Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಸರಾ ಹಬ್ಬ: ಕೆಎಸ್‍ಆರ್‍ಟಿಸಿಯಿಂದ ವಿಶೇಷ ವಾಹನ ಸೌಲಭ್ಯ

---Advertisement---

ಚಿತ್ರದುರ್ಗ.ಅ.14:  ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗದ ವತಿಯಿಂದ ವಿವಿಧ ಮಾರ್ಗಗಳಲ್ಲಿ ವಿಶೇಷ ವಾಹನಗಳ ಸೌಲಭ್ಯ ಕಲ್ಪಿಸಲಾಗಿದೆ.

ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಇದೇ ಅಕ್ಟೋಬರ್ 16, 17 ಮತ್ತು 21ರಂದು ಈ ವಿಶೇಷ ಬಸ್‍ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.
ಬೆಂಗಳೂರಿನಿಂದ ರಾಯದುರ್ಗಕ್ಕೆ ಚಳ್ಳಕೆರೆ, ಬಿ.ಜೆ.ಕೆರೆ, ಕೊಂಡ್ಲಹಳ್ಳಿ, ಕೋನಸಾಗರ ಹಾಗೂ ಮೊಳಕಾಲ್ಮುರು ಮಾರ್ಗವಾಗಿ ಅಕ್ಟೋಬರ್ 16 ಮತ್ತು 17ರಂದು ರಾತ್ರಿ 22:31 ಹಾಗೂ 23:16ಕ್ಕೆ ವಿಶೇಷ ಬಸ್‍ಗಳು ಹೊರಡಲಿವೆ. ಹಾಗೆಯೇ ರಾಯದುರ್ಗದಿಂದ ಬೆಂಗಳೂರಿಗೆ ಅಕ್ಟೋಬರ್ 21ರಂದು ರಾತ್ರಿ 22:30 ಹಾಗೂ 23:30ಕ್ಕೆ ಬಸ್‍ಗಳು ಕಾರ್ಯಾಚರಣೆ ನಡೆಸಲಿವೆ.

ಬೆಂಗಳೂರಿನಿಂದ ಹೊಳಲ್ಕೆರೆಗೆ ಅಕ್ಟೋಬರ್ 16ರಂದು ರಾತ್ರಿ 22:30ಕ್ಕೆ ವಿಶೇಷ ಬಸ್ ಬಿಡಲಾಗುತ್ತಿದ್ದು, ವಾಪಸ್ ಹೊಳಲ್ಕೆರೆಯಿಂದ ಬೆಂಗಳೂರಿಗೆ ಅಕ್ಟೋಬರ್ 21ರಂದು ರಾತ್ರಿ 22:45ಕ್ಕೆ ಬಸ್ ಸಂಚರಿಸಲಿದೆ ಎಂದು ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗದ ನಿಯಂತ್ರಣಾಧಿಕಾರಿಗಳು ಕೋರಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now