Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೇರಳಕ್ಕೆ ಹೊಸ ಹೆಸರಿಟ್ಟ ಸಿಎಂ.. ಕೇಂದ್ರಕ್ಕೂ ಶಿಪಾರಸ್ಸು.. ಅಷ್ಟಕ್ಕೂ ಬದಲಾದ ಹೆಸರೇನು..?

---Advertisement---

ಕೇರಳವನ್ನು ಇಷ್ಟು ದಿನಗಳ ಕಾಲ ಕೇರಳ ಎಂದೇ ಕರೆಯಲಾಗಿತ್ತು. ಆದ್ರೆ ಇನ್ಮುಂದೆ ಬೇರೆಯದ್ದೇ ಹೆಸರನ್ನು ಸೂಚಿಸಲಾಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಆ ಹೆಸರನ್ನು ಕೇಂದ್ರಕ್ಕೂ ಶಿಫಾರಸ್ಸು ಮಾಡಿದ್ದಾರೆ.

ಕೇರಳಕ್ಕೆ ಕೇರಳಂ ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ. ಇಂದು ವಿಧಾನಸಭೆಯಲ್ಲೂ ಮಂಡನೆ ಮಾಡಲಾಗಿದೆ. ಇನ್ಮುಂದೆ ದಾಖಲೆಗಳಲ್ಲೂ ಕೇರಳ ಎನ್ನುವ ಬದಲು ಕೇರಳಂ ಮಾಡಲಾಗಿದೆ. ಕಾಂಗ್ರೆಸ್ ಹಾಗೂ ಪ್ರತಿಪಕ್ಷದಿಂದ ಯಾವುದೇ ತಿದ್ದುಪಡಿಗೆ ಮನವಿ ಮಾಡಿಲ್ಲ. ಹೀಗಾಗಿ ಕೇರಳದ ಹೆಸರು ಬದಲಾವಣೆಯೂ ಅವಿರೋಧವಾಗಿ ಆಯ್ಕೆಯಾಗಿದೆ.

ನವೆಂಬರ್ 1, 1956ರಲ್ಲಿ ಕೇರಳ ರಾಜ್ಯವನ್ನು ಭಾಷೆಯ ಆಧಾರದ ಮೇಲೆ ರಚಿಸಲಾಯಿತು. ಕೇರಳ ಮಲೆಯಾಳಂ ಅಲ್ಲ ಕೇರಳಂ ಅನ್ನೋದು ಮಲೆಯಾಳಂ ಭಾಷೆಯಾಗಿದೆ. ನಾವು ಮಲೆಯಾಳಂ ಮಾತನಾಡುವ ಭಾಷಿಗರ ರಾಜ್ಯವನ್ನು ಒಗ್ಗೂಡಿಸಬೇಕಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿಂದಲೂ ಈ ಹೋರಾಟ ನಡೆಯುತ್ತಿದೆ. ಭಾರತದ ಸಂವಿಧಾನದಲ್ಲಿ ನಮ್ಮ ರಾಜ್ಯವನ್ನು ಕೇರಳ ಎಂದು ದಾಖಲಿಸಲಾಗಿದೆ. ಹೀಗಾಗಿ ಕೇರಳ ಎನ್ನುವ ಬದಲು ಕೇರಳಂ ಎಂದು ಬದಲಾಯಿಸಲು ನಿರ್ಧಾರ ಮಾಡಲಾಗಿದೆ ಎಂದು ಕೇರಳ ಸಿಎಂ ಪುಣರಾಯಿ ವಿಜಯನ್ ಸ್ಪಷ್ಟನೆ ನೀಡಿದ್ದಾರೆ.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment