ಆಚಾರ್ಯ ಚಾಣಕ್ಯರ ನೀತಿ ಸೂತ್ರಗಳು ಇಂದಿಗೂ ಪ್ರತಿಯೊಬ್ಬರ ಜೀವನಕ್ಕೂ ದಾರಿದೀಪ. ಕಿರಿಯರಿಂದ ಹಿಡಿದು ಹಿರಿಯರವರೆಗೆ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಯಶಸ್ಸು ಕಾಣಲು ಚಾಣಕ್ಯರ ತತ್ವಗಳನ್ನು ಅಳವಡಿಸಿಕೊಳ್ಳಲು ಬಯಸುತ್ತಾರೆ. ಆದರೆ ಎಷ್ಟೋ ಜನರು ಕಷ್ಟಪಟ್ಟು ಶ್ರಮಿಸಿದರೂ ಜೀವನದಲ್ಲಿ ಅಂದುಕೊಂಡ ಮಟ್ಟಕ್ಕೆ ಮುನ್ನಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕೆ ವ್ಯಕ್ತಿಯಲ್ಲಿರುವ ಕೆಲವು ದೋಷಗಳು ಮತ್ತು ಅಭ್ಯಾಸಗಳೇ ಕಾರಣ ಎನ್ನುತ್ತದೆ ಚಾಣಕ್ಯ ನೀತಿ. ಬದುಕಿನಲ್ಲಿ ಹಿನ್ನಡೆಗೆ ಕಾರಣವಾಗುವ ಪ್ರಮುಖ ಅಂಶಗಳು ಇಲ್ಲಿವೆ.
ಸ್ಪಷ್ಟ ಗುರಿಯ ಕೊರತೆ:
ಯಾವುದೇ ಸ್ಪಷ್ಟ ಗುರಿ ಇಲ್ಲದೆ ಜೀವಿಸಿದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಮೊದಲು ತಾನು ಏನನ್ನು ಸಾಧಿಸಬೇಕು ಎಂಬ ಸ್ಪಷ್ಟ ಕಲ್ಪನೆ ಇರಬೇಕು. ಆ ನಂತರವೇ ಗುರಿಯತ್ತ ದೃಢ ಹೆಜ್ಜೆ ಇಡಬೇಕು.
ಅತಿಯಾದ ಆಲೋಚನೆ (Overthinking):
ಕೆಲಸ ಮಾಡುವುದನ್ನು ಬಿಟ್ಟು ಅತಿಯಾಗಿ ಯೋಚಿಸುತ್ತಾ ಕುಳಿತರೆ ಸಮಯ ವ್ಯರ್ಥವಾಗುತ್ತದೆ. ಯೋಜನೆ ರೂಪಿಸಿದ ತಕ್ಷಣ ಅದನ್ನು ಕಾರ್ಯರೂಪಕ್ಕೆ ತರುವತ್ತ ಗಮನ ನೀಡಬೇಕೇ ಹೊರತು ಸುಮ್ಮನೆ ಯೋಚನೆ ಮಾಡುತ್ತಾ ಸಮಯ ಕಳೆಯಬಾರದು.
ಸಮಯದ ಮೌಲ್ಯ ತಿಳಿಯದಿರುವುದು:
ಸಮಯ ಅತ್ಯಂತ ಅಮೂಲ್ಯವಾದದ್ದು. ಅನುಪಯುಕ್ತ ಹಾಗೂ ಅನಗತ್ಯ ವಿಚಾರಗಳಲ್ಲಿ ಸಮಯವನ್ನು ಪೋಲು ಮಾಡಿದರೆ ಎಂದಿಗೂ ಯಶಸ್ಸು ಸಾಧಿಸಲಾಗದು. ಸಮಯ ಪಾಲನೆ ಮಾಡುವವರೇ ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆ.
ಕೆಟ್ಟ ಸ್ನೇಹ ಮತ್ತು ಸಹವಾಸ:
ದುರ್ಜನರ ಹಾಗೂ ನಿರಾಶಾವಾದಿಗಳ ಸಹವಾಸದಿಂದ ಸದಾ ದೂರವಿರಬೇಕು. ನಿಮ್ಮ ಗುರಿ ಮತ್ತು ಕನಸುಗಳಿಗೆ ಅಡ್ಡಿಯಾಗುವ, ನಿಮ್ಮನ್ನು ದಾರಿ ತಪ್ಪಿಸುವ ಜನರೊಂದಿಗೆ ಸ್ನೇಹ ಬೆಳೆಸಿದರೆ ಪ್ರಗತಿ ಕುಂಠಿತವಾಗುತ್ತದೆ.
ಶಿಸ್ತಿನ ಕೊರತೆ ಮತ್ತು ನಿರ್ಲಕ್ಷ್ಯ:
ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರೂ ಅದರಲ್ಲಿ ನಿಯಮಬದ್ಧತೆ ಮತ್ತು ಶಿಸ್ತು ಇರಬೇಕು. ಕೈಗೊಂಡ ಕೆಲಸವನ್ನು ಅರ್ಧಕ್ಕೇ ಬಿಡುವುದು, ಮುಂದೂಡುವುದು ಅಥವಾ ನಿರ್ಲಕ್ಷ್ಯ ತೋರುವುದು ವೈಫಲ್ಯಕ್ಕೆ ನೇರ ಕಾರಣವಾಗುತ್ತದೆ.













