Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉಗ್ರ ಚಟುವಟಿಕೆಯಲ್ಲಿ ಭಾಗವಹಿಸಿದವರು ಕಾಂಗ್ರೆಸ್ ನ ಅಣ್ಣ – ತಮ್ಮಂದಿರ..? ಗೋವಿಂದ ಕಾರಜೋಳ ಪ್ರಶ್ನೆ

---Advertisement---

ಚಿತ್ರದುರ್ಗ: ದೆಹಲಿಯ ಕೆಂಪು ಕೋಟೆ ಬಳಿ ಆದ ಬ್ಲಾಸ್ಟ್ ನಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ಬ್ಲಾಸ್ಟ್ ರಾಜಕೀಯ ಕಿತ್ತಾಟಕ್ಕೆ ದಾರಿ ಮಾಡಿಕೊಟ್ಟಿದೆ. ಇದೀಗ ಬಿಜೆಪಿ ನಾಯಕ ಗೋವಿಂದ ಕಾರಜೋಳ ಮಾತನಾಡುತ್ತಾ, ಅವರೇನು ಕಾಂಗ್ರೆಸ್ ಅಣ್ಣ ತಮ್ಮಂದಿರ ಎಂದು ಆಕ್ರೋಶ ಹೊರ ಹಾಕಿದ್ದಾರೆ.

 

ನಿಮಗೆ ದೇಶದಲ್ಲಿ ಶಾಂತಿ, ಅಭಿವೃದ್ಧಿ ಏನು ಬೇಕಾಗಿಲ್ಲ. ನೆರೆ ರಾಷ್ಟ್ರಗಳಲ್ಲಿ ಆಗಿದ್ಯಲ್ಲ ಕೆಲವು ಕಡೆ ನಾಗರಿಕರು ಧಂಗೆ ಎದ್ದಿದ್ದಾರೆ. ಆ ರೀತಿ ಧಂಗೆ ಎದ್ದು ಅಶಾಂತಿ ಉಂಟು ಮಾಡುವ ಹೀನ ಮನಸ್ಥಿತಿ ಕಾಂಗ್ರೆಸ್ ಗೆ ಇದೆ. ಇದನ್ನ ನಾನು ಖಂಡಿಸುತ್ತೇನೆ. ಉಗ್ರ ಚಟುವಟಿಕೆಯಲ್ಲಿ ಭಾಗವಹಿಸಿದವರು ನಿಮ್ಮ ಅಣ್ಣ ತಮ್ಮಂದಿರಾ..? ಅವರ ಬಗ್ಗೆ ನೀವೂ ಸ್ಪಷ್ಟತೆ ಮಾಡಿಕೊಳ್ಳಿ. ಬಿಹಾರ ಚುನಾವಣೆಯ ಸಂದರ್ಭದಲ್ಲಿ ಆಗಿದೆ ಅನ್ನೋದು ಮೂರ್ಖತನ. ಯಾವುದೇ ಸಾಕ್ಷ್ಯಾಧಾರ ಇಲಗಲದೆ ಹೇಳುವಂಥದ್ದನ್ನ ದೇಶದ ಜನ ನೋಡ್ತಾ ಇದ್ದಾರೆ.

ಉಗ್ರ ಚಟುವಟಿಕೆಯಲ್ಲು ಭಾಗಿಯಾದ ಉಮರ್, ಜಮೀರ್ ಯಾರಿವರು..? ಕಾಂಗ್ರೆಸ್ ನ ಮನೆ ಮಕ್ಕಳಾ..? ಯಾಕೆ ಅವರ ಬಗ್ವೆ ಸಹಾನುಭೂತಿ ತಗೊಂಡಿದ್ದೀರಾ..? ಕಾಂಗ್ರೆಸ್ ನ ಕೆಲವು ನಾಯಕರ ಹೀನ ಮನಸ್ಥಿತಿಯನ್ನ ಖಂಡಿಸುತ್ತೇನೆ ಎಂದಿದ್ದಾರೆ. ಈ ದೇಶದ ವ್ಯವಸ್ಥೆ ಬಗ್ಗೆನೆ ನಂಬಿಕೆ ಇಲ್ಲದಂತೆ ಆಗಿದೆ ಕಾಂಗ್ರೆಸ್ ಗೆ. ಅವರಿಗೆ ಅನುಕೂಲ ಆಗುವಂತೆ ತೋರಿಸಿದರೆ ನಂಬಿಕೆ ಇರುತ್ತದೆ, ಅನಾನುಕೂಲವಾಗುವಂತೆ ತೋರಿಸಿದರೆ ನಂಬಿಕೆ ಇರುವುದಿಲ್ಲ. ಜಮೀರ್ ಗೆ ದೇಶದ ಪವರ್ ಆಫ್ ಪಟಾನಿಯನ್ನೇ ಕೊಟ್ಟಿರಬಹುದು ಎಂದು ಕಿಡಿಕಾರಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...