ಸುದ್ದಿಒನ್, ಮೈಸೂರು, ಜನವರಿ. 26 : ಸಂವಿಧಾನ ಕಾನೂನು ಕಟ್ಟಳೆಯ ಪುಸ್ತಕವಲ್ಲ. ಅದು ಈ ದೇಶದ ಪರಿಶುದ್ಧವಾದ ಆತ್ಮ ಎಂದು ಪಬ್ಲಿಕ್ ಟಿವಿ ಮೈಸೂರು ವಿಭಾಗದ ಬ್ಯೂರೋ ಮುಖ್ಯಸ್ಥ ಕೆ.ಪಿ.ನಾಗರಾಜ್ ತಿಳಿಸಿದರು.
ನಗರದ ಡಿಎವಿ ಶಾಲೆಯ ಆವರಣದಲ್ಲಿ ಭಾನುವಾರ 76ನೇ ಗಣರಾಜ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಂವಿಧಾನದಂತಹ ಪರಿಶುದ್ಧ ಆತ್ಮವನ್ನು ನಮಗೆ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಸದಾ ಸ್ಮರಣೀಯರು. ಈ ದೇಶದ ಅಭಿವೃದ್ಧಿಗೆ ಸಂವಿಧಾನದ ಮುಖ್ಯ ಕಾರಣವಾಗಿದೆ. ಇದನ್ನು ಸದಾ ನೆನಪಿನಲ್ಲಿಟ್ಟು ಕೊಳ್ಳಬೇಕು ಎಂದರು.
ಒಂದು ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಆತ್ಮದ ರೂಪದ ಸಂವಿಧಾನವನ್ನು ದೇಶಕ್ಕೆ ಕೊಡದೇ ಇದ್ದಿದ್ದರೆ ಇಂದು ನಾವುಗಳು ಇಂತಹದೊಂದು ಉತ್ತಮವಾದ ಸಮಾಜದಲ್ಲಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಜತೆ ಇದ್ದು ಪ್ರತ್ಯೇಕವಾಗಿ ಸ್ವಾತಂತ್ರ್ಯವಾದ ಪಾಕಿಸ್ತಾನವನ್ನು ನಾವು ನೋಡಬಹುದು. ಆ ದೇಶದಲ್ಲಿ ಒಬ್ಬ ಅಂಬೇಡ್ಕರ್ ಹುಟ್ಟಲಿಲ್ಲ. ಆ ಕಾರಣಕ್ಕೆ ಅಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಹೇಳಿದರು.
ನಾವು, ನೀವುಗಳು ಗಮನಿಸಿದಂತೆ ಆ ದೇಶದಲ್ಲಿ ಒಂದು ಶಿಸ್ತಿಲ್ಲ. ಸರ್ವಾಧಿಕಾರವಿದೆ. ಆದರೆ ನಮ್ಮ ದೇಶದಲ್ಲಿ ಶಿಸ್ತು, ಪ್ರಜಾಪ್ರಭುತ್ವ, ಶಾಂತಿಯಿದೆ. ಅದಕ್ಕೆ ಕಾರಣ ಅಂಬೇಡ್ಕರ್. ಒಂದು ವೇಳೆ ಸ್ವಾತಂತ್ರ್ಯ ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡದೇ ಇದ್ದಿದ್ದರೆ ನಾವು ಇನ್ನೊಂದು ಸುತ್ತಿನ ಪರಕೀರ ಆಡಳಿತಕ್ಕೆ ಒಳಗಾಗಿದ್ದರು ಅಚ್ಚರಿ ಪಡುವಂತಿರಲಿಲ್ಲ ಎಂದರು.
ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ಒಂದೇ. ಇದನ್ನು ಸಾಧ್ಯವಾಗಿಸಿರುವುದು ನಮ್ಮ ನಿಮ್ಮೇಲ್ಲರ ಹೆಮ್ಮೆ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನ. ಈ ಎಲ್ಲ ಕಾರಣಕ್ಕೆ ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಸದಾ ಗೌರವಿಸಬೇಕು. ಇದು ನಮ್ಮ ಆತ್ಮವಾಗಬೇಕು ಎಂದು ತಿಳಿಸಿದರು.
ದೇಶಭಕ್ತಿಗೀತೆಯನ್ನು ಪ್ರತಿಬಿಂಬಿಸುವ ನೃತ್ಯ, ಗೀತೆ, ಭಾಷಣಗಳನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಶಾಲೆಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಸಿಇಒ ಜಯಶ್ರೀ ಎಸ್.ಮೂರ್ತಿ, ಪ್ರಾಂಶುಪಾಲರಾದ ಶೋಭ, ಉಪಪ್ರಾಂಶುಪಾಲರಾದ ಕಾವ್ಯ ಬಸಪ್ಪ, ಮುಖ್ಯೋಪಾಧ್ಯಾಯಿನಿ ಬಿಂದುಶ್ರೀ ಭಾಗವಹಿಸಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












