ಬೆಳಗಾವಿ: ಕಳ್ಳರ ಗಿಮಿಕ್ ಒಂದೊಂದು ಸಲ ಒಂದೊಂದು ರೀತಿಯಾಗಿರುತ್ತೆ. ಆದ್ರೆ ಸೋಲಾರ್ ದೀಪ ಕಳುವಿಗಾಗಿ ಬೆಳಗಾವಿಯಲ್ಲಿ ಕಳ್ಳರು ಬೇರೆ ರೀತಿಯಲ್ಲಿಯೆರ ನಡೆದುಕೊಂಡಿದ್ದಾರೆ. ಜಾನುವಾರುಗಳ ತಲೆ ಉಪಯೋಗಿಸಿ, ಸೋಲಾರ್ ದೀಪಗಳನ್ನು ಕದ್ದಿದ್ದಾರೆ.
ಗೋಕಾಕ್ ನಗರದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಸೋಲಾರ್ ಲೈಟುಗಳ ಕಂಬಕ್ಕೆ ಜಾನುವಾರುಗಳ ಕೊಂಬು ಕಟ್ಟುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ವಿದ್ಯುತ್ ಕಂಬದಲ್ಲಿ ಜಾನುವಾರುಗಳ ಕೊಂಬು ಕಾಣಿಸುತ್ತಿದೆ. ಆದರೂ ಪೊಲೀಸರು ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಾಲ್ಸ್ ಪ್ರಸಿದ್ಧ ತಾಣ, ಅಲ್ಲಿ ಪ್ರವಾಸಿಗರ ಸಂಚಾರಕ್ಕಾಗಿ ಇಡೀ ರಸ್ತೆಯುದ್ಧಕ್ಕೂ ಸೋಲಾರ್ ಲೈಟ್ ಅಳವಡಿಸಿದ್ದಾರೆ. ಆದರೆ ಕಳೆದ ಎರಡು ದಿನಗಳಿಂದ ಆ ಸೋಲಾರ್ ಲೈಟುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಕಳ್ಳತನ ಮಾಡಿದವರು, ಜಾನುವಾರುಗಳ ಬುರುಡೆಗಳನ್ನು ನೇತಾಕಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರಿಗೆ ಮಾಹಿತಿ ನೀಡಿದರು ಆ ಬುರುಡೆಗಳನ್ನು ತೆರವುಗೊಳಿಸಿಲ್ಲ ಎಂಬ ಬೇಸರ ಹೊರ ಹಾಕಿದ್ದಾರೆ.
ಆ ಸಾಲಿನಲ್ಲಿರುವ ಎರಡು ಮೂರು ಲೈಟ್ ಕಂಬದಲ್ಲಿ ಈ ರೀತಿ ಬುರುಡೆಗಳನ್ನು ನೇತಾಕಿ ಹೋಗಿದ್ದಾರೆ. ಇದು ಅಲ್ಲಿನ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ವಿದ್ಯುತ್ ದೀಪ ಕದ್ದಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲು ವೈರಲ್ ಆಗಿದೆ.