Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಾಸನದಿಂದ ದೇವೇಗೌಡರ ಸ್ಪರ್ಧೆ : ಪ್ಲಸ್ ಏನು..? ಮೈನಸ್ ಏನು..? ಮೊಮ್ಮಕ್ಕಳ ಭವಿಷ್ಯಕ್ಕೆ ಅಡ್ಡವಾಗುತ್ತಾರಾ..?

---Advertisement---

ಹಾಸನ: ಲೋಕಸಭಾ ಚುನಾವಣೆಗೆ ರಾಜಕೀಯ ರಂಗ ರಂಗೇರುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಮುಂದುವರೆಯುತ್ತಿದೆ. ಇದು ಕೆಲವೊಂದು ಕ್ಷೇತ್ರದಲ್ಲಿ‌ ಮನಸ್ತಾಪಕ್ಕೂ ಕಾರಣವಾಗುತ್ತಿದೆ. ಯಾಕಂದ್ರೆ ಎಷ್ಟೋ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಗೇನೆ ನೆಕ್ ಟು ನೆಕ್ ಫೈಟ್ ಇದೆ. ಹಾಸದ ಕ್ಷೇತ್ರದಲ್ಲೂ ಇದು ಹೊರತಾಗಿಲ್ಲ.

ಬಿಜೆಪಿಯ ಪ್ರೀತಂ ಗೌಡ ಹಾಗೂ ಜೆಡಿಎಸ್ ರೇವಣ್ಣ ಅವರ ನಡುವಿನ ಫೈಟ್ ಯಾವಾಗಲೂ ಕಾಣುತ್ತದೆ. ಈಗ ಮೈತ್ರಿ ಮಾಡಿಕೊಂಡು, ಹಾಸನ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟರೆ ಬಿಜೆಪಿ ನಾಯಕರು ಅಸಮಾಧಾನಗೊಳ್ಳಲಿದ್ದಾರೆ. ಹೀಗಾಗಿ ಕ್ಷೇತ್ರದ ಜೆಡಿಎಸ್ ನಾಯಕರು ಸಲಹೆಯೊಂದನ್ನು ನೀಡಿದ್ದು, ದೊಡ್ಡಗೌಡ್ರೇ ಸ್ಪರ್ಧೆ ಮಾಡಿದರೆ ಉತ್ತಮ ಎನ್ನುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರಿಗೆ ಹಾಸನ ಕ್ಷೇತ್ರ ಗೆಲುವು ತಂದುಕೊಡುವ ಕ್ಷೇತ್ರವಾಗಿದೆ. ಈಗ ದೇವೇಗೌಡ್ರು ನಿಂತರೆ ಬಿಜೆಪಿಯ ಪ್ರೀತಂ ಗೌಡ ಹಾಗೂ ಸಿಮೆಂಟ್ ಮಂಜು ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳು ಕಡಿಮೆ ಇದೆ ಎನ್ನಲಾಗುತ್ತಿದೆ. ದೇವೇಗೌಡರು ಹಿರಿಯರು ಆಗಿರುವ ಕಾರಣ ವಿರೋಧ ಕಡಿಮೆ.

ಆದರೆ ಹಾಸನ ಕ್ಷೇತ್ರವನ್ನು ದೇವೇಗೌಡ ಅವರು ತೆಗೆದುಕೊಂಡರೆ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆ ಎಲ್ಲಿಂದ ಎಂಬ ಪ್ರಶ್ನೆಗಳು ಶುರುವಾಗುತ್ತವೆ. ದೇವೇಗೌಡ ಅವರು ಮಕ್ಕಳು ಹಾಗೂ ಮೊಮ್ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿಯೇ ಸಾಕಷ್ಟು ಕಷ್ಟಪಡುತ್ತಾರೆ. ಅವರ ಗೆಲುವಿಗಾಗಿಯೇ ಸಾಕಷ್ಟು ಸ್ಟಾಟರ್ಜಿಗಳನ್ನು ಮಾಡುತ್ತಾರೆ. ಈಗ ಪ್ರಜ್ವಲ್ ರೇವಣ್ಣ ಅವರ ಕ್ಷೇತ್ರವನ್ನು ಕಿತ್ತುಕೊಳ್ಳುವುದು ಬಹಳ ಕಡಿಮೆ ಎಂದೇ ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ‌. ಮುಂದಿನ ದಿನಗಳಲ್ಲಿ ದೊಡ್ಡಗೌಡ್ರು ಯಾವ ನಿರ್ಧಾರ ಮಾಡಲಿದ್ದಾರೆ ಎಂಬುದನ್ನು ನೋಡಬೇಕಿದೆ‌.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...