ಸುದ್ದಿಒನ್, ಚಿತ್ರದುರ್ಗ, ಜುಲೈ. 31 : ನಗರದ ಚಳ್ಳಕೆರೆ ರಸ್ತೆಯ ಮಹೇಶ್ವರಿ ಎಸ್ಟೇಟ್ ವಾಸಿ ಹಾಗೂ ಮಹಾಲಕ್ಷ್ಮಿ ಗ್ರೂಪ್‌ನ ಮಾಲೀಕರಾದ ಜಿ.ಆರ್. ತಿಪ್ಪೇಸ್ವಾಮಿ (75 ವರ್ಷ) ಅವರು ನಿನ್ನೆ ರಾತ್ರಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ನಾಳೆ (ಆಗಸ್ಟ್. 01, ಶನಿವಾರ) ಬೆಳಿಗ್ಗೆ 11.00 ಗಂಟೆಗೆ ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.








