ಬೆಂಗಳೂರು: ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟುವಾಗ ನಡೆದ ಅವಘಡದಿಂದ ಕಾಂಗ್ರೆಸ್ ಕಾರ್ಯಕರ್ತನ ಪ್ರಾಣವೇ ಹೋಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಕೋಪಗೊಂಡಿದ್ದಾರೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಜಮೀರ್ ಅಹ್ಮದ್ ಖಾನ್ ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಸಂಬಂಧ ಮಾಹಿತಿ ನೀಡಿದ್ದಾರೆ. ಈ ವೇಳೆ ಇದೆಲ್ಲಾ ಬೇಕಿತ್ತಾ ಎಂದು ಕೋಪಗೊಂಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಜೊತೆಗೆ ದೂರವಾಣಿ ಕರೆ ಮಾಡಿ, ಮಾತನಾಡಿಸುವ ಪ್ರಯತ್ನವನ್ನ ಜಮೀರ್ ಅಹ್ಮದ್ ಖಾನ್ ಮಾಡಿದ್ದಾರೆ. ಪರಿಸ್ಥಿತಿಯನ್ನ ತಿಳಿಗೊಳಿಸುವುದಕ್ಕೆ ಯತ್ನಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಅದಕ್ಕೆ ಒಪ್ಪಿಲ್ಲ. ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟುವುದು ತಪ್ಪು. ನಾನು ಭರತ್ ರೆಡ್ಡಿ ಜೊತೆಗೆ ಮಾತನಾಡುವುದಿಲ್ಲ ಎಂಬ ಮಾತನ್ನ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಫೋನ್ ಮಾಡಿಕೊಟ್ಟರು ಮಾತನಾಡಿಲ್ಲ.

ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಘಟನೆ ಬಗ್ಗೆ ತನಿಖೆ ಮಾಡುವುದಕ್ಕೆ ಹೇಳಿದ್ದೀನಿ. ಯಾರ ಗನ್ ನಿಂದ ಬುಲೆಟ್ ಬಂದಿದೆ ಎಂಬುದು ಗೊತ್ತಾಗ ಬೇಕು ಅಲ್ವಾ. ಬಿಜೆಪಿಯವರ ಗನ್ ನಿಂದ ಬಂದಿದೆಯಾ..? ಕಾಂಗ್ರೆಸ್ ನವರ ಗನ್ ನಿಂದ ಬಂದಿದೆಯಾ..? ಅನ್ನೋದು ಗೊತ್ತಾಗಬೇಕು. ಅದಕ್ಕೋಸ್ಕರ ತನಿಖೆ ಮಾಡಲು ಹೇಳಿದ್ದೇನೆ. ಅವರ ಸೆಕ್ಯುರಿಟಿಗಾಗಿ ಗನ್ ಇಟ್ಟುಕೊಂಡಿದ್ದಾರೆ. ಏರ್ ನಲ್ಲಿ ಗನ್ ಫೈಯರ್ ಮಾಡಿದ್ದಾರೆ. ಅದಕ್ಕೆ ಫೈರಿಂಗ್ ಮಾಡಿರೋದು ಮನುಷ್ಯನಿಗೆ ತಗುಲಿದೆ. ರಾಜಶೇಖರ್ ಸತ್ತು ಹೋಗಿದ್ದಾರೆ. ಯಾರ ಗನ್ ನಿಂದ ಬಂದಿದೆ ಅನ್ನೋದು ಗೊತ್ತಾಗಬೇಕಲ್ವಾ ?. ಅದಕ್ಕೆ ತನಿಖೆ ಮಾಡಿ ಹೇಳಿ ವರದಿ ಕೊಡಿ ಎಂದು ಹೇಳಿದ್ದೇನೆ ಎಂದಿದ್ದಾರೆ.


















