ಓ ರಾಕ್ಷಸರೇ.. ಬಿಜೆಪಿಯ ರಾಕ್ಷಸರೇ.. ಸುರ್ಜೇವಾಲ್ ರಾಕ್ಷಸರೆಂದಿದ್ದು ಯಾರಿಗೆ..? ವಿಡಿಯೋ ನೋಡಿ…!

 

ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿಗರು ರಾಕ್ಷಸರು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಗೆ ವೋಟ್ ಹಾಕಿದವರು, ಬೆಂಬಲ ನೀಡಿದವರು ರಾಕ್ಷಸರೆಂದೇ ಹೇಳಿದ್ದಾರೆ.

ಭಾನುವಾರ ಹರಿಯಾಣದ ಕೈತಾಲ್‌ನಲ್ಲಿ ಕಾಂಗ್ರೆಸ್ ‘ಜನ ಆಕ್ರೋಶ್ ರ್ಯಾಲಿ’ಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಓ ರಾಕ್ಷಸರೇ, ಜನತಾ ಪಾರ್ಟಿಯ ರಾಕ್ಷಸರೇ. ನೀವೆಲ್ಲಾ ರಾಕ್ಷಸರು. ಯಾರೆಲ್ಲಾ ಬಿಜೆಪಿಗೆ ವೋಟ್ ಹಾಕುತ್ತಾರೋ, ಅವರಿಗೆ ಬೆಂಬಲ ನೀಡುತ್ತಾರೋ ಅವರೆಲ್ಲಾ ರಾಕ್ಷಸ ಪ್ರವೃತ್ತಿಯವರು. ಮಹಾಭಾರತದ ಭೂಮಿಯಿಂದ ನಾನು ಶಾಪ ಕೊಡುತ್ತಿದ್ದೇನೆ. ಬಿಜೆಪಿ ಬೆಂಬಲಿಗರಲ್ಲು ರಾಕ್ಷಸನ ವರ್ತನೆ ಇದೆ‌ ಎಂದಿರುವ ಸುರ್ಜೇವಾಲ ಅವರ ಮಾತಿಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಹಾಗಾದ್ರೆ ದೇಶದಲ್ಲಿ 23 ಕೋಟಿ ಮತದಾರರಿದ್ದಾರೆ. ಅವರೆಲ್ಲಾ ಬಿಜೆಪಿಗೆ ಮತ ನೀಡಿದವರು. ಹಾಗಾದ್ರೆ ಅವರೆಲ್ಲಾ ರಾಕ್ಷಸರೇ..? ಎಂದು ಪ್ರಶ್ನಿಸಿದೆ. ಪ್ರಜಾಪ್ರಭುತ್ವದಲ್ಲಿ ಜನರೇ ದೇವರು. ಆದರೂ ಕಾಂಗ್ರೆಸ್ ಅವರನ್ನೇ ಅವಮಾನಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.

Share This Article
Leave a Comment

Leave a Reply

Your email address will not be published. Required fields are marked *