ಬೆಂಗಳೂರು: ಸಾಮಾಜಿಕ ನ್ಯಾಯ ಅನ್ನೋದು ಭಾಷಣದ ವಸ್ತುವಾಗಿದೆ. ಏನು ಕೊಟ್ಟಿದ್ದೀರಿ ಇಷ್ಟು ಮಾತನಾಡಿದ್ದೀರಲ್ಲ, ಯಾರಿಗೆ ಕೊಟ್ಟಿದ್ದೀರಿ ಇಷ್ಟು ನ್ಯಾಯವನ್ನು. ಒಂದು ವರ್ಗಕ್ಕಾದರೂ ಕೊಟ್ಟಿದ್ದೀರಿ. ಕೇವಲ ಭಾಷಣದ ಸರಕಾಗಿದೆ. ಅವರ ಮುಇಲಭೂತವಾದದ್ದನ್ನು ಒದಗಿಸಿದರೆ ಅವರ ನ್ಯಾಯವನ್ನು ಅವರೇ ಪಡೆದುಕೊಳ್ಳುತ್ತಾರೆ. ಆ ಶಕ್ತಿಯನ್ನು ತುಂಬ ಬೇಕು ಅಷ್ಟೆ. ಮಠಗಳಿಗೆ ಯಾಕೆ ಸಹಾಯ ಮಾಡಿದ್ದೇನೆ ಎಂದರೆ, ಶಕ್ತಿಯ ಜೊತೆಗೆ, ವಿಧ್ಯೆಯ ಜೊತೆಗೆ ಸಂಸ್ಕಾರ ಬೇಕಾಗಿದೆ. ಹೀಗಾಗಿ ಮಠಗಳ ಮೂಲಕ ಸಂಸ್ಕಾರ ಸಿಗಲಿ ಎಂದು ಈ ಕೆಲಸ ಮಾಡಿದ್ದೇನೆ. ಎಲ್ಲಾ ವರ್ಗದವರಿಗೂ ಸರಿ ಸಮಾನವಾಗಿ ನಿಲ್ಲುತ್ತೇವೆ ಎಂದು ಈ ಸಮಯದಲ್ಲಿ ಹೇಳುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಶಾಲೆಗಳ ಕಟ್ಟಡಕ್ಕೆ ವಿಶೇಷ ಅನುದಾನ ನೀಡಿದ್ದೇನೆ. ಶಿಕ್ಷಣ. ಮಕ್ಕಳ ಮತ್ತು ಮಹಿಳೆಯರ ಅಭಿವೃದ್ಧಿ ಕಲ್ಯಾಣ, ಧೀನದಲಿತರಿಗೆ ವಿಶೇಷ ಅನುದಾನ ನೀಡಿದ್ದೇನೆ. ಅವೆಲ್ಲವು ಅನುಷ್ಠಾನವಾಗಲಿದೆ. ಬಜೆಟ್ ಆದ ಮೇಲೆ ನಾನು ಸುಮ್ಮನೆ ಕೂತಿಲ್ಲ. ಇಷ್ಟೆಲ್ಲ ಕಾರ್ಯಕ್ರಮಗಳನ್ನು ನೀಡಿರುವುದು ಎಲ್ಲರು ಸರಿಸಮಾನವಾಗಿ ಬಾಳಬೇಕು ಎಂದು.
ನನ್ನ ಕಲ್ಪನೆಯ ಸರ್ವರಿಗೂ ಸಮಬಾಳು ಎಂಬ ನೀತಿಯಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ. ನನ್ನ ಬಜೆಟ್ ಕೂಡ ಹಾಗೆ ಇದೆ. ನಾನು ಅಧಿಕಾರಕ್ಕೆ ತೆಗೆದುಕೊಂಡು ಹೋದಾಗ 5 ಸಾವಿರ ಕೋಟಿ ರೂಪಾಯಿ ಬರಲು ಕಷ್ಟವಾಗಿತ್ತು. ಆದರೆ ಅದು ಬರಲೇಬೇಕೆಂದು ಆರು ತಿಂಗಳು ಮಾಡಿದ ಪ್ರಯತ್ನದಿಂದ 15 ಸಾವಿರ ಕೋಟಿ ಹಣ ಬಂದಿದೆ. ಇದು ಅಸಮರ್ಥತೆಯಿಂದ ಬರುತ್ತೋ ಅಸಾಮರ್ಥ್ಯದಿಂದ ಬರುತ್ತದೋ ಎಂದು ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ್ದಾರೆ.