Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಒತ್ತಡದ ಜೀವನದಲ್ಲಿರುವ ಈ ಕಾಲಘಟ್ಟಕ್ಕೆ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮಗಳು ಅಗತ್ಯ : ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ

Facebook
Twitter
Telegram
WhatsApp

ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ : ಎಲ್ಲರೂ ಒತ್ತಡದ ಜೀವನದಲ್ಲಿರುವ ಈ ಕಾಲಘಟ್ಟಕ್ಕೆ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕೆಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಆದರ್ಶ ಯುವಕ-ಯುವತಿ ಸಂಘ ಚಿತ್ರದುರ್ಗ, ಪ್ರಜಾಸೇವಾ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘ ಇವರುಗಳ ಸಹಯೋಗದೊಂದಿಗೆ ತುರುವನೂರು ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ತಂದೆ-ತಾಯಿಗಳ ಜೊತೆ ಕಾಲಕಳೆಯುವ ಅವಕಾಶವೂ ಇಲ್ಲದಂತಾಗಿದೆ. ಇದಕ್ಕೆಲ್ಲಾ ಒತ್ತಡದ ಜೀವನ ಕಾರಣ. ಕೋವಿಡ್‍ನಿಂದಾಗಿ ಹಲವಾರು ತಿಂಗಳುಗಳ ಕಾಲ ಶಾಲಾ-ಕಾಲೇಜುಗಳು ಆರಂಭಗೊಂಡಿರಲಿಲ್ಲ. ಆಗ ಮಕ್ಕಳು ಸಮಯ ಕಳೆಯುವುದು ಕಷ್ಟವಾಗಿತ್ತು. ಕಲೆ, ಜನಪದ, ಸಂಗೀತಕ್ಕೆ ಎಲ್ಲರೂ ಮನಸೋಲಲೇಬೇಕು. ಇದರಿಂದ ಮನಸ್ಸಿಗೆ ಉಲ್ಲಾಸ ಸಿಗುತ್ತದೆ ಎಂದು ಹೇಳಿದರು.

ಕನ್ನಡ ಸಾಹಿತ್ಯದಲ್ಲಿ ಅನೇಕ ಸಾಹಿತ್ಯ ಪ್ರಾಕಾರಗಳಿವೆ. ಸಾಂಸ್ಕೃತಿಕ ಪರಂಪರೆಯುಳ್ಳ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಿದೆ. ಕಲೆ, ಸಾಹಿತ್ಯ, ಸಂಗೀತಕ್ಕೆ ಯಾವುದೇ ಭಾಷೆ, ಗಡಿ, ಪ್ರಾಂತ್ಯದ ಹಂಗಿಲ್ಲ. ಭೌಗೋಳಿಕ ಕ್ಷೇತ್ರವನ್ನು ಮೀರಿದ್ದು, ಶಿಕ್ಷಣದ ಜೊತೆ ಮಕ್ಕಳಿಗೆ ಇಂತಹ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮಗಳು ಅತ್ಯವಶ್ಯಕ. ಇದರಿಂದ ಗುಣಾತ್ಮಕ ಶಿಕ್ಷಣ ಪಡೆಯಲು ಸಾಧ್ಯ. ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಂದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅವೀನ್ ಮಾತನಾಡಿ ನೂರಕ್ಕೆ ಶೇ.50 ರಷ್ಟು ಆತ್ಮಹತ್ಯೆಗಳು ಒತ್ತಡ ನಿವಾರಿಸಲು ಆಗದೆ ಸಂಭವಿಸುತ್ತವೆ. ಒತ್ತಡ ನಿವಾರಣೆಗೆ ಸಂಗೀತ, ಕಲೆ, ಮನೋರಂಜನೆ ಕಾರ್ಯಕ್ರಮಗಳು ಬೇಕು. ಕಲೆ ಕಲಾವಿದರನ್ನು ಗುರುತಿಸಿ ಮಕ್ಕಳಲ್ಲಿಯೂ ಕಲೆಯಲ್ಲಿ ಆಸಕ್ತಿ ಮೂಡಿಸಬೇಕು. ಕೋಲಾಟ, ವೀರಗಾಸೆ, ಯಕ್ಷಗಾನ, ಗೊರವರ ಕುಣಿತ, ವಚನ ಸಾಹಿತ್ಯ, ಗಮಕ ಸಾಹಿತ್ಯ ಇಷ್ಟೆಲ್ಲಾ ಇದ್ದರೂ ಯುವ ಪೀಳಿಗೆ ಚಲನಚಿತ್ರಕ್ಕೆ ಮಾರು ಹೋಗುವುದು ಸಹಜ. ಸಂಗೀತಕ್ಕೆ ಭಾಷೆ, ಪ್ರಾಂತ್ಯ, ಧರ್ಮದ ಗಡಿಯಿಲ್ಲ. ಎಲ್ಲವನ್ನು ಮೀರಿದ್ದು ಎಂದು ಕಲೆಯ ಮಹತ್ವ ತಿಳಿಸಿದರು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಸುಹಾಸ್ ಎನ್, ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕಾರ್ಯದರ್ಶಿ ಮಜಹರ್‍ವುಲ್ಲಾ, ಚಿನ್ಮೂಲಾದ್ರಿ ರೋಟರಿ ಕ್ಲಬ್ ಕಾರ್ಯದರ್ಶಿ ಈ.ಅರುಣ್‍ಕುಮಾರ್, ವಾರ್ತಾಧಿಕಾರಿ ಬಿ.ಧನಂಜಯಪ್ಪ ವೇದಿಕೆಯಲ್ಲಿದ್ದರು.
ಎಂ.ಕೆ.ಹರೀಶ್, ಅಮಕುಂದಿ ಕೆ.ಗಂಗಾಧರ್ ಮತ್ತು ತಂಡದವರು ಜಾನಪದ ಗೀತೆಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿಲಯ ಮೇಲ್ವಿಚಾರಕಿಯರಾದ ಶ್ರೀಮತಿ ಎ.ಎಂ.ದೀಪಾರಾಣಿ, ಶ್ರೀಮತಿ ಸಕಿನಾಬಿ, ಶ್ರೀಮತಿ ಲಕ್ಷ್ಮಿದೇವಿ, ಆದರ್ಶ ಯುವಕ/ಯುವತಿ ಸಂಘದ ಕಾರ್ಯದರ್ಶಿ ಕಾರ್ಯದರ್ಶಿ ಶ್ರೀಮತಿ ಓಂಕಾರಮ್ಮ, ವಸತಿ ನಿಲಯದ ಬಾಲಕಿಯರು ಸಾಂಸ್ಕøತಿಕ ಸೌರಭದಲ್ಲಿ ಪಾಲ್ಗೊಂಡಿದ್ದರು.

ಗೊರವರ ಕುಣಿತ, ಕೋಲಾಟ, ಕಹಳೆ ಕಲಾವಿದರು ತಮ್ಮ ಕಲೆಗಳನ್ನು ಪ್ರದರ್ಶಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!