Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೊಂತಾ ಚಂಡಮಾರುತ : ಅಕ್ಟೋಬರ್ 29ರವರೆಗೂ ಮಳೆರಾಯನ ಅಬ್ಬರ

---Advertisement---

ಬೆಂಗಳೂರು: ಒಂದೇ ಸಮನೆ ಸುರಿದ ಮಳೆರಾಯ ಬಿಡುವ ಕೊಟ್ಟ ಅಂದುಕೊಳ್ಳುವಾಗಲೇ ಚಂಡಮಾರುತದ ಎಫೆಕ್ಟ್ ಶುರುವಾಗಿದೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಮೋಂತಾ ಚಂಡ ಮಾರುತ, ಭಾರತದ ಪೂರ್ವ ಕರಾವಳಿಯತ್ತ ಲಗ್ಗೆ ಇಡಲು ಸಜ್ಜಾಗಿದೆ. ಭಾರತೀಯ ಹವಮಾನ ಇಲಾಖೆಯ ಪ್ರಕಾರ, ನಾಳೆ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಕಾಕಿನಾಡ ಬಾಳಿ ಭೂಮಿಗೆ ಅಪ್ಪಳಿಸುವ ನಿರೀಕ್ಷೆ ಇದೆ. ಜೊತೆಗೆ ಕರ್ನಾಟಕದ ಮೇಲೂ ಈ ಚಂಡ ಮಾರುತದ ಪರಿಣಾಮ ಜೋರಾಗಿರಲಿದೆ.

ಇಂದಿನಿಂದ ಅಕ್ಟೋಬರ್ 29ರವರೆಗೂ ಇದರ ತೀವ್ರತೆ ಇರಲಿದೆ. ಈ ಮೋಂತಾ ಚಂಡಮಾರುತವನ್ನು ಎದುರಿದಲು ಈಗಾಗಲೇ ಆಂಧ್ರಪ್ರದೇಶ, ಒಡಿಶಾ ಹಾಗೂ ತಮಿಳುನಾಡಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಆಂಧ್ರದ ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.

ಈ ಚಂಡ ಮಾರುತ ಕರ್ನಾಟಕದ ಮೇಲೂ ಪ್ರಭಾವ ಬೀರುವ ಕಾರಣ ಇಲ್ಲಿಯೂ ಎಚ್ಚರದಿಂದ ಇರಲು ಹವಮಾನ ಇಲಾಖೆ ಸೂಚನೆ ನೀಡಿದೆ. ಅದರಲ್ಲೂ ಕರ್ನಾಟಕ ಭಾಗದಲ್ಲೂ ಮೀನುಗಾರರು ಸಮುದ್ರಕ್ಕೆ ಇಳಿಯುತ್ತಾರೆ. ಚಂಡ ಮಾರುತ ಅಲೆಯಿಂದಾಗಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸಲು ತಿಳಿಸಲಾಗಿದೆ.

ನಿನ್ನೆಯೆಲ್ಲಾ ಬೆಳಗ್ಗೆಯಿಂದಾನೇ ಜೋರು ಬಿಸಿಲು ಇತ್ತು. ಸಂಜೆ ವೇಳೆಗೆ ಮಳೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಇವತ್ತು ಬೆಳಗ್ಗೆಯಿಂದಾನೇ ರಾಜ್ಯದಲ್ಲಿಯೂ ಮೋಡ ಕವಿದ ವಾತಾವರಣ ಮನೆ ಮಾಡಿದೆ. ಈ ಮೂಲಕ ಇಂದು ಚಂಡ ಮಾರುತದ ಎಫೆಕ್ಟ್ ನಿಂದ ಮಳೆಯಾಗುವ ಸಾಧ್ಯತೆ ಇದೆ‌ ಎನ್ನಲಾಗಿದೆ. ಹೀಗಾಗಿ ಹೊರಗೆ ಹೋಗುವವರು ಕೂಡ ಎಚ್ಚರದಿಂದ ಇರಬೇಕಾಗಿದೆ. ಸದ್ಯ ಮಳೆ ಬೆಳೆ ಆಶ್ರಿತ ರೈತರಿಗೆ ಮಳೆರಾಯ ಸಂತಸ ತಂದಿದ್ದಾನೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...