ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡಿತ್ತು. ಆದರೆ ಒದರ ನಡುವೆ ಒಂದಷ್ಟು ಶಾಸಕರ ಬಿಜೆಪಿಯ ಆಪರೇಷನ್ ಕಮಲಕ್ಕೆ ಒಳಗಾಗಿದ್ರು. ಈ ಬಾರಿಯ ಅಂಥದ್ದೊಂದು ಆಮಿಷಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ಗೆದ್ದ ಶಾಸಕರನ್ನು ಕಾಪಾಡಿಕೊಳ್ಳುವುದಕ್ಕೆ ಹೊರಟಿದ್ದಾರೆ.

ಕಾಂಗ್ರೆಸ್ ನಿಂದ ಗೆದ್ದ ಶಾಸಕರನ್ನು ಬೆಂಗಳೂರಿಗೆ ಕರೆ ತರುವ ಪ್ಲ್ಯಾನ್ ನಡೆಯುತ್ತಿದೆ. ನಾಳೆಯೇ ಗೆದ್ದ ಶಾಸಕರಿಗೆ ಬರುವುದಕ್ಕೆ ಸೂಚಿಸಲಾಗಿದೆ. ಕೆಪಿಸಿಸಿ ಪದಾಧಿಕಾರಿಗೆ ಕರೆತರುವ ಜವಾಬ್ದಾರಿ ನೀಡಲಾಗಿದೆ. ಶಾಸಕರಿಗಾಗಿ ನಾಲ್ಕು ರಾಜ್ಯಗಳಲ್ಲಿ ಹೊಟೇಲ್ ಬುಕ್ಕಿಂಗ್ ಮಾಡಲಾಗಿದೆ. ರಾಜಸ್ಥಾನದತ್ತ ಶಾಸಕರ ಶಿಫ್ಟಿಂಗ್ ಸಾಧ್ಯತೆ ಇದೆ. ಉದಯಪುರದ ಹೊಟೇಲ್ ಗೂ ಕಳುಹಿಸುವ ಸಾಧ್ಯತೆ ಇದೆ.

ಇಂದು ರಾತ್ರಿಯೇ ಕಾಂಗ್ರೆಸ್ ಸಭೆ ನಡೆಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಬಂದ ಮೇಲೆ ಸಭೆ ನಡೆಸಲಿದ್ದಾರೆ. ಮುಂದೆ ಏನು ಮಾಡಬೇಕು ಎಂಬುದನ್ನು ಯೋಚಿಸಿ, ತೀರ್ಮಾನ ಮಾಡುತ್ತಾರೆ.

