ಮಠಕ್ಕೆ ಅನುದಾನ ಕೊಡಲು ಕಮೀಷನ್ ಆರೋಪ ಮಾಡಿದ ದಿಂಗಾಲೇಶ್ವರ ಸ್ವಾಮೀಜಿ.. ಸುಳ್ಳು ಎನ್ನಲ್ಲ ಎಂದ ಸಿಎಂ..!

ಬೆಂಗಳೂರು: ಮಾಜಿ ಸಚಿವ ಈಶ್ವರಪ್ಪ ವಿರುದ್ಧ 40% ಕಮೀಷನ್ ಆರೋಪ ಮಾಡಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಕೇಸ್ ಇನ್ನು ತನಿಖೆ ನಡೆಯುತ್ತಿದೆ. ಈ ಬೆನ್ನಲ್ಲೇ ಇದೀಗ ಸ್ವಾಮೀಜಿಗಳು ಸಹ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿ ಶಾಕ್ ನೀಡಿದ್ದಾರೆ.

ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಈ ಆರೋಪ ಮಾಡಿದ್ದು, ಮಠಗಳಿಗೆ ಅನುದಾನ ಬಿಡುಗಡೆ ಮಾಡಬೇಕಾದರೂ 30% ಕಮೀಷನ್ ನೀಡಲೇಬೇಕು ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಈ ಆರೋಪವನ್ನು ಸುಳ್ಳು ಎಂದು ಹೇಳಲ್ಲ. ಆದರೆ ಇದಕ್ಕೆ ಸಂಬಂಧಿಸಿದಂತೆ ಮೊದಲು ದಾಖಲೆಗಳನ್ನು ನೀಡಲಿ. ಈ ವಿಚಾರವನ್ನು ಯಾಕೆ ಹೇಳಿದರು ಎಂಬುದನ್ನು ಅವರೇ ಹೇಳಬೇಕು ಎಂದಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ದಿಂಗಾಲೇಶ್ವರ ಸ್ವಾಮೀಜಿಗಳು ಮಹಾನ್ ತಪಸ್ವಿಗಳು. ಯಾರು, ಯಾರಿಗೆ, ಎಲ್ಲಿ ಕೊಟ್ಟರು ಎಂಬುದನ್ನು ಮೊದಲು ಸಾಕ್ಷಿ ಸಮೇತ ತಿಳಿಸಲಿ. ದಾಖಲೆಗಳನ್ನು ನೀಡಿದರೆ ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಸ್ವಾಮೀಜಿಗಳಿಗೆ ಒಳ್ಳೆಯ ಹಿನ್ನೆಲೆ ಇದೆ. ಅವರ ಮಾತಿಗೆ ಬೆಲೆ ಕೊಡುತ್ತೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!