ದಾವಣಗೆರೆ, ಸೆಪ್ಟೆಂಬರ್ 11 : ಸೆಪ್ಟೆಂಬರ್ 14, 16 ಮತ್ತು 18 ರಂದು ಶ್ರೀ ಗಣೇಶ ವಿಗ್ರಹಗಳ ತಾತ್ಕಾಲಿಕ ವಿಸರ್ಜನಾ ವ್ಯವಸ್ಥೆಗೆ ನಿಗದಿಪಡಿಸಿರುವ ಸ್ಥಳಗಳ ವಿವರ ಇಲ್ಲಿದೆ.
ಟ್ರ್ಯಾಕ್ಟರ್ ನಿಲುಗಡೆ ಸ್ಥಳ
ವಾರ್ಡ್ ಸಂಖ್ಯೆ 6 ಹಗೆದಿಬ್ಬ ವೃತ್ತ, ಗಾಂಧಿನಗರ, ರಾಜಕುಮಾರ ಶಾಲೆ ಹತ್ತಿರ, ಕುರುಬರ ಕೇರಿ, ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರ ಕೊಂಡಜ್ಜಿ ರಸ್ತೆ, ವಾರ್ಡ್ ಸಂ-7 ಕೋರ್ಟ್ ಹಿಂಭಾಗ, ದೇವರಾಜ ಅರಸ್ ಬಡಾವಣೆ, ವಾರ್ಡ್ ಸಂ: 10 ಶಿವಾಜಿ ವೃತ್ತ, ದುರ್ಗಾಂಬಿಕ ದೇವಸ್ತಾನದ ಹತ್ತಿರ ಕುರುಬರ ಕೇರಿ, ಹೊಂಡದ ವೃತ್ತ.
ವಾರ್ಡ್ ಸಂ: 11 ವೆಂಕಟೇಶ್ವರ ವೃತ್ತ, ಬೇತೂರು ರಸ್ತೆ, ವಾರ್ಡ್ ಸಂ: 14 ವಿಠಲ ಮಂದಿರ ಹತ್ತಿರ, ಮಹಾರಾಜ ಪೇಟೆ, ಹಾಸಬಾವಿ ವೃತ್ತದ, ಚೌಕಿಪೇಟೆ, ವಾರ್ಡ್ ಸಂ: 16 ಪಾರ್ಕ್ ಹತ್ತಿರ, 3ನೇ ಮುಖ್ಯ ರಸ್ತೆ, ವಿನೋಬನಗರ, ವಾರ್ಡ್ ಸಂ: 17 ರಾಮ್ ಆಂಡ್ ಕೋ ಸರ್ಕಲ್, ಪಿ.ಜಿ.ಬಡಾವಣೆ, ವಾರ್ಡ್ ಸಂ: 18 ಬಸವೇಶ್ವರ ವೃತ್ತ, ಕಾಯಿಪೇಟೆ, ವಾರ್ಡ್ ಸಂ: 20 ಗಣೇಶ ಹೋಟೆಲ್ ಹತ್ತಿರ, ಬಂಬೂ ಬಜಾರ್, ವಾರ್ಡ್ ಸಂ: 23 ಬನ್ನಿಮರದ ಹತ್ತಿರ, ರಿಂಗ್ ರಸ್ತೆ, ಎಸ್.ಎಸ್ ಲೇಔಟ್, ವಾರ್ಡ್ ಸಂ: 24 ಬಕೇಶ್ವರ ಸ್ಕೂಲ್ ಮುಂಭಾಗ, ಎಂ.ಸಿ.ಸಿ ಎ ಬ್ಲಾಕ್, ವಾರ್ಡ್ ಸಂ: 25 ಜಯದೇವ ವೃತ್ತ, ಕೆ.ಬಿ.ಬಡಾವಣೆ, ವಾರ್ಡ್ ಸಂ: 25 ಡಿ.ಸಿ.ಎಂ ಲೇಔಟ್ ಸರ್ಕಲ್, ಡಿಸಿಎಂ ಲೇ ಔಟ್, ವಾರ್ಡ್ ಸಂ: 30 ಸರ್ಕಾರಿ ಶಾಲೆ ಹತ್ತಿರ, ಅವರಗೆರೆ.
