ದಾವಣಗೆರೆ. ಆಗಸ್ಟ್ 4: ನಗರದ ಬಾಪೂಜಿ ಆಸ್ಪತ್ರೆ ರಸ್ತೆ ಬದಿಯಲ್ಲಿ ಅನಾಮಧೇಯ ವ್ಯಕ್ತಿ ಮೃತನಾದ ಕುರಿತು ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರ ಚಹರೆ ವಿವರ: 5.5 ಅಡಿ ಎತ್ತರ, ಕೋಲುಮುಖ, 1 ಇಂಚು ಬಿಳಿಕಪ್ಪು ಮಿಶ್ರಿತ ತಲೆ ಕೂದಲು, ಸುಮಾರು 1/2 ಇಂಚು ಬಿಳಿ ಮತ್ತು ಕಪ್ಪು ಗಡ್ಡ ಮೀಸೆ ಹೊಂದಿದ್ದು, ಎಡಗೈಯಲ್ಲಿ ಎಪಿ ಬಲಗೈಯಲ್ಲಿ ಅಸ್ಪಷ್ಟವಾದ ಕಾಮಾಕ್ಷಿ ಅಂತ ಅಚ್ಚೆ ಇರುತ್ತದೆ. ಸಿಮೆಂಟ್ ಕಲರ್ ಕಪ್ಪು ನೀಲಿ ಬಿಳಿ ಪಟ್ಟಿಯುಳ್ಳ ಅರ್ಧತೊಳಿನ ಶರ್ಟ್, ನೀಲಿ ಬಣ್ಣದ ಕೆಂಪು ಮತ್ತು ಬಿಳಿ ಪಟ್ಟಿಯುಳ್ಳ ಕಲರ್ ಚಡ್ಡಿಯನ್ನು ಧರಿಸಿರುತ್ತಾರೆ. ವಾರಸುದಾರರು ಇದ್ದಲ್ಲಿ ಬಡಾವಣೆ ಪೊಲೀಸ್ ಇನ್ಸ್ ಪೆಕ್ಟರ್ ದೂರವಾಣಿ ಸಂಖ್ಯೆ 9480803249, 08192-272012,259213, 253400 ತಿಳಿಸಬಹುದು.
ಮಹಿಳೆ ಕಾಣೆ
ದಾವಣಗೆರೆ. ಆಗಸ್ಟ್ 4: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆಲೂರುಹಟ್ಟಿ ಗ್ರಾಮದ ಜ್ಯೋತಿಬಾಯಿ ಕೋಂ ಕೃಷ್ಣನಾಯ್ಕ ಎಂಬ 30 ವರ್ಷದ ವ್ಯಕ್ತಿ ಕಾಣೆಯಾಗಿರುವರು. ಚಹರೆ 4.5 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಈ ವ್ಯಕ್ತಿಯ ಸುಳಿವು ದೊರೆತಲ್ಲಿ ಹರಿಹರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದೆ.



