ಕೇರಳವನ್ನು ಇಷ್ಟು ದಿನಗಳ ಕಾಲ ಕೇರಳ ಎಂದೇ ಕರೆಯಲಾಗಿತ್ತು. ಆದ್ರೆ ಇನ್ಮುಂದೆ ಬೇರೆಯದ್ದೇ ಹೆಸರನ್ನು ಸೂಚಿಸಲಾಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಆ ಹೆಸರನ್ನು ಕೇಂದ್ರಕ್ಕೂ ಶಿಫಾರಸ್ಸು ಮಾಡಿದ್ದಾರೆ.
ಕೇರಳಕ್ಕೆ ಕೇರಳಂ ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ. ಇಂದು ವಿಧಾನಸಭೆಯಲ್ಲೂ ಮಂಡನೆ ಮಾಡಲಾಗಿದೆ. ಇನ್ಮುಂದೆ ದಾಖಲೆಗಳಲ್ಲೂ ಕೇರಳ ಎನ್ನುವ ಬದಲು ಕೇರಳಂ ಮಾಡಲಾಗಿದೆ. ಕಾಂಗ್ರೆಸ್ ಹಾಗೂ ಪ್ರತಿಪಕ್ಷದಿಂದ ಯಾವುದೇ ತಿದ್ದುಪಡಿಗೆ ಮನವಿ ಮಾಡಿಲ್ಲ. ಹೀಗಾಗಿ ಕೇರಳದ ಹೆಸರು ಬದಲಾವಣೆಯೂ ಅವಿರೋಧವಾಗಿ ಆಯ್ಕೆಯಾಗಿದೆ.
ನವೆಂಬರ್ 1, 1956ರಲ್ಲಿ ಕೇರಳ ರಾಜ್ಯವನ್ನು ಭಾಷೆಯ ಆಧಾರದ ಮೇಲೆ ರಚಿಸಲಾಯಿತು. ಕೇರಳ ಮಲೆಯಾಳಂ ಅಲ್ಲ ಕೇರಳಂ ಅನ್ನೋದು ಮಲೆಯಾಳಂ ಭಾಷೆಯಾಗಿದೆ. ನಾವು ಮಲೆಯಾಳಂ ಮಾತನಾಡುವ ಭಾಷಿಗರ ರಾಜ್ಯವನ್ನು ಒಗ್ಗೂಡಿಸಬೇಕಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿಂದಲೂ ಈ ಹೋರಾಟ ನಡೆಯುತ್ತಿದೆ. ಭಾರತದ ಸಂವಿಧಾನದಲ್ಲಿ ನಮ್ಮ ರಾಜ್ಯವನ್ನು ಕೇರಳ ಎಂದು ದಾಖಲಿಸಲಾಗಿದೆ. ಹೀಗಾಗಿ ಕೇರಳ ಎನ್ನುವ ಬದಲು ಕೇರಳಂ ಎಂದು ಬದಲಾಯಿಸಲು ನಿರ್ಧಾರ ಮಾಡಲಾಗಿದೆ ಎಂದು ಕೇರಳ ಸಿಎಂ ಪುಣರಾಯಿ ವಿಜಯನ್ ಸ್ಪಷ್ಟನೆ ನೀಡಿದ್ದಾರೆ.