ಸುದ್ದಿಒನ್, ಚಿತ್ರದುರ್ಗ, ಜುಲೈ. 21 : ನಗರದ ಹೋಟೆಲ್ ದುರ್ಗದ ಸಿರಿಯಲ್ಲಿ ಇದೇ ಜುಲೈ. 25 ರಂದು (ಶುಕ್ರವಾರ) ಅರ್ಬನ್ ಇಂಡಿಯಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.
ಬೆಂಗಳೂರು ಅಂಗಡಿ ಕೊಸತಂತು ಅವರ ಪ್ಯೂರ್ ಕಂಚಿ, ಮೈಸೂರು ಸಿಲ್ಕ್ ಸೀರೆಗಳು ಮತ್ತು ವಿವಿಧ ರಾಜ್ಯಗಳ ಸೀರೆಗಳು, ಕರಕುಶಲ ಹಾಗೂ ಅಲಂಕಾರಿಕ ವಸ್ತುಗಳು, ಗ್ರಾಮೋದ್ಯೋಗ ಉತ್ಪನ್ನಗಳ ಪ್ರದರ್ಶನ ಹಾಗೂ ಪ್ರಸಿದ್ಧ ಬ್ರಾಂಡ್‌ಗಳ ವಸ್ತುಗಳು ಇಲ್ಲಿ ದೊರೆಯಲಿವೆ.
ವಾರಣಾಸಿಯಲ್ಲಿ ಕೈಮಗ್ಗದಿಂದ ನೇಯ್ದು ತರಲಾದ ಬನಾರಸ್ ರೇಷ್ಮೆ ಹಾಗೂ ಕಾಟನ್ ಸೀರೆಗಳು, ಫ್ಯಾಷನ್ ಡಿಸೈನ್‌ರ ಫ್ಯಾನ್ಸಿ ಸೀರೆ ರೂ. 1,100 ರಿಂದ 28 ಸಾವಿರ ರೂ.ವರೆಗಿನ ಉತ್ಪನ್ನಗಳು ಇಲ್ಲಿ ಲಭ್ಯವಿರುತ್ತದೆ. ಹಾಗೂ ಸಿಲ್ಕ್ ಸೀರೆಗಳು, ಬೆಳ್ಳಿ ಹಾಗೂ ವಿವಿಧ ಹರಳುಗಳಿಂದ ಸಿದ್ದಗೊಂಡ ಆಭರಣಗಳು, ಬೆಂಗಳೂರಿನ ಡಿಸೈನರ್ ಕುರ್ತೀಸ್, ಹತ್ತಿ ಸೂಪರ್ ಗಾತ್ರದ ಬೆಡ್‌ಶೀಟ್‌ಗಳು,ಡಿಸೈನರ್ ಬ್ಯಾಗ್, ಸೌಂದರ್ಯ ವರ್ಧಕ ಸಾಧನೆಗಳು, ಬ್ರಾಂಡೆಡ್ ಮಕ್ಕಳ ಉಡುಪುಗಳು ಸಹ ಇಲ್ಲಿ ದೊರೆಯುತ್ತವೆ. ಕೇವಲ ಒಂದು ದಿನದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವಾಗಿರುವುದರಿಂದ ಈ ಸುವರ್ಣ ಅವಕಾಶವನ್ನು ಚಿತ್ರದುರ್ಗದ ಜನತೆ ಸದುಪಯೋಗ ಪಡಿಸಿಕೊಳ್ಳಲು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











