Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಳ್ಳಾರಿ ಜೈಲಿನಲ್ಲಿ ಕೊನೆಗೂ ದರ್ಶನ್ ಆಸೆ ಈಡೇರಿದೆ : ಏನದು ಗೊತ್ತಾ..?

---Advertisement---

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ಸಹವಾಸ ಮಾಡಿ ಹಾಗೋ ಹೀಗೋ ಬೇಕಾದ್ದನ್ನ ತರಿಸಿಕೊಳ್ಳುತ್ತಿದ್ದರು. ಆದರೆ‌ ಅಂದೊಂದು ದಿನ ರೌಡಿ ಶೀಟರ್ ಗಳ ಜೊತೆಗೆ ಕೂತು ಸಿಗರೇಟ್ ಸೇದಿದ ಫೋಟೋ ವೈರಲ್ ಆಗಿದ್ದೆ ತಡ, ಮರುದಿನವೇ ಬಳ್ಳಾರಿ ಜೈಲಿಗೆ ಶಿಫ್ಟ್ ಆದರು. ಈಗ ದರ್ಶನ್ ಗೆ ಬಳ್ಳಾರಿ ಜೈಲಿನಲ್ಲಿ ಪರಿಚಯಸ್ಥರು ಯಾರ್ಯಾರು ಇಲ್ಲ. ಜೊತೆಗೆ ದರ್ಶನ್ ಇರುವ ಕೋಣೆ ಮುಂದೆಯೇ ಸಿಸಿಟಿವಿ ಕ್ಯಾಮಾರಾ ಕಣ್ಗಾವಲಿದೆ. ಹೀಗಾಗಿ ಏನನ್ನು ಮಾಡುವುದಕ್ಕೆ ಆಗುತ್ತಿಲ್ಲ. ಇದರ ನಡುವೆ ಜೈಲಾಧಿಕಾರಿಗಳು ಈಗ ದರ್ಶನ್ ಅವರ ಆಸೆಯೊಂದನ್ನು ಈಡೇರಿಸಿದ್ದಾರೆ.

ದರ್ಶನ್ ಜೈಲಾಧಿಕಾರಿಗಳಿಗೆ ಮನವಿಯೊಂದನ್ನು ಮಾಡಿದ್ದರು. ನನಗೆ ಬೆನ್ನು ನೋವಿದೆ. ಇಂಡಿಯನ್ ಟಾಯ್ಲೆಟ್ ಗೆ ಹೋಗುವುದಕ್ಕೆ ಆಗುವುದಿಲ್ಲ. ಸರ್ಜಿಕಲ್ ಕಮೋಡ್ ಚೇರ್ ಬೇಕಾಗಿದೆ ಎಂದು ಮನವಿ ಮಾಡಿದ್ದರು. ಇನ್ನು ಈ ಸಂಬಂಧ ವಿಜಯಲಕ್ಷ್ಮೀ ಅವರು ಜೈಲಿಗೆ ಭೇಟಿ ನೀಡಿದಾಗ ದರ್ಶನ್ ಅವರಿಗೆ ಇರುವ ಬೆನ್ನು ನೋವಿನ ಸಮಸ್ಯೆ ಮೆಡಿಕಲ್ ರಿಪೋರ್ಟ್ ಅನ್ನು ಜೈಲಾಧಿಕಾರಿಗಳಿಗೆ ಸಲ್ಲಿಸಿದ್ದರು.

ಈ ರಿಪೋರ್ಟ್ ಸಿಕ್ಕ ಮೇಲೆ ಜೈಲಿನಲ್ಲಿಯೇ ದರ್ಶನ್ ಅವರಿಗೆ ಮೆಡಿಕಲ್ ಚೆಕಪ್ ಮಾಡಲಾಗಿದೆ. ಬೆನ್ನು ನೋವು ಇರುವುದು ಸತ್ಯ ಎಂಬುದು ತಿಳಿದ ಮೇಲೆ ದರ್ಶನ್ ಅವರ ಮನವಿಯಂತೆ ಸರ್ಜಿಕಲ್ ಕಮೋಡ್ ಚೇರ್ ಅನ್ನು ನೀಡಲಾಗಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ದರ್ಶನ್ ಅವರಿಗೆ ಚೇರ್ ಅನ್ನು ತರಿಸಲಾಗಿದೆ. ಜೈಲಾಧಿಕಾರಿಗಳು ಇದನ್ನು ತಪಾಸಣೆ ಮಾಡಿ ಬಳಿಕ ದರ್ಶನ್ ಇರುವ ಸೆಲ್ ಗೆ ಕಳುಹಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment