ಅಧಿಕಾರಕ್ಕೆ ಬಂದ್ರೆ ಒಂದೇ ವಾರದಲ್ಲಿ ಮತಾಂತರ ಮಸೂದೆ ವಾಪಾಸ್ : ಸಿದ್ದರಾಮಯ್ಯ

1 Min Read

ಬೆಂಗಳೂರು: ಬಿಜೆಪಿ ಸರ್ಕಾರ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನ ಅಂಗೀಕಾರ ಮಾಡಿದೆ. ಈ ಬಗ್ಗೆ ಕಾಂಗ್ರೆಸ್ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ರು ಸಹ ಬಿಜೆಪಿ ಸರ್ಕಾರ ಕಾಯ್ದೆಯನ್ನ ಜಾರಿಗೆ ತಂದಿದೆ. ಇದೀಗ ಸಿದ್ದರಾಮಯ್ಯ ಈ ಕಾಯ್ದೆ ಬಗ್ಗೆ ಮಾತನಾಡಿದ್ದು, ಅಧಿಕಾರ ಕೊಟ್ಟರೆ ಒಂದೇ ವಾರದಲ್ಲಿ ಕಾಯ್ದೆಯನ್ನ ತೆರವು ಮಾಡುವ ಮಾತನಾಡಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಡ್ರಾಫ್ಟ್ ಗೆ ಸಹಿ ಮಾಡಿದ್ದನ್ನೇ ಬಿಜೆಪಿ ಪಕ್ಷ ಅಜೆಂಡಾ ಮಾಡಿಕೊಂಡಿದೆ. ಇದು ಹುಟ್ಟಿದ್ದು ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದ 2009ರ ವರ್ಷದಲ್ಲಿ. ಆಗ ಜಯಚಂದ್ರ ಸಹಿ ಹಾಕಿ, ನಾನು ಕ್ಯಾಬಿನೆಟ್ ಮುಂದೆ ತನ್ನಿ ಅಂದದ್ದು ನಿಜ. ಆಗ ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದ ಆಂಜನೇಯನಿಗೂ ಹೇಳಿದ್ದೇ ಅದನ್ನ ನಿಲ್ಲಿ ಅಂತ. ನಾನು ಹೇಳಿದ ಮೇಲೆ ಫೈಲ್ ನಲ್ಲಿ ಬರೆದು ಇದರ ಅವಶ್ಯಕತೆ ಇಲ್ಲ ಅಂತ ಕ್ಯಾಬಿನೆಟ್ ಗೆ ತಂದಿಲ್ಲ ಎಂದಿದ್ದಾರೆ.

ಇನ್ನು ನಮ್ಮ ಸರ್ಕಾರ ಈ ಬಾರಿ ಅಧಿಕಾರಕ್ಕೆ‌ ಬಂದ್ರೆ ಒಂದೇ ವಾರದಲ್ಲಿ ಈ ಕಾಯ್ದೆಯನ್ನ ವಾಪಾಸ್ ಪಡೆಯುತ್ತೇವೆ. ಮೊದಲ ಅಧಿವೇಶನದಲ್ಲೇ ಕಾಯ್ದೆ ಹಿಂಪಡೆಯುತ್ತೇವೆ. ಬಿಜೆಪಿಯವರು ವಸ್ತಾವ ಹೇಳ್ತಿಲ್ಲ. ಬರೀ ನಾನು ಸಹಿ ಮಾಡಿದ್ದೇ ಅಂತಷ್ಟೇ ಹೇಳ್ತಿದ್ದಾರೆ. ಈಶ್ವರಪ್ಪ ಮತ್ತು ಯಡಿಯೂರಪ್ಪ ನಾವೇ ಮಾಡಿದ್ದು ಎಂದು ಹೇಳುತ್ತಿರುವಾಗ ನಮ್ಮ ಪಾತ್ರ ಏನಿದೆ ಎಂದು ಟಾಂಗ್ ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *