Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ : ನಾಳೆಯಿಂದ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ದಸರಾ ಮಹೋತ್ಸವ

---Advertisement---

 

ಸುದ್ದಿಒನ್, ದಾವಣಗೆರೆ, ಸೆಪ್ಟೆಂಬರ್. 21 : ನವರಾತ್ರಿ ಪ್ರಯುಕ್ತ ನಗರದ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾ ದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ಸೆ. 22ರ ಸೋಮವಾರ ಪ್ರಾತಃಕಾಲ ಗಣಪತಿ ಪೂಜೆ, ಪುಣ್ಯಾಹ ವಾಚನ ಘಟಸ್ಥಾಪನೆ ಮತ್ತು ಧ್ವಜಾರೋಹಣ ನಡೆಯುವುದು.

ಸೆಪ್ಟೆಂಬರ್. 22 ರಿಂದ ಅ. 02ರ ಗುರುವಾರದವರೆಗೆ ಶ್ರೀ ಅಮ್ಮನವರಿಗೆ ವೇದೋಕ್ತ ಪಂಚಾಮೃತಾಭಿಷೇಕ, ದುರ್ಗಾಹೋಮ ಮತ್ತು ಪುಷ್ಪಾಲಂಕಾರ, ವಿಶೇಷ ಅಲಂಕಾರ  ಪೂಜಾ ಕಾರ್ಯಕ್ರಮಗಳು ನಡೆಯಲಿವೆ.  ದಿನಾಂಕ 30ರ ಮಂಗಳವಾರ ದುರ್ಗಾಷ್ಟಮಿ, ಅ. 01ರ   ಬುಧವಾರ ಆಯುಧ ಪೂಜೆ, 02ರ ಗುರುವಾರ ವಿಜಯದಶಮಿ ಹಾಗೂ ಸಂಜೆ 6.30ಕ್ಕೆ ಪಾಲಕಿ ಉತ್ಸವದೊಂದಿಗೆ ಬನ್ನಿ ಮುಡಿಯುವುದು ನಂತರ ಪ್ರಸಾದ ವಿನಿಯೋಗವಿರುತ್ತದೆ. ಪ್ರತಿ ದಿನ ಸಂಜೆ 6 ರಿಂದ 7 ರವರೆಗೆ ಶ್ರೀ ಕಾಳಿಕಾದೇವಿ ಮಹಿಳಾ ಭಜನಾ ಮಂಡಳಿಯಿಂದ  ಲಲಿತಾ ಸಹಸ್ರನಾಮ ಪಾರಾಯಣ ಮತ್ತು ಸಂಜೆ 7 ರಿಂದ 9 ರವರೆಗೆ ಕೆ.ಹೆಚ್. ಕುಮಾರಾಚಾರ್‌ ಮತ್ತು ಸಂಗಡಿಗರಿಂದ ಶ್ರೀ ದೇವಿಯ ಪಾರಾಯಣ ನಡೆಯಲಿದೆ.

ಅ.1ರ ಬುಧವಾರ ರಾತ್ರಿ 8ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನ ಆಡಳಿತ ಸಮಿತಿ ಟ್ರಸ್ಟ್‌ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...