ಬೆಂಗಳೂರು: ರಾಜ್ಯದಲ್ಲಿUAS /IPS ಅಧಿಕಾರಗಳ ನಡುವೆ ಸಮರ ಶುರುವಾಗಿದೆ. ಐಎಎಸ್ ಅಧಿಕಾರಿ ರೋಹಿಣಿ ವಿರುದ್ಧ ಐಪಿಎಸ್ ಅಧಿಕಾರಿ ಡಿ ರೂಪಾ ಗರಂ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾಲು ಸಾಲು ವಿಚಾರಗಳನ್ನು ಪ್ರಶ್ನಿಸಿದ್ದಾರೆ.
ಇತ್ತಿಚೆಗಷ್ಟೇ ರೋಹಿಣಿ ಸಿಂಧೂರಿ, ಶಾಸಕ ಸಾರಾ ಮಹೇಶ್ ಅವರನಗನು ಅಧಿಕಾರಿ ಮಣಿವಣ್ಣನ್ ಜೊತೆಗೂಡಿ ಭೇಟಿ ಮಾಡಿ ಬಂದಿದ್ದರು. ಇದನ್ನು ಮೆನ್ಶನ್ ಮಾಡಿರುವ ಡಿ ರೂಪಾ, ಒಬ್ಬ ಅಧಿಕಾರಿಯಾಗಿ ರಾಜಕಾರಣಿಯನ್ನು ಸಂಧಾನಕ್ಕಾಗಿ ಭೇಟಿಯಾಗುವುದು ಅಂದ್ರೆ ಏನು..? ಎಂದು ಪ್ರಶ್ನಿಸಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿ ಡಿ ರೂಪಾ ಆಕ್ರೋಶ ಹೊರ ಹಾಕಿದ್ದಾರೆ. ಡಿಕೆ ರವಿಯ ಜೊತೆಗಿನ ಚಾಟ್, ಮೈಸೂರಿನಲ್ಲಿ ಸ್ಮಿಮ್ಮಿಂಗ್ ಪೂಲ್, ಮಂಡ್ಯ ಶೌಚಾಲಯ, ಚಾಮರಾಜನಗರದ ಆಕ್ಸಿಜನ್ ವಿಚಾರವನ್ನೆಲ್ಲಾ ತೆಗೆದಿದ್ದಾರೆ.
ಹಲವು ಐಎಎಸ್ ಅಧಿಕಾರಿಗಳ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ. ಹರ್ಷಾಗುಪ್ತಾ ಜೊತೆಗೂ ಜಗಳವಾಡಿದ್ದಾರೆ. ಹರ್ಷಾಗುಪ್ತಾ ಪ್ರಾಮಾಣಿಕ ವ್ಯಕ್ತಿ. ಮಂಡ್ಯದಲ್ಲಿ ಶೌಚಾಲಯಗಳ ನಂಬರ್ ಹೆಚ್ಚಾಗಿ ಹಾಕಿದ್ದರು. ಎಐಎಸ್ ಅಧಿಕಾರಿಗಳ ಪ್ರಾಥಮಿಕ ಹಂತದಲ್ಲಿದ್ದಾಗಲೇ ಇನ್ನೊಬ್ಬ ಐಎಎಸ್ ಅಧಿಕಾರಿಯ ಗಂಡ ಹೆಂಡತಿ ನಡುವೆ ತಂದಿಡುತ್ತಾರೆ.
ಹಾಸನದಿಂದ ಎತ್ತಂಗಡಿ ಮಾಡಿದ್ದಕ್ಕೆ ಕೇಸ್ ಯಾಕೆ ಹಾಕ್ತಾರೆ. ಜನ ಬ್ರೆಡ್ ಇಲ್ದೆ ಸಾಯ್ತಾ ಇದ್ರೆ ರಾಣಿ ಕೇಕ್ ತಿನ್ನಿ ಅಂತಾ ಇದ್ಲು ಎಂದು ವ್ಯಂಗ್ಯವಾಡಿದ್ರು. ಅಗ್ಗದ ಬ್ಯಾಗ್ ಗಳನ್ನು ದುಬಾರಿ ಬೆಲೆಗೆ ಖರೀದಿ ಮಾಡಿದ್ರು. ರವಿ ತುಂಬಾ ಒಳ್ಳೆಯವರಾಗಿದ್ರು. ಸಿಬಿಐ ತನಿಖೆಯಲ್ಲಿ ಚಾಟ್ ಬಹಿರಂಗವಾಗಿತ್ತು. ಒಂದು ವೇಳೆ ರವಿ ಲಿಮಿಟ್ ಕ್ರಾಸ್ ಮಾಡಿದ್ರೆ ಬ್ಲಾಕ್ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.