Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿಎಂ ಬದಲಾವಣೆ ವಿಚಾರ : ಕಾಂಗ್ರೆಸ್ ನವರೇ ಇಂಥ ಸುದ್ದಿ ಹುಟ್ಟಿಸಿರಬಹುದೆಂದ ಕಟೀಲ್..!

Facebook
Twitter
Telegram
WhatsApp

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಬಸವರಾಜ್ ಬೊಮ್ಮಾಯಿ ಸಿಎಂ ಆಗಿ 100 ದಿನಗಳನ್ನ ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿದ್ದಾರೆ. ಆದ್ರೆ ಅವರು ಇನ್ನಷ್ಟು ದಿನ ಮುಂದುವರೆಯಲ್ಲ ಅನ್ನೋ ಸುದ್ದಿ ಸಾಕಷ್ಟು ಜೋರಾಗಿ ಹಬ್ಬುತ್ತಿದೆ. ಆದ್ರೆ ಈ ಬಗ್ಗೆ ಬಿಜೆಪಿ ಪಕ್ಷದವರು ಅದೆಲ್ಲ ಸುಳ್ಳು ಸುದ್ದಿ ಅಂತಾನೇ ಹೇಳುತ್ತಾ ಬಂದಿದ್ದಾರೆ.

ಸಿಎಂ ಬದಲಾಗ್ತಾರೆ ಅನ್ನೋ ವಿಚಾರ ಹರಿದಾಡ್ತಾ ಇತ್ತು. ಮೊನ್ನೆ ಮೊನ್ನೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೂಡ ಕಾರ್ಯಕ್ರಮವೊಂದರಲ್ಲಿ ಭಾವುಕವಾಗಿ ಸ್ಥಾನ, ಅಧಿಕಾರ ಶಾಶ್ವತ ಅಲ್ಲ ಎಂಬ ಹೇಳಿಕೆಯನ್ನ ನೀಡಿದ್ರು. ಹೀಗಾಗಿ ಸಿಎಂ ಬದಲಾವಣೆ ನಿಶ್ಚಿತ ಎಂಬ ಸುದ್ದಿಗೆ ಮತ್ತಷ್ಟು ಬಲ ನೀಡಿತ್ತು. ಇದೀಗ ಈ ವಿಚಾರದ ಬಗ್ಗೆ ಮಾತನಾಡಿರುವ ನಳೀನ್ ಕುಮಾರ್ ಕಟೀಲ್, ಇದೆಲ್ಲಾ ಸರ್ಕಾರದಲ್ಲಿ ಅರಾಜಕತೆಯನ್ನ ಸೃಷ್ಟಿ ಸಮಯ ಹಬ್ಬಿರುವ ಸುದ್ದಿ ಎಂದಿದ್ದಾರೆ.

ಕಾಂಗ್ರೆಸ್ನವರೇ ಇಂತಹ ಸುದ್ದಿಯನ್ನು ಹುಟ್ಟಿಸಿರಬಹುದು. ಮುಂದಿನ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವವಿರುತ್ತೆ. ಸಿಎಂ ಬೊಮ್ಮಾಯಿಗೆ ಅನಾರೋಗ್ಯ ಇಲ್ಲ, ಕಾಲು ನೋವಿದೆ. ಅದಕ್ಕೆ ಸಿಎಂ ಬೊಮ್ಮಾಯಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗಾಗಿ ಅವರು ವಿದೇಶಕ್ಕೂ ಹೋಗುವುದಿಲ್ಲ ಎಂದಿದ್ದಾರೆ ನಳೀನ್ ಕುಮಾರ್ ಕಟೀಲ್.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿವಮೊಗ್ಗ, ದಾವಣಗೆರೆ ಸೇರಿದಂತೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ..!

ಬೆಂಗಳೂರು: ಯುಗಾದಿಯ ಬಳಿಕ ಅಲ್ಲಲ್ಲಿ ಕೊಂಚ ಮಳೆಯಾಗಿದೆ. ಇನ್ನು ಕೆಲ ಜಿಲ್ಲೆಯಲ್ಲಿ ಜೋರು ಮಳೆಯಾಗಿದೆ. ಆದರೆ ಬಿಸಿಲಿನ ಧಗೆ ಏನು ಕಡಿಮೆಯಾಗಿಲ್ಲ. ಮಳೆ ಇನ್ನಷ್ಟು ಬೇಗ ಬಂದರೆ ಸಾಕು ಎನ್ಜುತ್ತಿದ್ದಾರೆ ಜನ. ಇದರ ನಡುವೆ

ದಾವಣಗೆರೆ ಲೋಕಸಭಾ ಚುನಾವಣೆ | ಐದನೇ ದಿನ, 10  ನಾಮಪತ್ರಗಳ ಸಲ್ಲಿಕೆಯೊಂದಿಗೆ 34 ಕ್ಕೆ ಏರಿಕೆ

  ದಾವಣಗೆರೆ,ಏಪ್ರಿಲ್.18: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದ್ದು ನಾಮಪತ್ರ ಸಲ್ಲಿಕೆಗೆ ಐದನೇ ದಿನವಾದ ಏಪ್ರಿಲ್ 18 ರಂದು 10 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ

ಬಂಜಾರ ಸಮಾಜವನ್ನು ಕಡೆಗಣಿಸಿರುವ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದೇ ನಮ್ಮ ಗುರಿ : ಎಂ.ಸತೀಶ್‍ಕುಮಾರ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552, ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 18 : ಬಂಜಾರ ಸಮಾಜವನ್ನು ಕಡೆಗಣಿಸಿ ರಾಜಕೀಯವಾಗಿ ಪ್ರಾತಿನಿಧ್ಯ ನೀಡದ ಕಾಂಗ್ರೆಸ್ ಸರ್ಕಾರಕ್ಕೆ ಈ

error: Content is protected !!