Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಾಯಕ ಉದಿತ್ ನಾರಾಯಣ್ ವಿರುದ್ಧ ಹೆಂಡತಿಯಿಂದಲೇ ದೂರು ದಾಖಲು!

---Advertisement---

ಬಾಲಿವುಡ್ ಹಿರಿಯ ಗಾಯಕ ಉದಿತ್ ನಾರಾಯಣ್ ವಿರುದ್ಧ ದೂರು ದಾಖಲಾಗಿದೆ. ದೂರು ನೀಡೊದ್ದು ಹೊರಗಿನ ಜನರಲ್ಲ, ಅವರ ಹೆಂಡತಿಯೇ ದೂರು ನೀಡಿದ್ದಾರೆ. ಅವರ ಮೊದಲ ಪತ್ನಿ ರಂಜನಾ ನಾರಾಯಣ್ ಅವರು ಫೆಬ್ರವರಿ 10, ಮಂಗಳವಾರದಂದು ಉದಿತ್ ನಾರಾಯಣ್, ಅವರ ಸಹೋದರರಾದ ಸಂಜಯ್ ಕುಮಾರ್ ಝಾ, ಲಲಿತ್ ನಾರಾಯಣ್ ಝಾ ಮತ್ತು ಉದಿತ್ ಅವರ ಎರಡನೇ ಪತ್ನಿ ದೀಪಾ ನಾರಾಯಣ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನ್ನ ಅರಿವಿಲ್ಲದಂತೆ ತನ್ನ ಗರ್ಭಾಶಯವನ್ನು (Uterus) ಶಸ್ತ್ರಚಿಕಿತ್ಸೆಯ ಮೂಲಕ ತೆಗೆಸಲಾಗಿದೆ ಎಂದು ರಂಜನಾ ಆರೋಪಿಸಿದ್ದಾರೆ. ರಂಜನಾ ಅವರು ಈಗಾಗಲೇ ಸುಪೌಲ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ  ಕೇಸ್ ದಾಖಲಿಸಿದ್ದಾರೆ. ಈ ಹಿಂದೆ ಮಹಿಳಾ ಆಯೋಗವು ಹಸ್ತಕ್ಷೇಪ ಮಾಡಿದಾಗ, ಉದಿತ್ ನಾರಾಯಣ್ ಅವರು ರಂಜನಾ ತನ್ನ ಪತ್ನಿ ಎಂದು ಒಪ್ಪಿಕೊಂಡಿದ್ದರು ಮತ್ತು ಜೊತೆಯಲ್ಲಿ ಇರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರಿಲ್ಲ ಎಂದು ರಂಜನಾ ಹೇಳಿದ್ದಾರೆ.

ಡಿಸೆಂಬರ್ 7, 1984 ರಂದು ಉದಿತ್ ನಾರಾಯಣ್ ಜೊತೆ ರಂಜನಾ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಗಾಯಕನಾಗಿ ವೃತ್ತಿಜೀವನ ರೂಪಿಸಿಕೊಳ್ಳಲು ಅವರು ಮುಂಬೈಗೆ ಹೋದ ನಂತರ, ದೀಪಾ ಎಂಬುವವರನ್ನು ಎರಡನೇ ಮದುವೆಯಾಗಿದ್ದಾರೆ. 2006ರಲ್ಲಿ ರಂಜನಾ ಮುಂಬೈಗೆ ಬಂದಾಗ ಉದಿತ್ ಮತ್ತು ಅವರ ಎರಡನೇ ಪತ್ನಿ ಮನೆಯೊಳಗೆ ಸೇರಿಸದೆ ಅವಮಾನಿಸಿ ಕಳುಹಿಸಿದ್ದರು. ನಂತರ ನೇಪಾಳದ ಅತ್ತೆ ಮನೆಯಿಂದಲೂ ಅವರನ್ನು ಹೊರಹಾಕಲಾಗಿತ್ತು. ಅಂದಿನಿಂದ ಅವರು ತಮ್ಮ ತವರು ಮನೆಯಲ್ಲೇ ವಾಸಿಸುತ್ತಿದ್ದಾರೆ ಎಂದು ರಂಜನಾ ಹೇಳಿದ್ದಾರೆ.

ಮಹಿಳಾ ಆಯೋಗದ ತನಿಖೆಯ ಪ್ರಕಾರ ಉದಿತ್ ನಾರಾಯಣ್ ರಂಜನಾ ಅವರಿಗೆ ತಿಂಗಳಿಗೆ 25,000 ರೂ. ನೀಡುತ್ತಿದ್ದಾರೆ. ಅವರಿಗೆ ಒಂದು ಕೋಟಿ ರೂಪಾಯಿ ಮೌಲ್ಯದ ಮನೆ ಮತ್ತು ಕೃಷಿ ಭೂಮಿಯನ್ನು ನೀಡಲಾಗಿದೆ.ರಂಜನಾ ಅವರು ಕೃಷಿ ಭೂಮಿಯಲ್ಲಿ ರೂಮ್ ನಿರ್ಮಿಸಿ ಬಾಡಿಗೆಗೆ ನೀಡಿದ್ದು, ಅಲ್ಲಿಂದಲೂ ಆದಾಯ ಪಡೆಯುತ್ತಿದ್ದಾರೆ.ಆದರೆ, ರಂಜನಾ ಅವರು ಕೇವಲ ಹಣವಲ್ಲದೆ ಪತ್ನಿಯಾಗಿ ಗೌರವಯುತವಾಗಿ ಅವರೊಂದಿಗೆ ಇರಲು ಬಯಸುತ್ತಿದ್ದಾರೆ. ಆದರೆ ಉದಿತ್ ನಾರಾಯಣ್ ಇದಕ್ಕೆ ಸಿದ್ಧರಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ.

ರಂಜನಾ ನೀಡಿರುವ ದೂರು ಸುಮಾರು 30 ವರ್ಷಗಳಷ್ಟು ಹಳೆಯದಾದ ಘಟನೆಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಮೊದಲು ಹಳೆಯ ಪ್ರಕರಣಗಳನ್ನು ಪರಿಶೀಲಿಸಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now