ಬೆಂಗಳೂರು: ಒಂದು ಕಡೆ ರಾಜ್ಯದೆಲ್ಲೆಡೆ ಡೆವಿಲ್ ಸಿನಿಮಾದ ಪ್ರಚಾರ ಜೋರಾಗಿದೆ. ಅಭಿಮಾನಿಗಳೆಲ್ಲಾ ಸೇರಿ ಇದೀಗ ಡೆವಿಲ್ ಸಿನಿಮಾದ ಪ್ರಚಾರ ಮಾಡುತ್ತಾ ಇದ್ದಾರೆ. ದರ್ಶನ್ ಅವರು ಜೈಲಿನಲ್ಲಿಯೇ ಇರುವ ನೋವು ಅವರ ಅಭಿಮಾನಿಗಲಕನ್ನು ಕಾಡುತ್ತಾ ಇದೆ. ಬೇಗ ಹೊರಗೆ ಬರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾ ಇದ್ದಾರೆ. ಹೀಗಿರುವಾಗ ದರ್ಶನ್, ಜೈಲಿನಲ್ಲಿಯೇ ಕಿರಿಕ್ ಮಾಡಿಕೊಂಡಿದ್ದಾರೆ. ಅವರ ಜೊತೆಗಿರುವ ಸಹ ಕೈದಿಗಳು ನಮ್ಮನ್ನು ಬೇರೆ ಕಡೆಗೆ ಶಿಫ್ಟ್ ಮಾಡಿಬಿಡಿ ಅಂತಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಜೊತೆಗೆ ಚಿತ್ರದುರ್ಗದ ಅನುಕುಮಾರ್, ಜಗ್ಗ, ನಾಗರಾಹ್, ಪ್ರದೂಶ್, ಲಕ್ಷ್ಮಣ್ ಕೂಡ ಇದ್ದಾರೆ. ಆದರೆ ದರ್ಶನ್ ಇವರೆಲ್ಲರ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಳೆದ ಎರೆಉ ದಿನದ ಹಿಂದಷ್ಟೆ ದರ್ಶನ್ ಹಾಗೂ ಜಗ್ಗ ನಡುವೆ ದೊಡ್ಡ ಗಲಾಟೆಯೇ ನಡೆದಿದೆ ಎನ್ನಲಾಗಿದೆ. ಮಲಗಿದ್ದವರನ್ನು ದರ್ಶನ್ ಕಾಲಿನಲ್ಲಿ ಒದ್ದು ಎಬ್ಬಿಸಿದ್ದಾರಂತೆ. ಇದರಿಂದ ಗಲಾಟೆ ಜಾಸ್ತಿಯಾದ ಬೆನ್ನಲ್ಲೇ ಅಧಿಕಾರಿಗಳು ಬಂದು ಜಗಳವನ್ನ ಬಿಡಿಸಿದ್ದಾರೆ ಎನ್ನಲಾಗಿದೆ.
ನಾನು ಇಲ್ಲೇ ಇದ್ದರೇ, ಸಾಯುವುದಾಗಿ ಅನುಕುಮಾರ್ ಹೇಳಿಕೊಂಡಿದ್ದಾನೆ. ಕೋರ್ಟ್ ನಿಂದ ಒಂದು ಕಡೆ ಬೇಲ್ ಸಿಗುತ್ತಿಲ್ಲ. ಮತ್ತೊಂದು ಕಡೆ ಜೈಲು ಸೆಲ್ ನಲ್ಲಿ ನಟ ದರ್ಶನ್ ಚಿತ್ರಹಿಂಸೆ ತಡೆಯಲಾಗುತ್ತಿಲ್ಲ. ನಾನು ಏನಾದರೂ ಮಾಡಿಕೊಂಡು ಸಾಯುವುದಾಗಿ ಅನುಕುಮಾರ್ ಹೇಳಿಕೊಂಡಿದ್ದಾನೆ. ಈ ಹಿನ್ನಲೆಯಲ್ಲಿ ಜೈಲು ಅಧಿಕಾರಿಗಳು ಎಚ್ಚರಿಕೆಯಿಂದ ಈ ಎಲ್ಲ ಕೈದಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ದರ್ಶನ್ ಸೆಲ್ ಬಳಿ ಸಿಸಿ ಕ್ಯಾಮರಾವನ್ನು ಜೈಲು ಅಧಿಕಾರಿಗಳು ಅಳವಡಿಸಿದ್ದಾರೆ. ಈಗ ದರ್ಶನ್ ಅವರು ಮೊದಲಿನಂತೆ ಇರುವುದಕ್ಕೂ ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಕೈದಿಯಂತೆಯೇ ಇರಬೇಕಾಗಿದೆ. ಅವರೆ ತಟ್ಟೆ ಹಿಡಿದುಕೊಂಡು ಊಟಕ್ಕೆ ಹೊಇಗಬೇಕು, ಬಟ್ಟೆ ಹೊಗೆದುಕೊಳ್ಳಬೇಕು. ಇದರಿಂದ ದರ್ಶನ್ ಮಾನಸಿಕ ಸ್ಥಿಮೀತ ಕಳೆದುಕೊಂಡರಾ ಎಂಬ ಪ್ರಶ್ನೆ ಕಾಡುತ್ತಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















