವಿರುದ್ಧ ಸದಸ್ಯರು ತಮ್ಮ ಆಕ್ಷೇಪಣೆಗಳನ್ನು  15 ದಿನಗಳೊಳಗೆ ಸೂಕ್ತ ದಾಖಲಾತಿಗಳೊಂದಿಗೆ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ, ದಾವಣಗೆರೆ ಜಿಲ್ಲೆ, ದಾವಣಗೆರೆ ಇವರ ಕಚೇರಿಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ,

ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಬಾರದಿದ್ದರೆ, ಯಾವುದೇ ಆಕ್ಷೇಪಣೆಗಳಿಲ್ಲವೆಂದು ಪರಿಗಣಿಸಿ ಸದರಿ ಸಹಕಾರ ಸಂಘಗಳ ನೋಂದಣಿಯನ್ನು ಅಧಿಕೃತವಾಗಿ ರದ್ದುಪಡಿಸಲಾಗುವುದು ಎಂದು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.

Join WhatsApp

Join Now

Join Telegram

Join Now