Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಸವ ನಾಡಿನಲ್ಲಿ ಬುದ್ದ ಸ್ಮರಣೆ : ಕಣ್ಮನ ಸೆಳೆದ ಟೇಬೇಟಿಯನ್ನರ ಪಾದಾಯಾತ್ರೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಆ. 10 : ಇಂಡೋ ಟಿಬೇಟಿ ಫ್ರೆಂಡ್ ಶಿಪ್ ಸೊಸೈಟಿ ವತಿಯಿಂದ ನಗರದಲ್ಲಿ ಮಾದಾರ ಗುರು ಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳ ನೇತೃತ್ವದಲ್ಲಿಂದು ಬೃಹನ್ಮಠದ ಅನುಭವ ಮಂಟಪದಲ್ಲಿ ಬಸವ ನಾಡಿನಲ್ಲಿ ಬುದ್ದ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಟೇಬೇಟಿಯನ್ನರ ಪಾದಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸುಮಾರು 500ಕ್ಕೂ ಹೆಚ್ಚು ಟಿಬೇಟಿಯನ್ನರು ತಮ್ಮ ಸಂಪ್ರದಾಯಕವಾದ ಉಡುಪಾದ ಎಣ್ಣೆ ಕೆಂಪು ಬಣ್ಣದ ಸಮವಸ್ತ್ರ  ಅದರ ಮೇಲೆ ಹಳದಿ ಬಣ್ಣದ ವಸ್ತ್ರವನ್ನು ಹಾಕಿ ಕೊಂಡು ನಗರದ ನೀಲಕಂಠೇಶ್ವರ ದೇವಾಲಯದಿಂದ ಮದಕರಿನಾಯಕ ವೃತ್ತದವರೆಗೂ ಪಾದಯಾತ್ರೆ ಯನ್ನು ಮಾಡುವುದರ ಮೂಲಕ ಬಸವ ನಾಡಿನಲ್ಲಿ ಬುದ್ದನ ಸ್ಮರಣೆಗೆ ಪಾತ್ರರಾದರು. ದಾರಿಯುದ್ದಕ್ಕೂ ತಮ್ಮ ಧರ್ಮದ ಮಂತ್ರಗಳನ್ನು ಪಠಣ ಮಾಡುವುದರ ಮೂಲಕ ಸರ್ವರಿಗೂ ಒಳಿತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ಪಾದಯಾತ್ರೆಯ ಸಂದರ್ಭದಲ್ಲಿ ಸಂವಿಧಾನ ಶಿಲ್ಪ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ನಾಯಕ ಸಮುದಾಯ ಕುಲ ತಿಲಕ ಚಿತ್ರದುರ್ಗವನ್ನಾಳಿದ ರಾಜ ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಲಾಯಿತು. ಬುದ್ದ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಡಾ,ಬಿ.ಅರ್ ಅಂಬೇಡ್ಕರ್ ಹಾಗೂ ಮದಕರಿ ನಾಯಕ ಪ್ರತಿಮೆಗೆ ವಿಶೇಷವಾದ ಅಲಂಕಾರವನ್ನು ಮಾಡಲಾಗಿತ್ತು. ಮದಕರಿ ನಾಯಕ ವೃತ್ತದಲ್ಲಿ ಚಿತ್ರದುರ್ಗಕ್ಕೆ ಆಗಮಿಸಿದ್ದ ಟಿಬೇಟಿಯನ್ನರು ಸಚಿವ ಸಂತೋಷಲಾಡ್, ಶಾಸಕರಾದ ಕೆ.ಸಿ.ವಿರೇಂದ್ರ, ಶಿವಲಿಂಗಾನಂದ ಶ್ರೀಗಳು ಹಾಗೂ ಮಾದಾರ ಚನ್ನಯ್ಯ ಶ್ರೀಗಳಿಗೆ ಕೈ ಮುಗಿಯುವದರ ಮೂಲಕ ಪರಿಚಯ ಮಾಡಿಕೊಂಡರು. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ನೀಲಿ ಬಣ್ಣದ ವಸ್ತ್ರದಿಂದ ಅಲಂಕಾರವನ್ನು ಮಾಡಿದ್ದರೆ ಮದಕರಿನಾಯಕ ಪ್ರತಿಮೆಯ ಸುತ್ತಾ ವಿವಿಧ ರೀತಿಯ ಹೂಗಳಿಂದ ಮದಕರಿ ನಾಯಕ ಪ್ರತಿಮೆಗೆ ಚಂಡುಹೂ ಹಾಗೂ ಗುಲಾಬಿ ಹೊಗಳಿಂದ ಮಾಡಿದ ಹಾರವನ್ನು ಹಾಕಲಾಗಿತ್ತು.

ಈ ಸಂದರ್ಭದಲ್ಲಿ ಕಾರ್ಮಿಕ ಸಚಿವರಾದ ಸಂತೋಷಲಾಡ್‍ರವರು ಸಹಾ ತಮ್ಮ ವಾಹನವನ್ನು ಬಿಟ್ಟು ಪಾದಯಾತ್ರೆಯ ಮೂಲಕ ಟಿಬೇಟಿಯನ್ನರ ಜೊತೆಯಲ್ಲಿ ನೀಲಕಂಠೇಶ್ವರ ದೇವಾಲಯದಿಂಧ ಮದಕರಿ ನಾಯಕ ವೃತ್ತದವರೆಗೂ ಭಾಗವಹಿಸಿದ್ದು ವಿಶೇಷವಾಗಿತ್ತು, ಇವರ ಜೊತೆಯಲ್ಲಿ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಶಾಸಕರಾದ ಕೆ.ಸಿ.ವಿರೇಂದ್ರ ರಘುಮೂರ್ತಿ, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ತಾಜ್ ಪೀರ್, ಡಿಸಿಸಿ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಮಾರಸಂದ್ರ ಮುನಿಯಪ್ಪ, ಮುಂಡರಗಿ ನಾಗರಾಜ್, ನಾಯಕ ಸಮುದಾಯದ ಅಧ್ಯಕ್ಷರಾದ ಹೆಚ್.ಜೆ.ಕೃಷ್ಣಮೂರ್ತಿ ಲಿಡ್ಕರ್ ಮಾಜಿ ಅಧಕ್ಷ ಓ ಶಂಕರ್, ಜಿ.ಪಂ. ಮಾಜಿ ಸದಸ್ಯ ನರಸಿಂಹಮೂರ್ತಿ, ಜಯ್ಯಪ್ಪ, ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...