ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 18 : ಜಿಲ್ಲೆಯ ಪ್ರತಿಷ್ಠಿತ ಸುನಂದಾ ವಿದ್ಯಾಸಂಸ್ಥೆಯ ಜ್ಞಾನ ಪೂರ್ಣ ಪಿಯು ಕಾಲೇಜಿಗೆ ಉಪನ್ಯಾಸಕರು ಬೇಕಾಗಿದ್ದಾರೆ.
ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ಹಾಗೂ ಕಾಮರ್ಸ್ ವಿಭಾಗದ ಅಕೌಂಟೆನ್ಸಿ, ಬುಸಿನೆಸ್ ಸ್ಟಡೀಸ್, ಎಕನಾಮಿಕ್ಸ್ , ಸ್ಟಾಟಿಸ್ಟಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳಿಗೆ ಬೋಧನೆ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಸ್ನಾತಕೋತ್ತರ ಪದವಿ ಜೊತೆಗೆ ಬಿ.ಎಡ್ ವಿದ್ಯಾರ್ಹತೆ ಹೊಂದಿದ್ದು ಕನಿಷ್ಟ 2 ವರ್ಷಗಳ ಅನುಭವ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಆಕರ್ಷಕ ವೇತನ ನೀಡಲಾಗುತ್ತದೆ.
ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು
jnanapoornapucollege@gmail.com
ಈ ಇಮೇಲ್ ವಿಳಾಸಕ್ಕೆ ತಮ್ಮ ಸ್ವ ವಿವರಗಳನ್ನು ಕಳುಹಿಸಬಹುದಾಗಿದೆ. ಇಲ್ಲವಾದರೆ ಖುದ್ದಾಗಿ ಕಾಲೇಜಿಗೆ ಬಂದು ಭೇಟಿಯಾಗಬಹುದು. ಹೆಚ್ಚಿನ ಮಾಹಿತಿಗಾಗಿ 9900743100 ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.


