ವಾರ್ಡ್ ಸಂ: 33 ಪಂಚಮುಖಿ ಆಂಜನೇಯ ದೇವಸ್ಥಾನದ ಹತ್ತಿರ, ಸರಸ್ವತಿ ಬಡಾವಣೆ, ವಾರ್ಡ್ ಸಂ: 34 ಸಂಜೀವಿನಿ ಆಂಜನೇಯ ದೇವಸ್ಥಾನ, ಶಿವಕುಮಾರ ಸ್ವಾಮಿ ಬಡಾವಣೆ, ವಾರ್ಡ್ ಸಂ: 35 ದುರ್ಗಾಂಬಿಕ ದೇವಸ್ಥಾನದ ಹತ್ತಿರ, ನಿಟುವಳ್ಳಿ, ವಾರ್ಡ್ ಸಂ: 36 ಹೆಚ್.ಕೆ.ಆರ್. ಸರ್ಕಲ್, ನಿಟ್ಟುವಳ್ಳಿ, ವಾರ್ಡ್ ಸಂ: 37 ಡಾಂಗೆ ಪಾರ್ಕ್, ಕೆಟಿಜಿ ನಗರ, ವಾರ್ಡ್ ಸಂ: 38 ಬಾಪೂಜಿ ಶಾಲೆ ಹತ್ತಿರ, ಕುವೆಂಪು ನಗರ, ವಾರ್ಡ್ ಸಂ: 38 ಗುಂಡಿ ಮಹಾದೇವಪ್ಪ ಸರ್ಕಲ್, ಎಂ.ಸಿ.ಸಿ. ಎ ಬ್ಲಾಕ್, ವಾರ್ಡ್ ಸಂ: 39 ಈಶ್ವರ ಪಾರ್ವತಿ ದೇವಸ್ಥಾನದ ಹತ್ತಿರ, ವಿದ್ಯಾನಗರ, ವಾರ್ಡ್ ಸಂ: 40 ಆಂಜನೇಯ ದೇವಸ್ತಾನದ ಹತ್ತಿರ, ಆಂಜನೇಯ ಬಡಾವಣೆ, ಬಾಪೂಜಿ ಬ್ಯಾಂಕ್ ಹತ್ತಿರ, ಬಿ.ಐ.ಇ.ಟಿ ರಸ್ತೆ, ಆಂಜನೇಯ ಬಡಾವಣೆ, ವಾರ್ಡ್ ಸಂ: 43 ಶ್ರೀರಾಮ ಮಂದಿರದ ಹತ್ತಿರ, ಶ್ಯಾಮನೂರು, ವಾರ್ಡ್ ಸಂ: 45 ಆರ್.ಟಿ.ಓ ಆಫೀಸ್ ಹತ್ತಿರ ಕೊಂಡಜ್ಜಿ ರೋಡ್.
ಕೃತಕ ವಿಸರ್ಜನಾ ಹೊಂಡಗಳ ವಿವರ: ಬಾತಿ ಕೆರೆ ಹತ್ತಿರ, ಬೈಪಾಸ್ ಚಾನಲ್ ಹತ್ತಿರ, ಬಳ್ಳಾರಿ ಸಿದ್ದಮ್ಮ ಪಾರ್ಕ್ ಹತ್ತಿರ, ಡಿಸಿಎಂ ನ ನೀರಿನ ಘಟಕದ ಹಿಂಭಾಗದಲ್ಲಿ ವಿಸರ್ಜನೆ ಮಾಡಬೇಕೆಂದು ಪಾಲಿಕೆ ಆಯುಕ್ತರಾದ ಡಾ.ಮಹಾಂತೇಶ್ ತಿಳಿಸಿದ್ದಾರೆ.











