ಹಲವರಿಗೆ ಇದ್ದಕ್ಕಿದ್ದ ಹಾಗೇ ತಲೆ ನೋವು ಬರುತ್ತೆ. ಮಾತ್ರೆಗಳಿಗೆ ಅಂತವರು ಅಡಿಕ್ಟ್ ಆಗಿರುತ್ತಾರೆ. ಆದರೆ ಮಾತ್ರೆ ತೆಗೆದುಕೊಳ್ಳುವುದು ಸದಾ ಕಾಲ ಒಳ್ಳೆಯದಲ್ಲ. ತೀರಾ ಆಗ್ತಾನೇ ಇಲ್ಲ ಎಂದಾಗ ಮಾತ್ರೆಗಳ ಮೊರೆ ಹೋಗಬಹುದು. ಹಾಗಾದ್ರೆ ಮಾತ್ರೆಗಳಿಲ್ಲದೆ ತಲೆ ನೋವನ್ನ ಕಡಿಮೆ ಮಾಡಿಕೊಳ್ಳುವುದೇಗೆ ಗೊತ್ತಾ..? ಇಲ್ಲಿದೆ ನೋಡಿ ಒಂದಷ್ಟು ಸಿಂಪಲ್ ಟ್ರಿಕ್ಸ್.

* ಸ್ವಲ್ಪೇ ಸ್ವಲ್ಪ ತುಪ್ಪವನ್ನ ತೆಗೆದುಕೊಳ್ಳಿ. ಒಂದು ಕರ್ಪೂರವನ್ನ ತೆಗೆದುಕೊಂಡು, ತುಪ್ಪದಲ್ಲಿ ತೇಯಬೇಕು. ಎರಡು ಚೆನ್ನಾಗಿ ಮಿಕ್ಸ್ ಆದ ಬಳಿಕ, ಅದನ್ನ ಹಣೆಗೆ ಹಚ್ಚಬೇಕು. ಹೀಗೆ ಮಾಡುವುದರಿಂದ ಆ ಕರ್ಪೂರದ ವಾಸನೆ ಹಾಗೂ ತುಪ್ಪದ ವಾಸನೆಯಿಂದಾಗಿ ತಲೆ ನೋವು ಕಡಿಮೆಯಾಗುತ್ತದೆ.

* ಈ ತಲೆನೋವು ಕೆಲವೊಂದು ಸಲ ಹಲವು ಕಾರಣಗಳಿಗೆ ಬರುತ್ತದೆ. ಶೀತಕ್ಕೆ ಬರುತ್ತೆ, ಯೋಚನೆ ಮಾಡಿದರೆ ಮೈಗ್ರೇನ್ ಇದ್ದವರಿಗೆ ಮಾಡುತ್ತದೆ. ಹೀಗಾಗಿ ಈ ತುಪ್ಪದ ಬಳಕೆ ಆ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತದೆ. ತುಪ್ಪದ ವಾಸನೆಯಿಂದ ತಲೆನೋವು ಬಿಟ್ಟು ಹೋಗುತ್ತದೆ.
* ಬಜೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಲ್ವಾ. ಆ ಬಜೆಯನ್ನ ಪೌಡರ್ ಮಾಡಿಕೊಂಡು ವಾಸನೆ ನೋಡುವುದರಿಂದಾನೂ ತಲೆ ನೋವು ಮಾಯವಾಗುತ್ತದೆ. ಅಥವ ಬಜೆಯನ್ನು ನಡುವೆ ಕಟ್ ಮಾಡಿದರೂ ಅದರಿಂದಾನೂ ವಾಸನೆ ನೋಡಬಹುದು.
* ತಲೆನೋವು ಕಡಿಮೆನೇ ಆಗ್ತಾ ಇಲ್ಲ ಎಂಬ ಚಿಂತೆ ಇರುವವರು ಇನ್ನೊಂದು ಮನೆ ಮದ್ದನ್ನು ಟ್ರೈ ಮಾಡಬಹುದು. ಹೇಗಪ್ಪ ಅಂದ್ರೆ ಒಂದು ಟೇಬಲ್ ಸ್ಪೂನ್ ತುಪ್ಪಕ್ಕೆ ಒಂದು ಟೇಬಲ್ ಸ್ಪೂನ್ ಬೆಲ್ಲವನ್ನು ಬೆರೆಸಿ, ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಅದನ್ನ ಖಾಲಿ ಹೊಟ್ಟೆಗೆ ಸೇವಿಸುತ್ತಾ ಬಂದರು, ಹಲವು ದಿನಗಳಿಂದ ಇರುವ ತಲೆ ನೋವು ಕಡಿಮೆಯಾಗುತ್ತದೆ.
(ಈ ಎಲ್ಲಾ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಿರುವ ಮಾಹಿತಿಯಾಗಿದೆ. ಒಮ್ಮೆ ವೈದ್ಯರನ್ನು ಸಂಪರ್ಕಿಸಿ, ಸಲಹೆ ಪಡೆದು ಬಳಸಿ)

