ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಬಸವರಾಜ್ ಬೊಮ್ಮಾಯಿ ಸಿಎಂ ಆಗಿ 100 ದಿನಗಳನ್ನ ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿದ್ದಾರೆ. ಆದ್ರೆ ಅವರು ಇನ್ನಷ್ಟು ದಿನ ಮುಂದುವರೆಯಲ್ಲ ಅನ್ನೋ ಸುದ್ದಿ ಸಾಕಷ್ಟು ಜೋರಾಗಿ ಹಬ್ಬುತ್ತಿದೆ. ಆದ್ರೆ ಈ ಬಗ್ಗೆ ಬಿಜೆಪಿ ಪಕ್ಷದವರು ಅದೆಲ್ಲ ಸುಳ್ಳು ಸುದ್ದಿ ಅಂತಾನೇ ಹೇಳುತ್ತಾ ಬಂದಿದ್ದಾರೆ.
ಸಿಎಂ ಬದಲಾಗ್ತಾರೆ ಅನ್ನೋ ವಿಚಾರ ಹರಿದಾಡ್ತಾ ಇತ್ತು. ಮೊನ್ನೆ ಮೊನ್ನೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೂಡ ಕಾರ್ಯಕ್ರಮವೊಂದರಲ್ಲಿ ಭಾವುಕವಾಗಿ ಸ್ಥಾನ, ಅಧಿಕಾರ ಶಾಶ್ವತ ಅಲ್ಲ ಎಂಬ ಹೇಳಿಕೆಯನ್ನ ನೀಡಿದ್ರು. ಹೀಗಾಗಿ ಸಿಎಂ ಬದಲಾವಣೆ ನಿಶ್ಚಿತ ಎಂಬ ಸುದ್ದಿಗೆ ಮತ್ತಷ್ಟು ಬಲ ನೀಡಿತ್ತು. ಇದೀಗ ಈ ವಿಚಾರದ ಬಗ್ಗೆ ಮಾತನಾಡಿರುವ ನಳೀನ್ ಕುಮಾರ್ ಕಟೀಲ್, ಇದೆಲ್ಲಾ ಸರ್ಕಾರದಲ್ಲಿ ಅರಾಜಕತೆಯನ್ನ ಸೃಷ್ಟಿ ಸಮಯ ಹಬ್ಬಿರುವ ಸುದ್ದಿ ಎಂದಿದ್ದಾರೆ.
ಕಾಂಗ್ರೆಸ್ನವರೇ ಇಂತಹ ಸುದ್ದಿಯನ್ನು ಹುಟ್ಟಿಸಿರಬಹುದು. ಮುಂದಿನ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವವಿರುತ್ತೆ. ಸಿಎಂ ಬೊಮ್ಮಾಯಿಗೆ ಅನಾರೋಗ್ಯ ಇಲ್ಲ, ಕಾಲು ನೋವಿದೆ. ಅದಕ್ಕೆ ಸಿಎಂ ಬೊಮ್ಮಾಯಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗಾಗಿ ಅವರು ವಿದೇಶಕ್ಕೂ ಹೋಗುವುದಿಲ್ಲ ಎಂದಿದ್ದಾರೆ ನಳೀನ್ ಕುಮಾರ್ ಕಟೀಲ್.