Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಿಜಾಬ್ ಮತ್ತು ಶಾಲು ಪ್ರಕರಣವನ್ನು ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ : ಸಚಿವ ಬಿ.ಸಿ.ಪಾಟೀಲ್

Facebook
Twitter
Telegram
WhatsApp

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ,(ಫೆ.11) :  ಹಿಜಾಬ್ ಮತ್ತು ಶಾಲು ಪ್ರಕರಣವನ್ನು ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಬಳಕೆ ಮಾಡುತ್ತಿದೆ, ಬಿಜೆಪಿ ಇದನ್ನು ಬಳಕೆ ಮಾಡಿಕೊಳ್ಳುವ ಅಗತ್ಯ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ತಿಳಿಸಿದರು.

ಚಿತ್ರದುರ್ಗ ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದವನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿಲ್ಲ, ಇದರ ಬಗ್ಗೆ ಸರ್ಕಾರ ಅದೇಶವನ್ನು ನೀಡಿದೆ. ಎಲ್ಲರು ಸಮವಸ್ತ್ರವನ್ನು ಧರಿಸಿ ಬರಬೇಕೆಂದು ಸೂಚನೆ ಮಾಡಲಾಗಿದೆ. ಅದೇ ರೀತಿ ನ್ಯಾಯಾಲಯವೂ ಸಹಾ ತಾತ್ಕಾಲಿಕವಾಗಿ ತೀರ್ಪುವನ್ನು ಎತ್ತಿ ಹಿಡಿದಿದೆ. ಯಾರು ಸಹಾ ಧಾರ್ಮಿಕ ವಸ್ತ್ರವನ್ನು ಧರಿಸಿ ಬರಬಾರದು ಸಮವಸ್ತ್ರವನ್ನು ಮಾತ್ರ ಧರಿಸಿ ಬರಬೇಕೆಂದು ತಿಳಿಸಿದೆ. ನ್ಯಾಯಾಲಯದ ಆದೇಶವನ್ನು ಸರ್ಕಾರ ಪಾಲಿಸಲಿದೆ ಎಂದು ತಿಳಿಸಿದರು.

ಈ ಪ್ರಕರಣವನ್ನು ಬಿಜೆಪಿ ಬಳಕೆ ಮಾಡುತ್ತಿಲ್ಲ ಅದರೆ ಕಾಂಗ್ರೆಸ್ ಇದನ್ನು ಬಳಕೆ ಮಾಡಿಕೊಳ್ಳುತ್ತಿದೆ. ಇದನ್ನು ಪ್ರಚೋದನೆ ಮಾಡುವ ಕೆಲಸವನ್ನು ಆವರು ಮಾಡುತ್ತಿದ್ದಾರೆ. ಬಿಜೆಪಿಗೆ ಇದರ ಅವಶ್ಯಕತೆ ಇಲ್ಲ ಎಂದ ಸಚಿವರು, ರಾಜ್ಯದ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ, ಇದೆಲ್ಲಾ ಉಹಾ-ಪೊಹಾ ದಿನಕ್ಕೊಬ್ಬರು ದೆಹಲಿಗೆ ಹೋಗುತ್ತಾರೆ, ಬರುತ್ತಾರೆ. ಅದ ಮಾತ್ರಕ್ಕೆ ಮುಖ್ಯಮಂತ್ರಿಗಳ ಬದಲಾವಣೆಯಾಗುತ್ತದೆ ಎಂಬ ಅರ್ಥ ಅಲ್ಲ ಇದು ಆಡಳಿತದ ಮೇಲೆ ದುಷ್ಟಪರಿಣಾಮ ಬೀರುತ್ತದೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ಜಿಲ್ಲೆಯ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಬೇಕಿದೆ ಇದಕ್ಕೆ ಬೇಕಾದ ಶಾಸಕರ ಜೊತೆಯಲ್ಲಿ ಚರ್ಚೆ ಮಾಡುವುದರ ಮೂಲಕ ಸಿ.ಎಂರವರ ಜೊತೆಯಲ್ಲಿ ಚರ್ಚೆ ಮಾಡಲಾಗುವುದು. ಈಗಾಗಲೇ 58 ಕಿ.ಮೀ. ಆಗಿದೆ. ನಮ್ಮ ಸರ್ಕಾರದಲ್ಲಿ ಇನ್ನೂ ಹೆಚ್ಚಿನ ಉದ್ದವನ್ನು ಮಾಡುವುದರ ಮೂಲಕ ಜನತೆಗೆ ನೀರನ್ನು ಕೂಡುವ ಕಾರ್ಯವನ್ನು ಮಾಡಲಾಗುತ್ತದೆ. ಈ ಯೋಜನೆ ರಾಷ್ಟ್ರೀಯ ಯೋಜನೆಯಾಗಬೇಕಿದೆ. ಇದರ ಬಗ್ಗೆ ಸಿ.ಎಂ. ಇತ್ತೀಚೇಗೆ ದೆಹಲಿಯಲ್ಲಿ ಸಂಬಂಧಪಟ್ಟವನ್ನು ಬೇಟಿ ಮಾಡಿದ್ದಾರೆ. ಇದರ ಮಾಹಿತಿ ಸಿಕ್ಕಿಲ್ಲ, ಇದರ ಬಗ್ಗೆ ಸಿ.ಎಂ.ರವರನ್ನು ಒತ್ತಾಯ ಮಾಡಲಾಗುವುದು ಎಂದು ಹೇಳಿದರು.

ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಮಂಜೂರಾಗಿದ್ದು, ಸಚಿವ ಸಂಪುಟದಲ್ಲಿ ಆಡಳಿತಾತ್ಮಕವಾದ ಒಪ್ಪಿಗೆ ಸಿಕ್ಕಿದೆ ರೇವಣ್ಣಾರಾಗಲಿ, ಕಾಂಗ್ರೇಸ್‍ನವರಾಗಲಿ ಬಿಜೆಪಿಯನ್ನು ಹೊಗಳಲು ಸಾಧ್ಯವಿಲ್ಲ, ಅವರು ನಮ್ಮನ್ನು ತೆಗಳಿದರೆ ಅವರು ಮೇಲೆ ಬರುತ್ತೇವೆ ಎಂದು ತಿಳಿದಿದ್ದಾರೆ. ಅದರೆ ಅದು ತಪ್ಪು ಕಲ್ಪನೆ, ಬೋಮ್ಮಯಿಯವರು ಸಮರ್ಥವಾದ ಆಡಳಿತನ್ನು ನೀಡುತ್ತಿದ್ದಾರೆ. ಮುಜುರಾಯಿ ಇಲಾಖೆವತಿಯಿಂದ ದೈವ ಸಂಕಲ್ಪ ಯೋಜನೆಯಡಿ ರಾಜ್ಯದಲ್ಲಿ 25 ದೇವಾಲಯಗಳನ್ನು ಕಾಶಿ ಮಾದರಿಯಲ್ಲಿ ಅಭೀವೃಧ್ದಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಆದರೆ ನಾಯಕನಹಟ್ಟಿ ದೇವಾಲಯವನ್ನು ಎ ಗ್ರೇಡ್‍ನಲ್ಲಿದೆ ಸಾಕಷ್ಟು ಆದಾಯ ಇದೆ ಅದರೂ ಸಹಾ ಕೈಬಿಡಲಾಗಿದೆ ಎಂಬ ಪ್ರಶ್ನೆಗೆ ಇದರ ಬಗ್ಗೆ ಚರ್ಚೆ ಮಾಡಿ ಹೇಳಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧ್ಯಕ್ಷ ಮುರುಳಿ, ನಂದಿನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು ?

ಸುದ್ದಿಒನ್ : ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಪರಿಣಾಮವಾಗಿ, ಅನೇಕ ರೀತಿಯ ಮಾರಣಾಂತಿಕ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಅಪಾಯಕಾರಿ ಅಂಶಗಳು ಯಾವುವು ? ಅವುಗಳನ್ನು ತಡೆಯುವುದು ಹೇಗೆ ? ಮುಂತಾದ

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ?

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ? ಶನಿವಾರ ರಾಶಿ ಭವಿಷ್ಯ -ಮೇ-4,2024 ಸೂರ್ಯೋದಯ: 05:52, ಸೂರ್ಯಾಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

error: Content is protected !!