ಬೆಂಗಳೂರು: ಯೋಗೀಶ್ ಗೌಡ ಕೊ**** ಕೇಸಿಗೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಿದೆ. ಈ ಸಂಬಂಧ ಡಿಕೆ ಶಿವಕುಮಾರ್ ಅವರು ಮಾತನ್ನಾಡುತ್ತಿರುವಾಗ ಇದು ರಾಜಕೀಯದ ಒಳಸಂಚು ಎಂಬ ಮಾತನ್ನ ಹೇಳಿದ್ದರು. ಆ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅವರು (ಡಿಕೆಶಿ) ಯಾವ ಉದ್ದೇಶದಲ್ಲಿ, ಯಾವ ಅರ್ಥದಲ್ಲಿ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ. ಆದರೆ ನಾವೂ ಈ ದೇಶದ ನ್ಯಾಯಾಂಗ ವ್ಯವಸ್ಥೆಯನ್ನ ಗೌರವಿಸಬೇಕು. ಸರಿ ತಪ್ಪು ಮಾತನ್ನಾಡೋದಕ್ಕೆ ಮತ್ತೆ ಅಪೀಲು ಹಾಕುವುದಕ್ಕೂ ಅವಕಾಶವಿದೆ. ಅವರು ಅಪೀಲು ಹಾಕಿ, ಈ ತೀರ್ಪು ಸರಿ ಇಲ್ಲ ಅಂತ ಹೇಳುವುದಕ್ಕೆ ಅವಕಾಶವಿದೆ. ಅದನ್ನ ಅವರು ಮಾಡ್ತಾರೆ ಅಂದುಕೊಳ್ತೀನಿ. ಆದರೆ ತೀರ್ಪನ್ನ ನಾವೂ ಪ್ರಶ್ನೆ ಮಾಡೋದಕ್ಕೆ, ಸಾರ್ವಜನಿಕ ವ್ಯಕ್ತಿಯಾಗಿ ಸಾಧ್ಯವಿಲ್ಲ ಎಂದಿದ್ದಾರೆ.
ಇದೇ ವೇಳೆ ಒಳಮೀಸಲಾತಿ ಬಗ್ಗೆ ಮಾತನ್ನಾಡಿ, ಆ ಸಂಬಂಧ ಚರ್ಚೆ ಮಾಡಿದ್ದೇವೆ. ಸಂಪುಟದಲ್ಲಿ ಚರ್ಚೆ ಮಾಡಿದ್ದೀವಿ. ಅದಕ್ಕೆ ಒಂದು ಟೆಕ್ನಿಕಲ್ ಕಮಿಟಿ ಮಾಡಿ, ರೋಸ್ಟರ್ ಪದ್ಧತಿಯನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ನಮ್ಮ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಹಲರವನ್ನು ಸದಸ್ಯರನ್ನಾಗಿ ಮಾಡಿದ್ದಾರೆ. ಚರ್ಚೆ ಮಾಡಲಾಗುತ್ತದೆ ಎಂದಿದ್ದಾರೆ.
ಮಹಿಳೆಯರ ವಿರೋಧಿ ಕಾಂಗ್ರೆಸ್ ಎಂಬ ಬಿಜೆಪಿ ಆರೋಪಕ್ಕೆ, ಮೊದಲನೆಯದಾಗಿ ಸ್ಪಷ್ಟ ಪಡಿಸೋದು, ಕಾಂಗ್ರೆಸ್, ಮಹಿಳಾ ಮೀಸಲಾತಿಗೆ ವಿರೋಧಿಸಿಲ್ಲ. ಡಾ.ಮನಮೋಹನ್ ಸಿಂಗ್ ಇದ್ದಂತ ಸಂದರ್ಭದಲ್ಲಿ ನಾವೇ ಈ ಮಹಿಳಾ ಮೀಸಲಾತಿಯನ್ನು ತೆಗೆದುಕೊಂಡು ಬಂದಿದ್ದೆ ಕಾಂಗ್ರೆಸ್. ಆದರೆ ಪ್ರಸ್ತುತ ಕೇಂದ್ರ ಸರ್ಕಾರ ಯಾವ ಫಾರ್ಮ್ ನಲ್ಲಿ ಅದನ್ನ ತಂದಿದೆ ಜೊತೆಗೆ ಲೋಕಸಭೆಯ ಸೀಟು, ಸ್ಥಳ, ಸಂಖ್ಯೆಯ ಸೀಟುಗಳನ್ನ ಹೆಚ್ಚು ಮಾಡುವಂತದ್ದನ್ನ ಇದೇ ಮಸೂದೆಯಲ್ಲಿ ಅಳವಡಿಸಿಕೊಂಡು ತಂದಿದೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








