Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸ್ವಚ್ಛತೆ ಒಂದು ದಿನದ ಕಾರ್ಯಕ್ರಮವಾಗಬಾರದು : ಹೆಚ್.ಎಂ.ದ್ಯಾಮಣ್ಣ

---Advertisement---

ಚಿತ್ರದುರ್ಗ. ಜೂ.10: ಸ್ವಚ್ಛತೆ ಒಂದು ದಿನದ ಕಾರ್ಯಕ್ರಮ ಆಗಬಾರದು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್.ಎಂ.ದ್ಯಾಮಣ್ಣ ಹೇಳಿದರು.

 

ನಗರದ ಕೆಳಗೋಟೆಯ ಬಿ.ಎಲ್.ಗೌಡ ಲೇಔಟ್‍ನ ಸಹಕಾರ ಭವನದ ಜಿಲ್ಲಾ ಸಹಕಾರ ಯೂನಿಯನ್‍ನಲ್ಲಿ ಮಂಗಳವಾರ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಆರೋಗ್ಯವೇ ಭಾಗ್ಯಯುವಕರ ಸಂಘದ ಆಶ್ರಯದಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ-2025ರ ಅಡಿಯಲ್ಲಿ “ಸ್ವಚ್ಛತಾ ಸೇ ಸಹಕಾರ” (ಸಹಕಾರದಿಂದ ಸ್ವಚ್ಛತೆ) ಅಭಿಯಾನದಲ್ಲಿ ಅವರು ಮಾತನಾಡಿದರು.

ಸ್ವಚ್ಛತೆ ಇದು ಒಂದು ದಿನದ ಕಾರ್ಯಕ್ರಮ ಆಗಬಾರದು. ನಾವು ನಮ್ಮ ಕಛೇರಿ, ಮನೆಗಳ ಸುತ್ತ ಮುತ್ತಲಿನ ಆವರಣವನ್ನು ದಿನ ನಿತ್ಯ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಆರೋಗ್ಯವೇ ಭಾಗ್ಯ ಯುವಕರ ಸಂಘದ ನಿರ್ದೇಶಕ ಕಲ್ಲೇಶ್ ಡಿ.ಮೌರ್ಯ ಅವರು ಸ್ವಚ್ಛತೆ ಅಭಿಯಾನದ ವಿಷಯ ಕುರಿತು ನಮ್ಮ ಪರಿಸರವನ್ನು ಹೇಗೆ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ನಂತರ ಸಹಕಾರ ಭವನಆವರಣದ ಸುತ್ತ ಮುತ್ತಸ್ವಚ್ಛತೆ ಮಾಡಲಾಯಿತು.

ಸ್ವಚ್ಛತೆ ಅಭಿಯಾನ ಕಾರ್ಯಕ್ರಮದಲ್ಲಿ ಶಿವಮೊಗ್ಗ ಹಾಲು ಒಕ್ಕೂಟ ಹಾಗೂ ಜಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಿ.ಬಿ.ಶೇಖರಪ್ಪ, ಸಹಕಾರ ಸಂಘಗಳ ಉಪನಿಬಂಧಕ ಆರ್.ಎಸ್.ದಿಲೀಪ್ ಕುಮಾರ್,  ಸಹಾಯಕ ನಿಬಂಧಕ ಬಾಹುಬಲಿ ಹಂಜೆ,  ಯೂನಿಯನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಜಯಶ್ರೀ ಹುನಗುಂದ, ಜಿಲ್ಲಾ ಸಹಕಾರ ಶಿಕ್ಷಕ ನಾಗರಾಜ್ ಪಾಟೀಲ್, ಆರೋಗ್ಯ ಭಾಗ್ಯ ಯುವಕರ ಸಂಘದ ಅಧ್ಯಕ್ಷ ಪರಶುರಾಮ್, ಉಪಾಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಸಹಕಾರ ಇಲಾಖೆಯ  ಅಧಿಕಾರಿಗಳು, ಸಿಬ್ಬಂದಿಗಳು, ಡಿಸಿಸಿ ಬ್ಯಾಂಕ್,  ಜಿಲ್ಲಾ ಸಹಕಾರ ಯೂನಿಯನ್ ಸಿಬ್ಬಂದಿ ವರ್ಗದವರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...