Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಕ್ರಮ ಮಸೀದಿ ಕಾಮಗಾರಿ ತೆರವುಗೊಳಿಸಿ : ಪ್ರಮೋದ್ ಮುತಾಲಿಕ್ ಒತ್ತಾಯ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ನ. 29 : ಸಾದಿಕ್ ನಗರದ ಅಕ್ರಮ ಮಸೀದಿ ಕಾಮಗಾರಿ ತೆರವುಗೊಳಿಸುವಂತೆ ಆಗ್ರಹಿಸಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಮೋದ್ ಮುತಾಲಿಕ್ ಅಲ್ಲಿ ಹಿಂದು ಧರ್ಮೀಯರ ಜಾತ್ರೆ, ಉತ್ಸವಗಳ ವೇಳೆ 35ನೇ ವಾರ್ಡ್‍ನ ಶ್ರೀಕೃಷ್ಣ ಮಂಗಳವಾದ್ಯ ಸಮೇತ ಹೋದರೆ ಬಡಾವಣೆಯಲ್ಲಿ 500ಕ್ಕೂ ಹೆಚ್ಚು ಹಿಂದು ತೊಂದರೆ ಕೊಡುತ್ತಾರೆ. ಮಸೀದಿ ಪ್ರಾರ್ಥನಾ ಕುಟುಂಬಗಳಿವೆ. ನಿಯಮ ಮೀರಿ ಅಲ್ಲಿ ಮಂದಿರವೋ, ಬೇರೆಯವರಿಗೆ ತೊಂದರೆ ಮುಸಲ್ಮಾನರು ಮಸೀದಿ ಕಟ್ಟುತ್ತಿದ್ದಾರೆ ಎಂದು ದೂರಿದರು.

ಚಿತ್ರದುರ್ಗ ನಗರದ 35 ನೇ ವಾರ್ಡ್.ಅದು ಸಾಧಿಕ್ ನಗರ ಆಲ್ಲ. ಶ್ರೀ ಕೃಷ್ಣ ನಗರ… ಅಲ್ಲಿ 500 ಕ್ಕೂ ಹೆಚ್ಚು ಹಿಂದೂ ಕುಟುಂಬಗಳಿವೆ.ನಿಯಮ ಮೀರಿ ಅಲ್ಲಿ ಮುಸ್ಲಿಂಮರು ಮಸೀದಿಯನ್ನು ಕಟ್ಟುತ್ತಿದ್ದಾರೆ… ಜಿಲ್ಲಾಧಿಕಾರಿಗಳ ಆದೇಶ ಮೀರಿ ಅಲ್ಲಿ ಮಸೀದಿ ಕಟ್ಟುತ್ತಿರುವುದು ಆದೇಶ ಉಲ್ಲಂಘನೆ ಮಾಡಿದ್ದಾರೆ… ಸಾಧಿಕ್ ನಗರ ಅಂತಾ ಮಾಡಿದ್ದಾರೆ.. ಅದು ಶ್ರೀ ಕೃಷ್ಣ ನಗರ ನಗರಸಭೆಯವರೇ ಬೋರ್ಡ್ ಹಾಕಿದ್ದಾರೆ.ಕೂಡಲೇ ಮಸೀದಿ ಕಟ್ಟಡವನ್ನು ಕೆಡವಿ ಹಾಕಬೇಕು.. ಕಟ್ಟುತ್ತಿರುವವರನ್ನು ಜೈಲಿಗೆ ಹಾಕಬೇಕು.

50 ಮೀಟರ್ ಅಂತರದಲ್ಲಿ, 2 ಮಸೀದಿಗಳು ಇವೆ.. 30 ಕುಟುಂಬಗಳಿಗೆ ಎರಡು ಮಸೀದಿಗಳು ಬೇಕಾ..?ಅಲ್ಲಿ ಹಿಂದೂ ಜಾತ್ರೆ, ಉತ್ಸವ, ವಾದ್ಯ ಹೋದರೆ ತೊಂದರೆ ಕೊಡುತ್ತಾರೆ… ಮಸೀದಿಯೋ.. ಪ್ರಾರ್ಥನಾ ಮಂದಿರವೋ.. ತೊಂದರೆ ಕೊಡುವ ಕಟ್ಟಡವೋ ಸ್ಪಸ್ಟಪಡಿಸಿ.. ಇದನ್ನು ಮುಸ್ಲಿಂ ಮುಖಂಡರು ಗಮನಿಸಬೇಕು.ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಅವರ ಆದೇಶವನ್ನು ಉಲ್ಲಂಘನೆಯನ್ನು ನಾವು ಒಪ್ಪಲ್ಲ.ಕಾಂಗ್ರೆಸ್ ಪಕ್ಷದವರು ಓಟಿಗಾಗಿ ಅವರನ್ನು ಓಲೈಕೆ ಮಾಡುತ್ತಿದ್ದಾರೆ.. ಕಾಂಗ್ರೆಸ್ ನವರು ಬೇಕಾದರೆ ಮಸೀದಿಯನ್ನು ನಿಮ್ಮ ಮನೆಗಳಲ್ಲಿ ಕಟ್ಟಿಕೊಳ್ಳಿ..ಸಾರ್ವಜನಿಕರಿಗೆ ಏಕೆ ತೊಂದರೆ ಕೊಡುತ್ತೀರಾ…? ಅವರು ನಾಳೆ ಅದನ್ನು ಪಾಕಿಸ್ತಾನ ನಗರ.. ಬಾಂಗ್ಲಾ ನಗರ ಅಂದ್ರೆ ಒಪ್ಪಿಕೊಳ್ಳೋಕೆ ಆಗುತ್ತಾ..ಕ್ರಿಸ್‍ಮಸ್‍ನಲ್ಲಿ ಕಾನ್ವೆಂಟ್ 10 ದಿನ ರಜೆ ಕೊಡುತ್ತಾರೆ… ಅಲ್ಲಿ 90% ರಷ್ಟು ಹಿಂದೂ ವಿದ್ಯಾರ್ಥಿಗಳು, ಶಿಕ್ಷಕರು, ಸ್ಟ್ಯಾಫ್ ಇರುತ್ತಾರೆ.ನಮ್ಮ ಮೇಲೆ ಕ್ರಿಶ್ಚಿಯನ್ ಹಬ್ಬದ ರಜೆ ಹೇರಿಕೆ ಏಕೆ..?   ಕಾಂಗ್ರೆಸ್ ಮಾಡುತ್ತಿರುವ ಅನಾಹುತಕ್ಕೆ ನಾವು ಬಲಿಯಾಗುತ್ತಿದ್ದೇವೆ.ಹೀಗೇ ಮಾಡಿದ್ರೆ ಕ್ರಿಶ್ಚಿಯನ್ ಕಾನ್ವೆಂಟ್ ಮುಂದೆ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು.

ಇದಕ್ಕೂ ಮುನ್ನಾ ಜಿಲ್ಲಾಡಳಿತಕ್ಕೆ ಸಾಧಿಕ ನಗರದಲ್ಲಿ ನಿರ್ಮಾಣವಾಗುತ್ತಿರುವ ಅನಧಿಕೃತ ಮಸೀದಿಯನ್ನು ತೆರವು ಗೊಳಿಸುವಂತೆ ಮನವಿ ಸಲ್ಲಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now