Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಾಡಿಗಳಿಗೆ ದರ್ಶನ್ ಖೈದಿ ನಂಬರ್ : ಕೇಸ್ ಹಾಕುವ ಎಚ್ಚರಿಕೆ ನೀಡಿದ ಟ್ರಾಫಿಕ್ ಪೊಲೀಸರು..!

---Advertisement---

 

 

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಜೈಲಿನಲ್ಲಿದ್ದಾರೆ. ಅವರಿಗೆ ಖೈದಿ ನಂಬರ್ 6106 ನೀಡಲಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸಪೋರ್ಟ್ ಮಾಡುವುದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಈ ನಂಬರ್ ಗೂ ಬಾರೀ ಡಿಮ್ಯಾಂಡ್ ಬಂದಿದೆ. ದರ್ಶನ್ ಖೈದಿ ನಂಬರ್ ಅನ್ನು ಅಭಿಮಾನಿಗಳು ತಮ್ಮ ತಮ್ಮ ಗಾಡಿಗಳ ಮೇಲೆ ಅಂಟಿಸುತ್ತಿದ್ದಾರೆ. ಹೀಗಾಗಿ ಟ್ರಾಫಿಕ್ ಪೊಲೀಸರು ಎಚ್ಚರಿಕೆಯನ್ನು ನೀಡಿದ್ದಾರೆ.

ಖೈದಿ ನಂಬರ್ ಅಂಟಿಸುವ ಬರದಲ್ಲಿ ಅಭಿಮಾನಿಗಳು ತಮ್ಮ ತಮ್ಮ ಗಾಡಿ ನಂಬರ್ ಗಳನ್ನೇ ಮರೆ ಮಾಚುತ್ತಿದ್ದಾರೆ. ಇದು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದಂತೆಯೇ ಸರಿ. ಹೀಗಾಗಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಕೇಸ್ ದಾಖಲಿಸುತ್ತೇವೆ ಎಂಬ ಎಚ್ಚರಿಕೆಯನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ನೀಡಿದ್ದಾರೆ. ನಂಬರ್ ಪ್ಲೇಟ್ ಮೇಲೆ ಖೈದಿ ನಂಬರ್ ಅಂಟಿಸುವವರಿಗೆ ಡಿಫೆಕ್ಟಿವ್ ನಂಬರ್ ಪ್ಲೇಟ್ ಅಡಿ ಕೇಸ್ ದಾಖಲಿಸುವುದಾಗಿ ತಿಳಿಸಿದ್ದಾರೆ.

 

ಇನ್ನು ದರ್ಶನ್ ಅವರನ್ನು ಭೇಟಿಯಾಗಲು ಅಭಿಮಾನುಗಳು ಕೂಡ ಹರಸಾಹಸ ಪಡುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಮುಂದೆ ಹೋಗಿ ನಿಂತು ಬರುತ್ತಿದ್ದಾರೆ. ಕುಟುಂಬಸ್ಥರಿಗೆ ಬಿಟ್ಟರೆ ಅಭಿಮಾನಿಗಳಿಗಾಗಲೀ, ಸಾರ್ವಜನಿಕರಿಗಾಗಲಿ ಭೇಟಿಗೆ ಅವಕಾಶ ನೀಡುತ್ತಿಲ್ಲ. ವಿಜಯಲಕ್ಷ್ಮೀ ತನ್ನ ಪತಿಯನ್ನು ಬಿಡಿಸಲು ಫೇಮಸ್ ವಕೀಲರನ್ನು ಭೇಟಿಯಾಗಿದ್ದಾರೆ. ಇತ್ತೀಚೆಗೆ ಸತ್ಯಮೇವ ಜಯತೆ ಎಂದು ಪೋಸ್ಟ್ ಕೂಡ ಹಾಕಿದ್ದರು. ಜೊತೆಗೆ ಅಭಿಮಾನಿಗಳಿಗೆ ಶಾಂತರೀತಿಯಿಂದ ಇರಲು ಸೂಚನೆಯನ್ನು ನೀಡಿದ್ದರು. ನಿನ್ನೆಯಷ್ಟೇ ರಕ್ಷಿತಾ ಹಾಗೂ ಪ್ರೇಮ್ ಜೈಲಿಗೆ ಭೇಟಿ ಕೊಟ್ಟು, ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದಾರೆ. ವಿನೋದ್ ಪ್ರಭಾಕರ್ ಕೂಡ ಜೈಲಿಗೆ ಹೋಗಿ ಮಾತನಾಡಿಸಿಕೊಂಡು ಬಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment