Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲೆಯ 5 ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ : ಡಾ.ರೇಣುಪ್ರಸಾದ್

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಮಾರ್ಚ್.03): 6 ವರ್ಷದೊಳಗಿನ ಮಕ್ಕಳಲ್ಲಿನ ಗಂಭೀರ ಸ್ವರೂಪದ ಶ್ರವಣ ದೋಷದ ನಿವಾರಣೆಗೆ  ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷ ದುಬಾರಿ ವೆಚ್ಚದ ಶಸ್ತ್ರ ಚಿಕಿತ್ಸೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ 5 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಉಳಿದ 15 ಫಲಾನುಭವಿಗಳಿಗೆ ಶ್ರವಣ ಸಾಧನ ನೀಡಲಾಗಿದೆ. 1281  ವಿವಿಧ ಹಂತದಲ್ಲಿ ಶ್ರವಣ ದೋಷ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗಿದೆ   ಎಂದು ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ರೇಣುಪ್ರಸಾದ್ ಹೇಳಿದರು.

ಇಲ್ಲಿನ ನೆಹರು ನಗರದ ಜ್ಞಾನವಿಕಾಸ ಪ್ರೌಢಾಶಾಲೆಯ ಆವರಣದಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ವತಿಯಿಂದ ವಿಶ್ವ ಶ್ರವಣ ದಿನದ ಸಲುವಾಗಿ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

20 ಡಿಎಲ್‍ಗಳಿಗಿಂತ ಕಡಿಮೆ ಶಬ್ದ ಯಾರಿಗೆ ಕೇಳಲಾಗುವುದಿಲ್ಲವೋ ಅವರಿಗೆ ಶ್ರವಣ ದೋಷದ ಸಾಧ್ಯತೆ ಇರುತ್ತದೆ. ಯಾವುದೇ ವಯಸ್ಸಿನಲ್ಲಿ ಶ್ರವಣ ದೋಷವು ವಿವಿಧ ಕಾರಣಗಳಿಂದ ಸಂಭವಿಸಬಹುದು ಇದನ್ನು ತಡೆಯುವ ಮಾರ್ಗಗಳೂ ಇವೆ ಎಂದರು.

ವಿಶ್ವ ಶ್ರವಣ ದಿನವನ್ನು ಪ್ರತಿ ವರ್ಷ ಮಾರ್ಚ್ 3 ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ. ‘ಕಿವಿ ಮತ್ತು ಶ್ರವಣ ಆರೈಕೆ ಎಲ್ಲರಿಗಾಗಿ ಬನ್ನಿ ವಾಸ್ತವವಾಗಿಸೋಣ’ ಈ ವರ್ಷದ ಧ್ಯೇಯ ವಾಕ್ಯವಾಗಿದೆ ಎಂದು ತಿಳಿಸಿದರು.
ಎಲ್ಲಾ ಆರೋಗ್ಯ ಕಾರ್ಯಕರ್ತೆಯರಿಗೆ, ಕಿವಿಯ ಆರೈಕೆ, ಪ್ರಥಮ ಚಿಕಿತ್ಸೆ ಹಾಗೂ ತಪಾಸಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಕಿವಿಯ ಆರೈಕೆ ಹಾಗೂ ಶ್ರವಣ ಆರೈಕೆಯನ್ನು ಪ್ರಾಥಮಿಕ ಆರೋಗ್ಯ ಸೇವೆಗಳಲ್ಲಿ ವಿಲೀನಗೊಳಿಸಲಾಗುತ್ತಿದೆ ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಿಶ್ವದಾದ್ಯಂತ 430 ದಶ ಲಕ್ಷ ಜನರು ಶ್ರವಣ ದೋಷದಿಂದ ಬಳಲುತ್ತಿದ್ದಾರೆ. 2050 ರ ವೇಳೆಗೆ ಈ ಸಂಖ್ಯೆ 700 ದಶಲಕ್ಷ ದಾಟುವ ಆತಂಕವಿದೆ.

ರಾಜ್ಯದಲ್ಲಿ 2008-09 ರಲ್ಲಿ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ಜಾರಿಯಾಗಿದ್ದು, ಉಪಕರಣ ಮತ್ತು ಶಸ್ತ್ರಚಿಕಿತ್ಸೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ತರಬೇತಿ ನೀಡಲಾಗುತ್ತಿದೆ.
ಕಳೆದ 5 ವರ್ಷಗಳಲ್ಲಿ  ಕರ್ನಾಟಕ ರಾಜ್ಯಾದ್ಯಂತ ಎನ್.ಪಿ.ಪಿ.ಸಿ.ಡಿ ಕಾರ್ಯಕ್ರಮ ವಿಭಾಗದಿಂದ 2,00,305 ಶ್ರವಣ ದೋಷವುಳ್ಳವರನ್ನು ಹಾಗೂ 35,418 ಗಂಭೀರ ಶ್ರವಣ ದೋಷವುಳ್ಳವರನ್ನು ಗುರುತಿಸಲಾಗಿದೆ.

5 ವರ್ಷದೊಳಗಿನ 2,381 ಮಕ್ಕಳಲ್ಲಿ ಗಂಭೀರ ಶ್ರವಣ ದೋಷವಿದೆ. ರಾಜ್ಯದ ಎಲ್ಲಾ ಇ.ಎನ್.ಟಿ ತಜ್ಞರ ಸಹಾಯದಿಂದ ಕಿವಿಯ ಸಮಸ್ಯೆಗಳಿಗೆ 10,213 ಶಸ್ತ್ರಚಿಕಿತ್ಸೆ ಮಾಡಲಾಗಿದೆ. 11,857 ಫಲಾನುಭವಿಗಳಿಗೆ ಶ್ರವಣ ಸಾಧನ ನೀಡಲಾಗಿದೆ ಎಂದು ತಿಳಿಸಿದರು.

6 ವರ್ಷದೊಳಗಿನ ಮಕ್ಕಳಲ್ಲಿ ಎರಡು ಕಿವಿಗಳಲ್ಲಿ ಗಂಭೀರ ಸ್ವರೂಪದ ಶ್ರವಣ ದೋಷಗಳನ್ನು ಗುರುತಿಸಿ ಕಾಕ್ಲಿಯಾರ್ ಇಂಪ್ಲಾಂಟ್ ಅವಶ್ಯಕತೆಯಿದ್ದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯಿಂದ ಮತ್ತು ಸಂಘ ಸಂಸ್ಥೆಗಳಿಂದ ಶ್ರವಣ ಸಾಧನಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗುವುದು.

ಮುಖ್ಯವಾಗಿ ಶ್ರವದೋಷಗಳು, ಜೆನೆಟಿಕ್ಸ್, ಜೋರಾದ ಶಬ್ದ, ಸೋಂಕು, ದೀರ್ಘಕಾಲದ ಕಾಯಿಲೆಗಳು
( ಟಿ.ಬಿ, ಕ್ಯಾನ್ಸರ್) ಗರ್ಭಿಣಿಯರಲ್ಲಿ ಉಂಟಾಗುವ ಸೋಂಕುಗಳು ದೀರ್ಘ ಕಾಲ ತೆಗೆದುಕೊಳ್ಳುವ ಔಷಧಿಗಳಿಂದ, ರಕ್ತ ಸಂಬಂಧದಲ್ಲಿ ಮದುವೆ, ಹೆರಿಗೆ ವೇಳೆ ಸಮಸ್ಯೆ, ಅವಧಿಪೂರ್ವ ಜನನ, ವಯಸ್ಸಿಗೆ ತಕ್ಕಂತೆ ಆಗದ ಬೆಳವಣಿಗೆ, ಜೋರಾದ ಪೆಟ್ಟು ಬೀಳುವುದರಿಂದ, ಕಿವಿಯೊಳಗೆ ಅನವಶ್ಯಕವಾಗಿ ಕಡ್ಡಿ, ಪೆನ್ಸಿಲ್ ಅಥವಾ ಇನ್ಯಾವುದೇ ವಸ್ತುಗಳನ್ನು ಹಾಕುವುದರಿಂದ ಶ್ರವಣ ದೋಷವಾಗುತ್ತದೆ.

ಶ್ರವಣದೋಷಗಳನ್ನು ನಿಯಂತ್ರಿಸಲು ನಿಯಮಿತ ಶ್ರವಣ ಪರೀಕ್ಷೆ, ನವಜಾತ ಶಿಶುಗಳಿಗೆ ಶ್ರವಣ ಪರೀಕ್ಷೆ, ಗರ್ಭಿಣಿಯರಿಗೆ ಶ್ರವಣ ಪರೀಕ್ಷೆ, ವಯಸ್ಕರು ಹೆಚ್ಚು ಶಬ್ದವನ್ನು ನಿರಂತರವಾಗಿ ಕೇಳುವುದನ್ನು ಕಡಿಮೆ ಮಾಡುವುದರಿಂದ, ಹೆಚ್ಚು ಶಬ್ದ ಇರುವಲ್ಲಿ (ಕಾರ್ಖಾನೆ] ಕಿವಿಗಳಿಗೆ ಹಿಯರ್ ಪ್ಯಾಡ್ಸ್ ಅಳವಡಿಕೆ, ರಕ್ತ ಸಂಬಂಧದಲ್ಲಿ ಮದುವೆಯಾಗಬಾರದು, ಪ್ರಾಥಮಿಕ ಹಂತದಲ್ಲಿ ಕಿವಿಯ ತೊಂದರೆಗಳನ್ನು ಗುರುತಿಸಿ ಚಿಕಿತ್ಸೆ, ಯಾವುದೇ ಔಷಧಿಗಳನ್ನು ವೈದ್ಯರ ಸಲಹೆಯಿಂದಲೇ ಪಡೆಯುವುದು, ಧೀರ್ಘ ಕಾಲದ ಚಿಕಿತ್ಸಾವಧಿಯಲ್ಲಿ ನಿಯಮಿತವಾಗಿ ಶ್ರವಣ ಪರೀಕ್ಷೆ ಮಾಡಿಸಿಕೊಳ್ಳುವುದು.

ಪ್ರಾರಂಭಿಕ ಹಂತದಲ್ಲೇ ಶ್ರವಣ ದೋಷ ಪರೀಕ್ಷೆ, ಗುಗ್ಗೆ ಮತ್ತು ಇತರೆ ಸೋರಿಕೆಯಿದ್ದಲ್ಲಿ ಕಿವಿಯನ್ನು ಸ್ವಚ್ಛಗೊಳಿಸುವುದು ಮತ್ತು ಚಿಕಿತ್ಸೆ ನೀಡುವುದು, ಗಂಟಿನ ತೊಂದರೆ, ಕಿವಿಯ ತಮಟೆಗೆ ಪೆಟ್ಟಾಗಿದ್ದಲ್ಲಿ ಚಿಕಿತ್ಸೆ ನೀಡುವುದು, ಸೋಂಕು ಅಥವಾ ಉರಿಯೂತ ಇದ್ದಲ್ಲಿ ಚಿಕಿತ್ಸೆ ನೀಡುವುದರಿಂದ ಶ್ರವಣ ದೋಷಕ್ಕೆ ಚಿಕಿತ್ಸೆ ಪಡೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಸಂಯೋಜಕರಾದ ಮಾರುತಿ, ರುದ್ರಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಗೋಪಾಲಕೃಷ್ಣ, ಆಶಾ ಕಾರ್ಯಕರ್ತೆಯರಾದ ವಾಣಿ, ದ್ಯಾಮಕ್ಕ ಇತರರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‍ರವರನ್ನು ಗೆಲ್ಲಿಸಿ : ಮಯೂರ್ ಜೈಕುಮಾರ್

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 17  : ವಿಧಾನಪರಿಷತ್‍ನಲ್ಲಿ ಬಹುಮತ ಬೇಕಾಗಿರುವುದರಿಂದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಕಾಂಗ್ರೆಸ್

ಮುಂದಿನ ವರ್ಷದಿಂದ ಎಸ್ಎಸ್ಎಲ್ಸಿ ಮಕ್ಕಳಿಗಿಲ್ಲ ಗ್ರೇಸ್ ಮಾರ್ಕ್ಸ್..!

ಬೆಂಗಳೂರು: ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶ ಕಳೆದ ಬಾರಿಗಿಂತ ಕಡಿಮೆ ಬಂದಿದೆ. ಅದರಲ್ಲೂ ಕಳೆದ ವರ್ಷಕ್ಕಿಂತ ಹೆಚ್ಚಿನ ಗ್ರೇಸ್ ಮಾರ್ಕ್ಸ್ ನೀಡಲಾಗಿದ್ದರು, ಫಲಿತಾಂಶ ಹೇಳಿಕೊಳ್ಳುವ ಮಟ್ಟಕ್ಕೆ ಬಂದಿಲ್ಲ. ಈ ಗ್ರೇಸ್ ಮಾರ್ಕ್ಸ್ ವಿಚಾರವಾಗಿ ಸಿಎಂ

ರಾಜಕೀಯ ನಿಂತ ನೀರಲ್ಲ, ಕೆಲವ ಬದಲಾವಣೆಗಳು ಅನಿವಾರ್ಯ : ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ. 17 :  ನಾನು ನನ್ನ ಶಾಸಕ ಸ್ಥಾನ ಅವಧಿ ಮುಗಿದ ಮೇಲೆ ಬೇರೆ ಪಕ್ಷಕ್ಕೆ

error: Content is protected !!