Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸ್ಟಾಲಿನ್ ವಿರುದ್ಧ ಮಾತನಾಡೋಕೆ ಕಾಂಗ್ರೆಸ್ ನಾಯಕರ ತೊಡೆ ನಡುಗುತ್ತೆ : ಸಂಸದ ಪ್ರತಾಪ್ ಸಿಂಹ

---Advertisement---

 

ಮೈಸೂರು: ಕಾವೇರಿ ನೀರು, ಶಿವಮೊಗ್ಗ ಪ್ರಕರಣ ಈ ಎಲ್ಲದರ ಬಗ್ಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಒಂದೊಂದು ಸಲ ರಾಜ್ಯವನ್ನು ಒಳ್ಳೆಯವರು ಆಳುತ್ತಾರೆ, ರಾಕ್ಷಸರು ಆಳುತ್ತಾರೆ. ಈಗ ರಾಕ್ಷಸರ ರಾಜ್ಯಭಾರ ಶುರುವಾಗಿದೆ ಎಂದಿದ್ದಾರೆ.

ತಮಿಳುನಾಡು ಸಿಎಂ ಸ್ಟಾಲಿನ್ ವಿರುದ್ಧ ಒಬ್ಬರಾದರೂ ಮಾತನಾಡಿದ್ದಾರಾ..? ಈ ಸರ್ಕಾರಕ್ಕೆ ಬೆನ್ನು ಮೂಳೆಯೇ ಇಲ್ಲ. ಸ್ಟಾಲಿನ್ ಬಗ್ಗೆ ಒಂದು ಹೇಳಿಕೆ ಕೊಡಲಿ ನೋಡೋಣಾ. ಸಿದ್ದರಾಮಯ್ಯ ಎದುರಾಳಿಗಳ ಮೇಲೆ ಉಡಾಫೆಯಿಂದ ಕೂಗಾಡುತ್ತಾರೆ. ಅದೇ ಸ್ಟಾಲಿನ್ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ. ಸ್ಟಾಲಿನ್ ಬಗ್ಗೆ ಮಾತನಾಡುವುದಕ್ಕೆ ಕಾಂಗ್ರೆಸ್ ನ ಎಲ್ಲಾ ನಾಯಕರ ತೊಡೆ ನಡುಗುತ್ತದೆ ಎಂದಿದ್ದಾರೆ.

ಇನ್ನು ಶಿವಮೊಗ್ಗ ಗಲಾಟೆ ಬಗ್ಗೆ ಮಾತನಾಡಿ, ಶಿವಮೊಗ್ಗ, ಕೋಲಾರ ಗಲಾಟೆ ನೋಡಿದರೆ ಕರ್ನಾಟಕದಲ್ಲಿ ಒಳ್ಳೆಯವರ ಸರ್ಕಾರ ಹೋಗಿ ರಾಕ್ಷಸರ ಸರ್ಕಾರ ಬಂದಿದೆ ಎಂಬುದು ಗೊತ್ತಾಗುತ್ತದೆ. ಕಲ್ಲು ಹೊಡೆಯುವ ಸಂಸ್ಕೃತಿ ಹಿಂದೂ ಧರ್ಮದವರಿಗೆ ಗೊತ್ತಿಲ್ಲ. ಸಾಮೂಹಿಕ ಪ್ರಾರ್ಥನೆ ಮಾಡಿ ಹೊರಗೆ ಬಂದು ಚಾಕು, ಚೂರಿ ಇರಿದು ಚುಚ್ಚುವುದು ಹಿಂದೂ ಸಂಸ್ಕೃತಿಯಲ್ಲ.

ಸಿಎಂ ಸಿದ್ದರಾಮಯ್ಯ ಎಲ್ಲಾ ನೋಡಿಯೂ ಕಣ್ಮುಚ್ಚಿ ಕುಳಿತಿದ್ದಾರೆ. ಪಿಎಫ್ಐ ಕೇಸ್ ಗಳನ್ನು ವಾಪಸ್ ಪಡೆದ ನಂತರ ಇಂದು ಇಂಥ ವಿಕೃತಿಗಳು ತಲೆ ಎತ್ತುತ್ತಿವೆ. ಸಿದ್ದರಾಮಯ್ಯ ಅವರೇ ಇದಕ್ಕೆಲ್ಲಾ ಕಾರಣ. ಅವರು ಬಿಗಿಯಾಗಿದ್ದರೆ ಈ ರೀತಿಯೆಲ್ಲಾ ಆಗುತ್ತಿರಲಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment