ಶಿಕ್ಷಕರ ನೇಮಕಾತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಬಿಗ್ ಅಪ್ಡೇಟ್

1 Min Read

ಬೆಂಗಳೂರು: ಶೈಕ್ಷಣಿಕ ವರ್ಷ ಮುಗೀತಾ‌ ಬರ್ತಿದೆ. ಈಗಾಗಲೇ ಪರೀಕ್ಷೆಗೆ ಎಲ್ಲಾ‌ ತಯಾರಿಯನ್ನ ಮಾಡಿಕೊಳ್ತಾ‌ ಇದ್ದಾರೆ. ಮಕ್ಕಳಷ್ಟೇ ಜಾಗೃತಿ ಪೋಷಕರಿಗಿದೆ. ಮಕ್ಕಳ ಭವಿಷ್ಯಕ್ಕೋಸ್ಕರ ಪರೀಕ್ಷೆಯ ತಯಾರಿಯಲ್ಲಿ ಅವರು ಭಾಗಿಯಾಗುತ್ತಾರೆ. ಇದು ಮಕ್ಕಳು ಮತ್ತು ಪೋಷಕರ ಪಾತ್ರವಾದರೆ ಮತ್ತೊಂದು ಕಡೆ ಶಿಕ್ಷಕರಾಗುವುದಕ್ಕೆ ಎಷ್ಟೋ ಜನ ವಿದ್ಯಾಭ್ಯಾಸ ಮುಗಿಸಿ ಕಾಯ್ತಾ ಇರುತ್ತಾರೆ. ಅಂತಹವರಿಗೆ ಸಿಎಂ ಸಿದ್ದರಾಮಯ್ಯ ಅವರು ಗುಡ್ ನ್ಯೂಸ್ ನೀಡಿದ್ದಾರೆ. ಶಿಕ್ಷಕರ ನೇಮಕಾತಿ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದರು. ಈ ವೇಳೆ ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಮತ್ತು ಉನ್ನತ ಶಿಕ್ಷಣದ ಸವಾಲುಗಳ ಕುರಿತು ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಮೌಲ್ಯವರ್ಧನೆಗೆ ಶಿಕ್ಷಕರು ಅತ್ಯಗತ್ಯ. ಪ್ರಸ್ತುತ, ವಿಶ್ವವಿದ್ಯಾಲಯಗಳಲ್ಲಿ ಸುಮಾರು ಶೇ.65ರಷ್ಟು ಬೋಧಕ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಈ ಕೊರತೆಯನ್ನು ನಿಭಾಯಿಸಲು ಸರ್ಕಾರ ಬದ್ಧವಾಗಿದೆ. ಕಳೆದ ವರ್ಷ 2000 ಶಿಕ್ಷಕರನ್ನು ಭರ್ತಿ ಮಾಡಲಾಗಿದೆ.

ಮುಂದೆಯೂ ಹಂತ ಹಂತವಾಗಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಆದಾಗ್ಯೂ, ನೇಮಕಾತಿ ಆಗುವವರೆಗೆ ಕಾಯಲು ಸಾಧ್ಯವಿಲ್ಲದ ಕಾರಣ ಅತಿಥಿ ಉಪನ್ಯಾಸಕರ ಸೇವೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರತಿವರ್ಷ ಸಾಕಷ್ಟು ವಿದ್ಯಾರ್ಥಿಗಳು ಶಿಕ್ಷಕರಾಗಬೇಕೆಂಬ ಕನಸು ಕಂಡು ಅದಕ್ಕೆ ಬೇಕಾದ ಶಿಕ್ಷಣವನ್ನು ಪಡೆದಿರುತ್ತಾರೆ. ನೇಮಕಾತಿ ಪ್ರಕ್ರಿಯೆ ನಡೆಯಲಿಲ್ಲ ಎಂದಾದರೆ ಅವರಿಗೂ ಕಷ್ಟಕರವಾಗುತ್ತದೆ. ಇದೀಗ ನೇಮಕಾತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಮಾಹಿತಿ ನೀಡಿದ್ದು, ಆದಷ್ಟು ಬೇಗ ಎಲ್ಲಾ ಪ್ರಕ್ರಿಯೆಗಳು ಶುರುವಾಗಲಿ ಎಂದೇ ಭವಿಷ್ಯದ ಶಿಕ್ಷಕರು ನಿರೀಕ್ಷೆ ಮಾಡ್ತಿದ್ದಾರೆ.

Share This Article
Enable Notifications OK No thanks