ದರ್ಶನ್, ಪವಿತ್ರಾ ಸೇರಿದಂತೆ ಆರೋಪಿಗಳ ಮೇಲೆ ದೋಷಾರೋಪ ಪಟ್ಟಿಗೆ ದಿನಾಂಕ ನಿಗದಿ : ಯಾವಾಗ ಗೊತ್ತಾ..?

1 Min Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಆರೋಪಿಗಳ ಮೇಲೆ ತೂಗುಗತ್ತಿ ಇದೆ. ಯಾಕಂದ್ರೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಲು ದಿನಾಂಕ ನಿಗದಿ ಮಾಡಿಕೊಂಡಿದ್ದಾರೆ. ಅದುವೆ ನವೆಂಬರ್ 3 ರಂದು. ಇನ್ನು ಈಗ ಜೈಲು ಸೇರಿರುವ ಆರೋಪಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಆರೋಪಿಗಳು ಕೂಡ ನವೆಂಬರ್ 3ರಂದು ವಿಚಾರಣೆಗೆ ಹಾಜರಾಗಬೇಕು. ಇಲ್ಲವಾದರೆ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಅನ್ನು ಹೊರಡಿಸಲಾಗುವುದು ಎಂಬುದನ್ನು ಕೋರ್ಟ್ ತಿಳಿಸಿದೆ.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಆರೋಪಿಗಳು ಕೋರ್ಟ್ ಗೆ ಹಾಜರಾಗಿದ್ದರು. ಕೋರ್ಟ್ ಜಡ್ಜ್ ಇಂದೇ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸುವುದಾಗಿ ಹೇಳಿದ್ದರು. ಆದರೆ ನಟ ದರ್ಶನ್ ಪರ ವಕೀಲರಾದ ಸುನೀಲ್ ಕುಮಾರ್ ಅವರು ಸ್ವಲ್ಪ ಕಾಲಾವಕಾಶ ಬೇಕು ಎಂದು ಕೋರ್ಟ್ ಗೆ ಮನವಿ ಮಾಡಿದ್ದಾರೆ. ಕೋರ್ಟ್ ಸಮಯವಾಕಾಶ ನೀಡುತ್ತಾ ಹೇಗೆ ಎಂಬುದನ್ನು ನೋಡಬೇಕಿದೆ.

ಇನ್ನು ನಟ ದರ್ಶನ್, ಪವಿತ್ರಾ ಗೌಡ ವಿರುದ್ಧ ಕೊಲೆ, ಹಲ್ಲೆ, ಕಿಡ್ನ್ಯಾಪ್, ಸಾಕ್ಷ್ಯಾ ನಾಶ, ಷಡ್ಯಂತ್ರ ಸೇರಿದಂತೆ ವಿವಿಧ ಆರೋಪಗಳನ್ನು ಹೊರಿಸುವ ಸಾಧ್ಯತೆಯೂ ಸಾಕಷ್ಟು ಇದೆ. ಈ ಸಂಬಂಧವೂ ಕೋರ್ಟ್ ನಲ್ಲಿ ವಾದ ಪ್ರತಿವಾದ ನಡೆಯಲಿದೆ. ಸದ್ಯ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸಿಕ್ಕಿರುವ ಸಾಕ್ಷ್ಯಾಧಾರಗಳನ್ನೆಲ್ಲಾ ಲೆಕ್ಕ ಹಾಕಿ ಆರೋಪ ಪಟ್ಟಿ ಹೊರಿಸುವ ಸಾಧ್ಯತೆ ಇದೆ. ಇಂದು ದರ್ಶನ್ ಅವರ ಮಗ ವಿನೀಶ್ ಅವರ ಬರ್ತ್ ಡೇ ಕೂಡ ಇದೆ. ಆದರೆ ಕುಟುಂಬಸ್ಥರು ದರ್ಶನ್ ಜೈಲಿನಲ್ಲಿರುವ ನೋವಲ್ಲಿದ್ದಾರೆ.

Share This Article
Enable Notifications OK No thanks