Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿದ್ದರಾಮಯ್ಯ ಬರುವುದಕ್ಕಿಂತ ಮೊದಲು ಕಾಂಗ್ರೆಸ್ ಇತ್ತು : ಪ್ರಿಯಾಂಕ್ ಖರ್ಗೆ

---Advertisement---

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಈಗ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇತ್ತೀಚೆಗಷ್ಟೇ ಪ್ರಿಯಾಂಕ್ ಖರ್ಗೆ ಅವರು ದೆಹಲಿಗೆ ಹೋಗಿದ್ದರು. ಅಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಬಂದಿದ್ದಾರೆ. ರಾಜ್ಯ ರಾಜಕೀಯದ ಬೆಳವಣಿಗೆಯ ಬಗ್ಗೆ ಸಹಜವಾಗಿಯೇ ತಿಳಿಸಿದ್ದಾರೆ. ಹೀಗಾಗಿ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳು ರಾಜ್ಯದಲ್ಲೂ ಬಹಳ ಮುಖ್ಯವಾಗುತ್ತವೆ. ಇದೀಗ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಅವರು ನೀಡಿರುವ ಹೇಳಿಕೆ ಶಾಕಿಂಗ್ ಆಗಿದೆ.

ಯಾರೋ ಒಬ್ಬರಿಂದ ಪಾರ್ಟಿ ಇಲ್ಲ. ಸಿದ್ದರಾಮಯ್ಯ ಎರಡಯ ದಶಕದಿಂದ ಕಾಂಗ್ರೆಸ್ ನಲ್ಲಿ ಇದ್ದಾರೆ. ಅದಕ್ಕಿಂತ ಮೊದಲು ಕಾಂಗ್ರೆಸ್ ಪಕ್ಷ ಇತ್ತು ಅಲ್ವಾ..? ಅವರನ್ನು ಸಿಎಂ ಮಾಡಿದ್ದು, ಕಾಂಗ್ರೆಸ್ ಅಲ್ಲವೇ..? ಸಿದ್ದರಾಮಯ್ಯ ಅವರು ಪ್ರಬಲ ನಾಯಕರು. ಸಾಕಷ್ಟು ಪ್ರಬಲ ನಾಯಕರು ಪಕ್ಷದಲ್ಲಿ ಇದ್ದಾರೆ. ಎಲ್ಲರೂ ಸೇರಿದರೆ ಪಾರ್ಟಿ ಆಗುತ್ತೆ.

ಪಾರ್ಟಿ ಕಾರ್ಯಕರ್ತರನ್ನ ಬೆಳೆಸುತ್ತೆ, ಕಾರ್ಯಕರ್ತರು ನಾಯಕರನ್ನ ಬೆಳೆಸುತ್ತಾರೆ.  ಹೀಗೆ ಸಿದ್ದರಾಮಯ್ಯ, ಡಿಕೆಶಿ, ಜಾರಕಿಹೊಳಿ ಎಲ್ಲರೂ ಕಾರ್ಯಕರ್ತರು ಬೆಳೆಸಿದ ನಾಯಕರು. ಇಲ್ಲಿ ಏನೇ ಇದ್ದರು ವರಿಷ್ಠರು ತೀರ್ಮಾನ ಮಾಡ್ತಾರೆ. ಶಾಸಕರು ಕೂಡ ಅವರ ಅಭಿಪ್ರಾಯ ತಿಳಿಸಬಹುದು. ಆದರೆ ಅಂತಿಮವಾಗಿ ಹೈಮಾಂಡ್ ತೀರ್ಮಾನ ಮಾಡುತ್ತದೆ. ಸಿಎಂ ಹಾಗೂ ಡಿಸಿಎಂಗೆ ನಾನು ಯಾಕೆ ಹೋಗಿದ್ದೆ ಎಂಬ ವಿಚಾರವನ್ನ ತಿಳಿಸಿದ್ದೇನೆ. ವೋಟ್ ಚೋರಿ, ಚಿಲುಮೆ ವಿಚಾರ ಸೇರಿ ಚರ್ಚೆ ಮಾಡಿ ಬಂದಿದ್ದೇನೆ. ಈ ಎಲ್ಲಾ ಬೆಳವಣಿಗೆಯ ವಿಚಾರವನ್ನು ಸಿಎಂ ಮತ್ತು ಡಿಸಿಎಂ ಕೂಡ ಹೈಕಮಾಂಡ್ ಗೆ ಬಿಟ್ಟಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...