Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸರ್ಕಾರಿ ಕೆಲಸ ಕೊಡಿಸುವುದಾಗಿ ಸಚಿವರ ಆಪ್ತರಿಂದ ಕೋಟಿ ಕೋಟಿ ಲೂಟಿ : ರಾಯಚೂರು ನಿರುದ್ಯೋಗಿ ಯುವಕರಿಗೆ ಮೋಸ..!

---Advertisement---

ರಾಯಚೂರು: ರಾಜ್ಯದಲ್ಲಿ ಚೈತ್ರಾ ಮೋಸ ಇನ್ನು ವಿಧವಿಧವಾಗಿ ತೆರೆದುಕೊಳ್ಳುತ್ತಲೇ ಇದೆ. ಬಿಜೆಪಿ ಎಂಎಲ್ಎ ಟಿಕೆಟ್ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾಳೆ‌. ಆದರೆ ಈಗ ಮತ್ತೊಂದು ಮೋಸ ಬಯಲಾಗಿದೆ. ಸಚಿವರ ಆಪ್ತರೊಬ್ಬರು ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್ ಮಾಡಿದ್ದಾರೆ ಎನ್ನಲಾಗಿದೆ. ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು ಅವರ ಆಪ್ತ ಸಹಾಯಕ ಗುರು ವಿಶ್ವಕರ್ಮ ಎನ್ನುವವರ ವಿರುದ್ಧ ಮೋಸದ ಆರೋಪ ಕೇಳಿ ಬಂದಿದೆ.

ಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಕೋಟಿ ಕೋಟಿ ಪಡೆದಿದ್ದಾನೆ ಎನ್ನಲಾಗಿದೆ. ಅಂಗನವಾಡಿ, ಪಿಎಸ್ಐ, ಎಫ್‌ಡಿಎನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕೋಟಿ ಕೋಟಿ ಹಣ ಪೀಕಿದ್ದಾರೆ ಎನ್ನಲಾಗಿದೆ. ನಕಲಿ ಆರ್ಡರ್ ಕಾಪಿ ತೋರಿಸಿ, ಸುಮಾರು 28 ಜನರಿಂದ 2 ಕೋಟಿ ಪೀಕಿದ್ದಾರೆ ಎನ್ನಲಾಗಿದೆ. ಅದು ವಿಧಾನಸೌಧದ ಮುಂದೆಯೇ ನಕಲಿ ಆರ್ಡರ್ ಕಾಪಿ ತೋರಿಸಿದ್ದರಂತೆ.

ಇದೀಗ ಸಚಿವ ಬೋಸರಾಜು ತಮ್ಮ ಪಿಎ ಹುದ್ದೆಯಿಂದ ಅವರನ್ನು ವಜಾ ಮಾಡಿದ್ದಾರೆ. ಇದರಲ್ಲಿ ತಮ್ಮ ಹೆಸರು ಬರುತ್ತದೆ ಎಂದು ತಿಳಿದ ಬೋಸರಾಜು ಅಮಾನತು ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...