Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಭಿಮಾನಿಗಳ ಕಾರ್ಯಕ್ಕೆ ಜೈಲಿಂದಲೇ ಧನ್ಯವಾದ ತಿಳಿಸಿದ ಡಿ ಬಾಸ್

---Advertisement---

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಬಾರಿ ಜೈಲು ಸೇರಿದ್ದಾರೆ. ದರ್ಶನ್ ಅವರ ಹುಟ್ಟುಹಬ್ಬ ಅಂದ್ರೆ ಅವರ ಫ್ಯಾನ್ಸ್ ದೊಡ್ಡ ಹಬ್ಬವೇ ಸರಿ. ಆದರೆ ಈ ಎರಡು ವರ್ಷದಿಂದ ದರ್ಶನ್ ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಜೈಲಿನಲ್ಲಿಯೇ ಇದ್ದಾರೆ. ಆದರೆ ಅವರ ಹೆಸರಿನಲ್ಲಿ ಅಭಿಮಾನಿಗಳು ಸೇವೆ ಮಾಡುವುದನ್ನು ಮಾತ್ರ ಬಿಟ್ಟಿಲ್ಲ.

ಈ ವರ್ಷವೂ ದರ್ಶನ್ ಅಭಿಮಾನಿಗು ಅವರ ಹುಟ್ಟುಹಬ್ಬದ ದಿನ ಮನೆಯ ಬಳಿ ಹೋಗಿದ್ದರು, ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ರು. ಅಲ್ಲೆಲ್ಲಾ ಓಡಾಡಿ ತಮ್ಮ ಬಾಸ್ ಮನೆ ನೋಡಿಕೊಂಡು ವಾಪಾಸ್ ಹೋದರು. ಆದರೆ ಬೇಸರ ಮಾತ್ರ ಅವರ ಮನಸ್ಸಲ್ಲಿ ಹಾಗೇ ಇತ್ತು. ಮುಂದೆ ಒಳ್ಳೆಯ ದಿನಗಳು ಬಂದೇ ಬರುತ್ತವೆ ಅಂತ ಸುಮ್ಮನೆ ಅಲ್ಲಿಂದ ತೆರಳಿದರು. ಇದೀಗ ತಮ್ಮ ಸೆಲೆಬ್ರಿಟಿಗಳಿಗೆ ದರ್ಶನ್ ಜೈಲಿನಿಂದಾನೇ ಧನ್ಯವಾದ ತಿಳಿಸಿದ್ದಾರೆ.

ಧನ್ವೀರ್ ಆಗಾಗ ದರ್ಶನ್ ಅವರನ್ನು ನೋಡಿಕೊಂಡು ಬರುವುದಕ್ಕೆ ಜೈಲಿಗೆ ಹೋಗ್ತಾ ಇರ್ತಾರೆ. ಆಗ ಹೊರಗಿನ ವಿಚಾರಗಳನ್ನು ತಿಳಿಸುತ್ತಾರೆ. ಅದರಲ್ಲೂ ಅವರ ಅಭಿಮಾನಿಗಳ ಬಗ್ಗೆ. ಹುಟ್ಟುಹಬ್ಬವನ್ನ ಹೇಗೆಲ್ಲಾ ಸೆಲೆಬ್ರೇಟ್ ಮಾಡಿದ್ರು ಎಂಬ ವಿಚಾರವನ್ನು ತಿಳಿಸಿದ್ದಾರೆ. ತಮ್ಮ ಸೆಲೆಬ್ರಿಟಿಗಳಿಗೆ ಯಾವಾಗಲೂ ದರ್ಶನ್ ಧನ್ಯವಾದವನ್ನ ಹೇಳ್ತಾನೆ ಇರ್ತಾರೆ. ಅವರ ಮೇಲಿನ ಪ್ರೀತಿಯಿಂದಾನೇ ಎದೆ ಮೇಲೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈಗ ಜೈಲಿನಿಂದಾನೇ ಅವರಿಗೆಲ್ಲಾ ಧನ್ಯವಾದ ಹೇಳಿ ಎಂಬ ಸಂದೇಶವನ್ನ ನೀಡಿದ್ದಾರೆ. ಹೀಗಾಗಿ ದರ್ಶನ್ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುತ್ತಿರುವವರು ಅಭಿಮಾನಿಗಳು ಮಾಡಿದ ಕೆಲಸಗಳ ಫೋಟೋಗಳನ್ನೆಲ್ಲಾ ಕೊಲ್ಯಾಜ್ ಮಾಡಿ ಧನ್ಯಾವಾದ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now