Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅನ್ನ ಕೊಡುವುದು ದೇವರು ಮನುಷ್ಯ ಅಲ್ಲ : ವ್ಯಾಪಾರ ನಿರ್ಬಂಧದ ಬಗ್ಗೆ ಸಿ ಎಂ ಇಬ್ರಾಹಿಂ ಮಾತು

Facebook
Twitter
Telegram
WhatsApp

 

ಬೆಂಗಳೂರು : ಹಲಾಲ್ ಕಟ್ ವಿರೋಧಿಸಿ ಅಭಿಯಾನ ಶುರಿವಾಗಿದೆ. ಈ ಬಗ್ಗೆ ಸಿ ಎಂ ಇಬ್ರಾಹಿಂ ಮಾತನಾಡಿದ್ದು, ಹಲಾಲ್ ಕಟ್ ಜಟ್ಕಾ ವೈಜ್ಞಾನಿಕವಾಗಿ ಪಶುವೈದ್ಯರು ಹೇಳಬೇಕು.

ಈ ಹಲಾಲ್ ಕಟ್ ಮಾಡೋದ್ರಿಂದ ಪ್ರಾಣಿ ದೇಹದಿಂದ ರಕ್ತ ಹೇಗೆ ಹೊರಗೆ ಬರುತ್ತೆ. ಮತ್ತು ಜಟ್ಕಾ ಕಟ್ ಮಾಡಿದರೆ ರಕ್ತ ಪೂರ್ತಿ ಹೊರಗೆ ಬಾರದೆ ಪ್ರಾಣಿಯಲ್ಲೆ ಉಳಿದು ಬಿಡುತ್ತೆ. ಆರೋಗ್ಯಕರವಾದ ಮಟನ್ ಬೇಕೋ ಅಥವಾ ಅನಾರೋಗ್ಯಕರ ಮಟನ್ ಬೇಕೋ ಇದು ಚರ್ಚೆ ನಡೆಯಬೇಕಾದದ್ದು. ಅದನ್ನ ಪಶು ವೈದ್ಯರು ಹೇಳಲಿ. ಇಲ್ಲ ಹಲಾಲ್ ಕಟ್, ಜಟ್ಕಾ ಕಟ್ ಎರಡು ಒಂದೇ ಅಂದರೆ ತಿನ್ನಲಿ ಅದನ್ನೆ ಅವರು. ನಮ್ಮ ಪದ್ಧತಿ ಏನಿದೆ ಅಂದರೆ. ಹಲಾಲ್ ಮಾಡಿದ್ದನ್ನೇ ಮುಂಚೆಯಿಂದಲು ತಿಂದು ಬಂದಿದ್ದಾರೆ.

ಕೇವಲ ಮುಸಲ್ಮಾನರಷ್ಟೆ ಅಲ್ಲ. ಜಗತ್ತಿನಲ್ಲಿ 80% ಜನ ಇವತ್ತಿನ ದಿನ ಹಲಾಲ್ ಕಟ್ ಮಾಡಿದ ಮಾಂಸವನ್ನ ಉಪಯೋಗಿಸ್ತಾರೆ. ವಿಜ್ಞಾನ ಏನು ಹೇಳುತ್ತೆ. ಕೆಟ್ಟ ರಕ್ತವೆಲ್ಲಾ ಪ್ರಾಣಿ ದೇಹದಿಂದ ಹೊರ ಬರುತ್ತೆ. ಹಿಂದುಗಳು ಮಾಂಸದಂಗಡಿ ಇಟ್ಟಿದ್ದಾರೆ. ಅವರು ಕೂಡ ಈಗ ಹಲಾಲ್ ಕಟ್ ಮಾಡಿನೇ ಮಾಡ್ತಿದ್ದಾರೆ. ಇಲ್ಲ ನಾವೂ ಜಟ್ಕಾನೇ ತಿಂತೀವಿ ಅಂದ್ರೆ ನಮ್ದೇನು ಅಭ್ಯಂತರ ಇಲ್ಲ. ಹೆಂಡ ಕುಡಿಯುವವರಿದ್ದಾರೆ, ಸಿಗರೇಟ್ ಆರೋಗ್ಯಕ್ಕೆ ಹಾನಿಕಾರಕ ಎಂದರು ಅದನ್ನ ಸೇದುತ್ತಾರೆ. ನಾನೇನು ಅವರ ಕೈ ಹಿಡಿಯೋದಕ್ಕೆ ಆಗುತ್ತಾ. ನೀವೂ ಸೇದಬೇಡಿ ಅಂತ. ನೀವೂ ವೈದ್ಯರನ್ನೇ ಕೇಳಿ ಹಲಾಲ್ ಬಗ್ಗೆ.

ಇವರಿಗೆ ಎಲೆಕ್ಷನ್ ಬರುತ್ತಿದೆಯಲ್ಲ ಅದಕ್ಕೆ ಇವೆಲ್ಲ. ನಾನು ತೆಂಗಿನಕಾಯಿ, ಸೌತೆ ಕಾಯಿ ಕಟ್ ಮಾಡಿ ಬದುಕೋಲ್ತೀವಿ. ಅನ್ನ ಕೊಡುವುದು ದೇವರು. ಹಿಂದೂ ಧರ್ಮವಾಗಲೀ, ಮುಸ್ಲಿಂ ಧರ್ಮವಾಗಲಿ ದೇವರ ಮೇಲೆ ನಂಬಿಕೆ ಇಟ್ಟಿರುವುದು. ಮನುಷ್ಯ ಅನ್ನ ಕೊಡುತ್ತಾನಾ, ಪರಮಾತ್ಮ ಕೊಡುತ್ತಿರೋದು.

ಸಲಾಂ ಆರತಿ ಬಗ್ಗೆ ಮಾತನಾಡಿದ ಇಬ್ರಾಹಿಂ, ಶೃಂಗೇರಿ ಸ್ವಾಮೀಜಿಯನ್ನ ಕೇಳಿ ಸಲಾಂ ಆರತಿ ಯಾಕಿಟ್ಟಿದ್ದಾರೆ ಎಂಬುದನ್ನ‌. ಆ ರಾಜಾ ಟಿಪ್ಪು ಸುಲ್ತಾನ ಮಾಡಿದ ಉಪಕಾರ ಗೊತ್ತಾ..? ಶೃಂಗೇರಿ ಮಠಕ್ಕೆ ಮಾಡಿದ ಉಪಕಾರಕ್ಕೆ ಇಂದು ಕೂಡ ಟಿಪ್ಪುನನ್ನ ನೆನೆಸಿಕೊಳ್ಳುತ್ತಾರೆ. ಆ ಥರ ಬಾಳು ಬಾಳಿರಿ ಅಂತಾನೆ ನಾವೂ ಹೇಳೋದು ಇಷ್ಟು ದಿನ ಸತ್ತರಲ್ಲ ಅವರ ಹೆಸರಲ್ಲಿ ಎಲ್ಲಾದರೂ ಹೀಗೆ ಆರತಿ‌ ನಡೆಯುತ್ತಾ ಇದೆಯಾ ಎಂದು ಪ್ರಶ್ನಿಸಿದ್ದಾರೆ‌.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

error: Content is protected !!